ಮುರುಘಾಶ್ರೀ ಮೇಲೆ ಫೋಕ್ಸೋ ಪ್ರಕರಣ ದಾಖಲಿಸಲು ಅಮಿಷ ಒಡ್ಡಿದ್ದರಾ ಎಸ್ ಕೆ ಬಸವರಾಜನ್ ? ಆಡಿಯೋ ವೈರಲ್

ದೇಶ

  1.  
  2.  

ಮುರುಘಾ ಮಠದಲ್ಲಿ ಎರಡನೇ ಪೋಕ್ಸೋ ಪ್ರಕರಣ ದಾಖಲಾದ ನಂತರ ಒಂದು ಆಡಿಯೋ ವೈರಲ್ ಆಗಿದ್ದು, ಆಡಿಯೋದಲ್ಲಿ ಕುಮ್ಮಕ್ಕು ಕೊಟ್ಟಿದ್ದಾರೆ ಎಂದು ಈಗಿನ ಪ್ರಭಾರ ಪೀಠಾಧ್ಯಕ್ಷರಾದ ಬಸವಪ್ರಭು ಸ್ವಾಮೀಜಿ ಅವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು,ಈ ಆಡಿಯೋ ಸಂಬಂಧ ಮಾತನಾಡಿರುವ ಬಸವರಾಜೇಂದ್ರ ಎನ್ನುವ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಎರಡನೇ ಪೋಕ್ಸೋ ಪ್ರಕರಣ ದೂರುದಾರರಾದ ಗಾಯಿತ್ರಿ ಅವರು ತಮ್ಮ ಮಗಳಿಗೆ ಸುಳ್ಳು ಹೇಳಿಕೆ ನೀಡುವಂತೆ ಬಸವರಾಜೇಂದ್ರ ಅವರನ್ನು ಮನವೊಲಿ ಸುವಂತೆ ತಿಳಿಸಿದ್ದರು, ಆದರೆ ಆ ಬಾಲಕಿ ಒಪ್ಪಿರಲಿಲ್ಲ, ಆದರೂ ಕೂಡ ಸ್ವಾಮೀಜಿ ವಿರುದ್ಧ ದೂರು ದಾಖಲಿಸಲಾಗಿದೆ. ಆಗ ಆ ವ್ಯಕ್ತಿಯನ್ನು ವಿಚಾರಣೆ ಮಾಡಿದಾಗ ಅವರು ಬಾಲಕಿಯ ತಾಯಿಯ ಕೋರಿಕೆ ಮೇರೆಗೆ ಬಾಲಕಿಗೆ ಫೋನ್ ಮಾಡಿ ಮಾತ‌ನಾಡಿದ್ದೇ ಎಂದುಒಪ್ಪಿಕೊಂಡಿದ್ದಾರೆ. ಎಂದು ಎಸ್ಪಿ ಕೆ. ಪರುಶುರಾಮ್ ಹೇಳಿದರು. ಸುಳ್ಳು ಹೇಳಿದರೆ, ಮಕ್ಕಳ ವಿದ್ಯಾಭ್ಯಾಸ, ಮನೆ ಮಾಡಿಕೊಡುವುದು ಹಾಗೂ ಅವರ ಜೀವನಕ್ಕೆ ಅನುಕೂಲವಾಗುವಂತ ಸೌಲಭ್ಯ ಮಾಡಿಕೊಡುವ ಕೆಲಸವನ್ನುಮಾಡಿಕೊಡುತ್ತಾರೆ, ಎಂದು ಗಾಯತ್ರಿಗೆ ಬಸವರಾಜನ್ ಅವರು ತಿಳಿಸಿದ್ದಾರೆ ಎಂದು ಹೇಳಿರುವ ಮೇರೆಗೆ ಬಸವರಾಜೇಂದ್ರ ಮತ್ತು ಎಸ್ ಕೆ ಬಸವರಾಜನ್ ಅವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನಾಲ್ಕು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದು, ವಿಚಾರಣೆ ಹಾಗೂ ತನಿಖೆ ಮುಂದುವರೆದಿದೆ ಎಂದು ಹೇಳಿದರು.ಮುರುಘಾ ಮಠದಲ್ಲಿ ದಸರಾ ಸಮಯದಲ್ಲಿ ಫೋಟೋ ಕಳುವು ಪ್ರಕರಣದಲ್ಲಿ ಮೂರು ಜನರನ್ನು ಬಂಧಿಸಿದ್ದೇವೆ ಎಂದು ಎಸ್ಪಿ ಕೆ.ಪರುಶುರಾಮ್ ಹೇಳಿದರು.ಬಂಧಿತರು ಮೋಹನ್ ಮೂರ್ತಿ, ಶಿವಾನಂದಸ್ವಾಮಿ ಹಾಗೂ ಶ್ರೀನಿವಾಸ್ ನಾಯಕ ಎಂದಾಗಿದೆ. ಅವರನ್ನು ವಿಚಾರಣೆ ಮಾಡಿದಾಗ ಅವರು ಕೂಡ ಒಂದಷ್ಟು ಮಾಹಿತಿ ನೀಡಿದ್ದು, ಅದರ ಆಧಾರದ ಮೇಲೆ ತನಿಖೆ ಮಾಡುತ್ತಿದ್ದೇವೆ. ಮುರುಘಾ ಮಠದಲ್ಲಿ ಎರಡು ಪೋಕ್ಸೋ ಮತ್ತು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ತನಿಖೆಯು ನಡೆಯುತ್ತಿದೆ. ಆ ಪ್ರಕರಣಗಳು ಬೇರೆ ಮತ್ತು ಈ ಪ್ರಕರಣಗಳು ಬೇರೆಯಾಗಿದ್ದು,ಮೊದಲನೇ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಆ ಪ್ರಕರಣವನ್ನುಪ್ರತ್ಯೇಕವಾಗಿ ಪ್ರಾಮಾಣಿಕವಾಗಿ ತನಿಖೆ ಮಾಡುತ್ತೇವೆ, ಎರಡೂ ಒಂದೆ ಎಂದು ನೋಡುವುದಿಲ್ಲ, ಎರಡನೇ ಪ್ರಕರಣದಲ್ಲೂ ಕೂಡ ತನಿಖೆ ಮಾಡುತ್ತೇವೆ ಸತ್ಯವನ್ನು ಪತ್ತೆ ಮಾಡಿ ಚಾರ್ಜ್ ಶೀಟ್ ಸಲ್ಲಿಸುತ್ತೇವೆ ಎಂದು ಹೇಳಿದರು.

 

 

Leave a Reply

Your email address will not be published. Required fields are marked *