ನಾಯಕನಹಟ್ಟಿ ಹೋಬಳಿಯ ಕುದಾಪುರ ಗ್ರಾಮದ ಸರ್ವೆ ನಂಬರ್ 112 ರಲ್ಲಿನ ಸ್ಮಶಾನದ ವಿವಾದ ಅಂತೂ ಅಂತ್ಯ ಕಂಡಿತು.ಮೇಲಿನ ಸರ್ವೇ ನಂಬರ್ ನಲ್ಲಿ ಎರಡು ಎಕರೆ ಜಮೀನನ್ನು ಸ್ಮಶಾನಕ್ಕೋಸ್ಕರ ಮೀಸಲಿಟ್ಟಿದ್ದು ಈ ಜಮೀನನ್ನು ಒತ್ತುವರಿ ಮಾಡಿ ಕೃಷಿಗೆ ಬಳಸಿಕೊಂಡಿದ್ದು ಇದನ್ನು ಬಿಡಿಸಿ ಹದ್ದುಬಸ್ತು ಮಾಡಿಕೊಡುವಂತೆ ನೂರು ಜನ ಗ್ರಾಮಸ್ಥರು ತಾಲೂಕು ಕಚರಿಗೆ ಭೇಟಿ ನೀಡಿ ತಹಸಿಲ್ದಾರ್ ಅವರನ್ನು ಆಗ್ರಹಿಸಿದ್ದರು. ಇವರ ಮನವಿಗೆ ಸ್ಪಂದಿಸಿದ ತಹಾಶೀಲ್ದಾರ್ ರಘುಮೂರ್ತಿ ಸರ್ವೆ ಸಿಬ್ಬಂದಿ ಕಂದಾಯ ಇಲಾಖೆಯ ರಾಜ್ಯಶ್ವ ನಿರೀಕ್ಷಕರು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ವಿವಾದಿತ ಪ್ರದೇಶಕ್ಕೆ ಭೇಟಿ ನೀಡಿ ಅಳತೆ ಮಾಡಿಸಿ ಒತ್ತುವರಿದಾರರನ್ನು ಕರೆಸಿ ಮನುಷ್ಯನ ಕೊನೆಯ ದಿನಗಳಲ್ಲಿ ಅವನ ಸದ್ಗತಿಗೆ ಅವಶ್ಯವಾಗಿ ಸ್ಮಶಾನಕ್ಕೆ ಜಾಗ ಬೇಕಾಗುತ್ತದೆ ಇಂತಹ ಜಮೀನನ್ನು ಕೂಡ ಒತ್ತುವರಿ ಮಾಡಿ ಮನುಷ್ಯರು ಸ್ವಾರ್ಥಿಗಳಾಗುವುದು ತುಂಬಾ ವಿಷಾದ ಸಂಗತಿ ಬದುಕುವುದು ಮೂರೇ ದಿನ ಆದರೂ ಕೂಡ ಆದರ್ಶವಾಗಿ ಬದುಕಬೇಕು ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಸಮಾಜದಲ್ಲಿ ಅದೆಷ್ಟೋ ಜನರ ಆದರ್ಶದ ಬದುಕು ನಮ್ಮ ಮುಂದಿದೆ ಹೀಗಿದ್ದರೂ ಈ ಸ್ಮಶಾನದ ಜಮೀನನ್ನು ಒತ್ತುವರಿ ಮಾಡುವುದು ಶೋಭೆ ತರುವುದಿಲ್ಲ ಎಂದು ಒತ್ತುವರಿದಾರರಿಗೆ ಮನಪರಿವರ್ತಿಸಿ ಹೊತ್ತುವರಿಯಾಗಿರುವ ಜಮೀನನ್ನು ಪುನಃ ಸರ್ಕಾರಕ್ಕೆ ವಾಪಸ್ ಪಡೆಯಲು ಯಶಸ್ವಿಯಾದರು. ಮುಂದಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಕೆರೆ ಕುಂಟೆ ಹಳ್ಳ ದಾರಿ ಗೋಮಾಳ ರಾಜ ಕಾಲುವೆ ಮುಂತಾದವುಗಳನ್ನು ಹೊತ್ತುವರಿ ಮಾಡಿಕೊಳ್ಳಲು ಯಾರೂ ಕೂಡ ಮುಂದಾಗಬಾರದೆಂದು ಮನವಿ ಮಾಡಿದರು ಹೀಗಿದ್ದರೂ ಕೂಡ ಯಾರಾದರೂ ಒತ್ತುವರಿ ಮಾಡಿಕೊಂಡಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು ಈ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ ರಾಜಸ್ವ ಚೇತನ್ ಕುಮಾರ್ ಗ್ರಾಮ ಲೆಕ್ಕಾಧಿಕಾರಿಪುಷ್ಪಲತಾ ಸರ್ವೆ ಬಸವರಾಜು ಮುಂತಾದವರು ಉಪಸ್ಥಿತರಿದ್ದರು





