ಕುಡಿಯುವ ನೀರಿನ ಬಿಂದಿಗೆ ಮುಟ್ಟಿದನೆಂದು ಖಾಸಗಿ ಶಾಲಾ ಶಿಕ್ಷಕನಿಂದ ತೀವ್ರವಾಗಿ ಥಳಿತಕ್ಕೊಳಗಾಗಿದ್ದ 9 ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತ ಪಟ್ಟ ಘಟನೆ ನಡೆದಿದೆ. ರಾಜಸ್ಥಾನದ ಲಾಜೋರ್ ಜಿಲ್ಲೆಯ ಸುರಾನ ಗ್ರಾಮದ ಖಾಸಗಿ ಶಾಲೆಯಲ್ಲಿ ಈ ಘಟನೆಯು ಜುಲೈ 20 ರಂದು ನಡೆದಿತ್ತು. ಖಾಸಗಿ ಶಾಲೆಯಲ್ಲಿ ನೀರನ್ನು ಕುಡಿಯಲು ಇಟ್ಟಿದ್ದ ಬಿಂದಿಗೆಯನ್ನು ಬಾಲಕ ಮುಟ್ಟಿದ್ದು, ಶಿಕ್ಷಕನಿಗೆ ಕೋಪ ತರಿಸಿದ್ದು, ಶಿಕ್ಷಕ ಬಾಲಕನಿಗೆ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಶನಿವಾರ ಮೃತಪಟ್ಟಿದ್ದಾನೆ.

ಶಿಕ್ಷಣ ಇಲಾಖೆಯೂ ತನಿಖೆಯನ್ನು ಆರಂಭಿಸಿದೆ. ರಾಜಸ್ಥಾನದ ಎಸ್ಸಿ ಆಯೋಗದ ಅಧ್ಯಕ್ಷ ಖಿಲಾಡಿ ಲಾಲ್ ಬೈರ್ವ ಅವರು ತ್ವರಿತ ತನಿಖೆಗೆ ಆದೇಶಿಸಿದ್ದಾರೆ. ಬಾಲಕ ತೀವ್ರ ಥಳಿತಕ್ಕೊಳಗಾಗಲು ನೀರಿನ ಬಿಂದಿಗೆಯನ್ನು ಮುಟ್ಟಿದ್ದೆ ಕಾರಣವಾ ಎಂದು ತನಿಖೆ ನಡೆಸಬೇಕಾಗಿದೆ ಎಂದು ಜಾಲೋರ್ ನ ಎಸ್ಪಿ ಹರ್ಷವರ್ಧನ್ ಅಗರ್ ವಾಲ್ ಹೇಳಿದ್ದಾರೆ.





