ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮದಡಿಯಲ್ಲಿ ಇಂದು ಜಿಲ್ಲಾಧಿಕಾರಿ ಚಳ್ಳಕೆರೆ ತಾಲೂಕಿನ ಎನ್ ಮಹದೇವಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಲ್ಲಾ ತಾಲೂಕುಗಳಲ್ಲಿ ಕೂಡ ಆಯಾ ತಾಲೂಕಿನ ತಹಶೀಲ್ದಾರ್ ಅವರು ಗ್ರಾಮ ವಾಸ್ತವ್ಯ ಮಾಡಿದ್ದು, ಚಿತ್ರದುರ್ಗ ತಹಶೀಲ್ದಾರ್ ಸತ್ಯ ನಾರಾಯಣ ಕೂಡ ತಾಲೂಕಿನ ಕಾಟೀಹಳ್ಳಿಯಲ್ಲಿ ಗ್ರಾಮವಾಸ್ತವ್ಯ ಹಾಗೂ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು,ಗ್ರಾಮದಲ್ಲಿ ಪ್ರಮುಖವಾಗಿ ತಹಶೀಲ್ದಾರ್ ಅವರಿಗೆ ಎದುರಾದ ಪ್ರಶ್ನೆ ಎಂದರೆ ರೈಲ್ವೇ ಅಂಡರ್ ಪಾಸ್ ನ್ನು ಮೊದಲಿನಂತೆ ಮಾಡಿಕೊಡಬೇಕು, ಗ್ರಾಮಸ್ಥರು ಓಡಾಡುವುದೇ ಕಷ್ಟವಾಗಿದೆ, ಮಕ್ಕಳು ಭಯಭೀತರಾಗಿ ಓಡಾಡುವಂತ ಸ್ಥಿತಿ ನಿರ್ಮಾಣವಾಗಿದೆ ಅದನ್ನು ಕೂಡಲೇ ದುರಸ್ತಿ ಮಾಡಿಸಿಕೊಡಬೇಕು ಎಂದು ಬೇಡಿಕೆಯನ್ನು ಇಟ್ಟದರು. ಇದೇ ಸಮಯದಲ್ಲಿ ಮಾತನಾಡಿದ ತಹಶೀಲ್ದಾರ್ ಸತ್ಯನಾರಾಯಣ ಅವರು, ಕೂಡ ರೈಲ್ವೆ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸುವುದಾಗಿ ಭರವಸೆಯನ್ನು ನೀಡಿದರು. ಇದೇ ಸಮಯದಲ್ಲಿ ಗ್ರಾಮದ ಸಮಾಜಿಕ ಭದ್ರತೆಯಡಿ 13 ಜನರಿಗೆ ವೃದ್ಯಾಪ್ಯ ವೇತನದ ಮಂಜೂರಾತಿ ಪತ್ರ ನೀಡಲಾಯಿತು, ಒಂದು ಬಿಪಿಎಲ್ ಕಾರ್ಡ್ ನ್ನು ಫಲಾನುಭವಿ ಯೊಬ್ಬರಿಗೆ ನೀಡಿದ್ದು, ಪೌತಿ ಖಾತೆಯಲ್ಲಿ 5 ಅರ್ಜಿಗಳು ಬಂದಿದ್ದು, ಅದರಲ್ಲಿ 3 ಅಕ್ಸೆಪ್ಟ್ ಆಗಿದ್ದು, 2 ಅರ್ಜಿಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.





