ಏಷ್ಯಾಯನ್ ಆಥ್ಲೇಟಿಕ್‌ನಲ್ಲಿ ಪದಕ ಪಡೆದ ಚಳ್ಳಕೆರೆ ಹುಡುಗಿ ರಾಧಳಗೆ : ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಸನ್ಮಾನ
ಬಡತನದಲ್ಲಿ ಅವಿರತ ಸಾಧನೆ ಮಾಡಿದ ಕುಮಾರಿ ರಾಧ ಇಡೀ ದೇಶಕ್ಕೆ ಕೀರ್ತಿ ತಂದಿದ್ದಾರೆ ಅವರು ಈಗೀನ ಯುವ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ಗಿರಿಯಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಆಡಳಿತ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು, ಇಂದಿನ ಮಕ್ಕಳು ಇಂತಹ ಕ್ರೀಡೆಗಳಿಂದ ನಮ್ಮ ಗ್ರಾಮದ, ನಮ್ಮ ರಾಜ್ಯದ, ಹಾಗೂ ದೇಶದ ಕೀರ್ತಿಯನ್ನು ಹೆಚ್ಚಿಸಬೇಕು ಹುಟ್ಟು ಅಂಗವಿಕಲತೆಯನ್ನು ಹೊಂದಿದ್ದರು ಕೂಡ ಇವರಿಗೆ ಯಾವುದೇ ಅಂಗ ವೈಫಲ್ಯ ಅಡ್ಡಿಯಾಗದೇ, ಏಷ್ಯಾಯನ್ ಆಥ್ಲೇಟಿಕ್ ನಲ್ಲಿ ಪದಕ ಪಡೆದಿರುವುದು ರೋಚಕದ ಸಂಗತಿ ಇಂದು ಇಡೀ ದೇಶವೇ ಮೆಚ್ಚುವಂತ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು.
ಇಂತಹ ಪ್ರತಿಭೆವುಳ್ಳ ಕುಮಾರಿ ರಾಧ ಬಡತನದಲ್ಲಿ ಹುಟ್ಟಿದರೂ ಯಾವುದೇ ಬಡತನ ಇವರ ಸಾಧನೆಗೆ ಅಡ್ಡಿಯಾಗಲಿಲ್ಲ, ಇವರ ತರಬೇತಿದಾರರಾದ ರಾಹುಲ್ ಅವರು ನಮ್ಮ ತಾಲೂಕಿಗೆ ಕೊಟ್ಟ ಕೊಡುಗೆ, ಇಂತಹ ಪ್ರತಿಭೆಗಳು ನಿಮ್ಮಿಂದ ಹೊರಬರಬೇಕು ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇನ್ನೂ ಪ್ರಾಶುಂಪಾಲರಾದ ಮಂಜನಾಯ್ಕ್ ಮಾತನಾಡಿ, ಇಡೀ ದೇಶವೇ ಮೆಚ್ಚುವ ಇವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರು ಶುಭಾ ಹಾರೈಸಿರುವುದು ಸಂತಸ ತಂದಿದೆ, ಬಯಲು ಸೀಮೆಯ ಗ್ರಾಮೀಣ ಪ್ರದೇಶದಿಂದ ಬಡ ಕುಟುಂಬದ ಸಾಮಾನ್ಯ ಹುಡುಗಿ ಇಂದು ಹಲವಾರು ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ನಮ್ಮ ತಾಲೂಕಿಗೆ ಕೀರ್ತಿ ತಂದಿರುವುದು ಸಂಸತ ತಂದಿದೆ ಎಂದರು.
ಇದೇ ಸಂಧರ್ಭದಲ್ಲಿ ಉಪನ್ಯಾಸಕ ವರ್ಗ, ಪೋಷಕರು, ಹಾಗೂ ಕಂದಾಯ ನಿರೀಕ್ಷಕ ಲಿಂಗೇಗೌಡ, ವಿಎ.ಪ್ರಕಾಶ್ ಇತರರು ಪಾಲ್ಗೊಂಡಿದ್ದರು.