ಚಿತ್ರದುರ್ಗದ ಹೊಸದುರ್ಗದಲ್ಲಿ ಹಾಡು ಹಗಲೇ ಕತ್ತು ಕೋಯ್ದು ಬರ್ಬರವಾಗಿ ಜೋಡಿ ಕೊಲೆಯನ್ನು ದುಷ್ಕರ್ಮಿಗಳು ಮಾಡಿದ್ದಾರೆ.
ಹೊಸದುರ್ಗ ಪಟ್ಟಣದ ವಿನಾಯಕ ಬಡಾವಣೆಯ ಮನೆಯಲ್ಲಿ ಹೋಲ್ ಸೇಲ್ ಉಪ್ಪಿನ ಕಾಯಿ ವ್ಯಾಪಾರ ಮಾಡುತ್ತಿದ್ದ ದಂಪತಿಗಳನ್ನು ಹಾಡು ಹಗಲೆ ಇಂದು ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದು, ದಂಪತಿಗಳನ್ನು ಪ್ರಭಾಕರ್ ಶೆಟ್ಟರು, 72 ಹಾಗು ಲಕ್ಷ್ಮಿ 65 ಎಂದು ಗುರುತಿಸಲಾಗಿದೆ. ಕೊಲೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ, ಹೊಸದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ





