ಕಳೆದ 89 ವರ್ಷಗಳ ನಂತರ ತುಂಬಿ ಕೋಡಿ ಬಿದ್ದಿರುವ ಹಿರಿಯೂರಿನ ಐತಿಹಾಸಿಕ ಜಲಾಶಯ, ವಾಣಿ ವಿಲಾಸ ಜಲಾಶಯಕ್ಕೆ ಭಾಗೀನ ಬಿಡುವ ಕಾರ್ಯಕ್ರಮವು ಮಂಗಳವಾರ ನಡೆಯಲಿದೆ. ಇದಕ್ಕೆ ಸಿಎಂ ಆಗಮಿಸಿ ಭಾಗೀನ ಸಮರ್ಪಿಸಲಿದ್ದಾರೆ. ಇಂತಹ ದೊಡ್ಡ ಕಾರ್ಯಕ್ರಮವು ಇದೀಗ ಎರಡೂ ಕ್ಷೇತ್ರಗಳ ಬಿಜೆಪಿ ಶಾಸಕರ ಮುನಿಸಿಗೆ ಕಾರಣವಾಗಿದೆ. ವಿವಾದಕ್ಕೀಡಾಗಿದೆ.
ವಾಣಿ ವಿಲಾಸ ಜಲಾಶಯವು ಹಿರಿಯೂರಿನ ವಾಣಿ ವಿಲಾಸಪುರ ಗ್ರಾಮದಲ್ಲಿದೆ. ಅದರಂತೆ ಎಲ್ಲಿ ಜಲಾಶಯವಿದೆಯೋ ಕೋಡಿ ಎಲ್ಲಿ ಬಿದ್ದಿರುತ್ತದೆಯೋ ಅಲ್ಲಿ ಭಾಗೀನ ನೀಡಬೇಕು ಆದರೆ ಈ ಭಾಗೀನ ನೀಡುವ ವಿಚಾರವೇ ಹಿರಿಯೂರು ಮತ್ತು ಹೊಸದುರ್ಗ ಶಾಸಕರುಗಳ ವೈ ಮನಸ್ಸಿಗೆ ಕಾರಣವಾಗಿದೆ. ಒಂದು ಹೊಸದುರ್ಗದಲ್ಲಿ ನದಿಯು ವೇದಾವತಿ ಹರಿಯುತ್ತದೆ. ಇದರಿಂದ ಅಲ್ಲಿಯೇ ಭಾಗೀನ ಕಾರ್ಯಕ್ರಮ ಮಾಡಬೇಕು ಎಂದು ಹೊಸದುರ್ಗ ಶಾಸಕ ಗೂಳಿ ಹಟ್ಟಿ ಡಿ ಶೇಖರ್ ಪಟ್ಟು ಹಿಡಿದರೆ ಇತ್ತ ಮಾರೀಕಣಿವೆ ಅಥವ ವಾಣಿ ವಿಲಾಸ ಜಲಾಶಯವು ಹಿರಿಯೂರು ತಾಲೂಕಿನಲ್ಲಿದ್ದು, ಇಲ್ಲಿಯೇ ಕಾರ್ಯಕ್ರಮವನ್ನು ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.ಇದು ತಾರಕಕ್ಕೇರಿದ ಹಿನ್ನೆಲೆಯಲ್ಲಿ ವಾಣಿವಿಲಾಸಪುರ ಗ್ರಾಮದಲ್ಲಿ ನಡೆಯಬೇಕಿದ್ದ ಇಡೀ ಕಾರ್ಯಕ್ರಮವೇ ರದ್ದಾಗಿದ್ದು, ಆ ಕಾರ್ಯಕ್ರಮವನ್ನು ಹಿರಿಯೂರಿನ ನೆಹರು ಮೈದಾನದಲ್ಲಿ ಇದೇ 22 ರಂದು ನಡೆಯಲಿದೆ. ಇಬ್ಬರು ಶಾಸಕರ ನಡುವಿನ ಕಾರ್ಯಕ್ರಮ ಆಯೋಜನೆಯ ವೈಮನಸ್ಸು ಇಂದು ಇಬ್ಬರಿಗೆ ತಪ್ಪಿ ಮೂರನೆಯವನಿಗೆ ಲಾಭ ಎನ್ನುವಂತಾಗಿದೆ.





