ಸಾಮಾಜಿಕ ನ್ಯಾಯದಿಂದ ವಂಚಿತರಾದ ಸಮೂದಾಯಗಳನ್ನು ಒಂದೆಡೆ ಸೇರಿಸಿ ಅವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಈ ಐಕ್ಯತಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದರು.
ಅವರು ಇಂದು ರಾಜ್ಯ ಮಟ್ಟದ ಎಸ್ಸಿ ಎಸ್ಟಿ ಸಮುದಾಯಗಳ ಐಕ್ಯತಾ ಸಮಾವೇಶದ ಪೆಂಡಾಲ್ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.

ಇದುವರೆಗೂ ಕಾಂಗ್ರೆಸ್ ಪಕ್ಷ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿದೆ, ಇಂದಿರಾ ಗಾಂಧಿಯವರ ಕಾಲದಲ್ಲಿ ಅವರಿಗೆ ಆರ್ಥಿಕ ಸ್ವಾತಂತ್ರ್ಯ ನೀಡಲಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಕಾರಾಣಾಂತರಗಳಿಂದ ಯಾವ್ಯಾವುದೋ ಪಕ್ಷಗಳು ಅಧಿಕಾರಕ್ಕೆ ಬಂದು, ಮಂಕು ಬೂದಿಯನ್ನು ಎರಚಿ ಅವರನ್ನು ಅಪಹರಿಸಿಕೊಂಡಿದ್ದಾರೆ. ಮತ್ತೆ ಇವರನ್ನು ಬಿಡುಗಡೆಗೊಳಿಸಿ ಕಾಂಗ್ರೆಸ್ಸಿನ ಸಂಪ್ರದಾಯಿಕ ರೀತಿಯಲ್ಲಿದ್ದ ಇವರನ್ನು ಹಾಗೆಯೇ ಉಳಿಸಿಕೊಳ್ಳುವ ದೃಷ್ಠಿಯಿಂದ ಹಾಗೂ ಅವರನ್ನು ಕಾಂಗ್ರೆಸಿನ ಕಡೆಗೆ ಸೆಳೆಯಬೇಕು ಎನ್ನುವ ದೃಷ್ಟಿಯಿಂದ ಈ ಐಕ್ಯತಾ ಸಾಮಾವೇಶ ಮಾಡುತ್ತಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಈ ವರ್ಗಕ್ಕೆ ಈ ಪಕ್ಷ ಅನಿವಾರ್ಯವಾಗಿದೆ. ಯಾವುದೇ ಕಾರಣಕ್ಕೂ ಈ ವರ್ಗದವರು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಮತ ಚಲಾಯಿಸಬಾರದು, ಇದಕ್ಕೆ ಬೇಕಾಗಿರುವ ಮಾರ್ಗದರ್ಶನ ಮತ್ತು ಜಾಗೃತಿಯನ್ನು ಮೂಢಿಸುವ ಉದ್ದೇಶ ಈ ಸಮಾವೇಶದ್ದಾಗಿದೆ. ಸಾಮಾಜಿಕ ನ್ಯಾಯದ ಆಂಶಗಳನ್ನು ಆಶಯಗಳನ್ನು ತೆಗೆಯಲಾಗುತ್ತಿದೆ. ಇದರ ಜೊತೆಗೆ ಮೀಸಲಾತಿಯನ್ನು ಅಸ್ಪೃಶ್ಯರು, ಸಮಾಜದಿಂದ ತುಳಿತಕ್ಕೊಳಗಾಗಿದ್ದಾರೆ, ಕಡೆಗಣಿಸಲ್ಪಟ್ಟವರಿದ್ದಾರೆ, ಇಂಥವರನ್ನು ಮುಖ್ಯ ವಾಹಿನಿಗೆ ತರಬೇಕು ಎಂದು ನೀಡಲಾಗಿತ್ತು. ಇಂತಹ ಮೀಸಲಾತಿಗೂ ಕೂಡ ಸಂಚಕಾರ ಬಂದಿದೆ, ಮೀಸಲಾತಿ ಕಸಿದುಕೊಳ್ಳುವಂತ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ಅಸ್ಪೃಶ್ಯರು, ಹಿಂದುಳಿದ ಜನರು ಉತ್ತಮ ಸ್ಥಾನಗಳಿಗೆ ಬರಬಾರದು ಎಂದು ಬಿಜೆಪಿ ಉದ್ದೇಶವಾಗಿದೆ. ಆದರೆ ಬಡವರ ದಲಿತರ ಕೃಷಿಕರ ಪರವಾಗಿರುವ ಪಕ್ಷ ಹಾಗೂ ಅವರ ಏಳಿಗಾಗಿ ಇರುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷ ಅದರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಅವರು ಹೇಳಿದರು.
ಈ ಸಮಯದಲ್ಲಿ ಮಾಜಿ ಶಾಸಕ ಎಸ್ ಕೆ ಬಸವರಾಜನ್, ಮಾಜಿ ಎಂಎಲ್ ಸಿ ರಘು ಆಚಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ. ತಾಜ್ ಪೀರ್ ಎಸ್ಟಿ ಸೆಲ್ ಅಧ್ಯಕ್ಷ ಅಂಜಿನಪ್ಪ, ಎಸ್ಸಿ ಸೆಲ್ ಅಧ್ಯಕ್ಷ ಪ್ರಕಾಶ್ ಇನ್ನಿತರೇ ಕಾಂಗ್ರೆಸ್ ಮುಖಂಡರು ಇದ್ದರು





