ಹೊಳಲ್ಕೆರೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಬಲ್ಲಾಳಸಮುದ್ರ ವ್ಯಾಪ್ತಿಯ ಆಲಘಟ್ಟ ಗ್ರಾಮದಲ್ಲಿ ಇಂದು ಡೆಂಗಿ ವಿರೋಧಿ ಮಾಸಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸುಜಾತ ಮಾಜಿ ಗ್ರಾ,ಪಂ,ಅದ್ಯಕ್ಷರು ವಹಿಸಿದರು.ಡಾ,ಸತೀಶ ಸರ್ಕಾರಿ ಆಯುಷ ವೈದ್ಯರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಶ್ರೀಮತಿ ಸೌಭಾಗ್ಯಮ್ಮ ಅಂಗನವಾಡಿ ಕಾರ್ಯಕರ್ತೆ ಪ್ರಾರ್ಥನೆ ಮಾಡಿದರು, ಲಲಿತಮ್ಮ ಬಿಹೆಚ್ ಇಓ ರವರು ನಿರೂಪಿಸಿ,ಚಂದ್ರಪ್ಪ ಆರೋಗ್ಯ,ನೀರಿಕ್ಷಣಾಧಿಕಾರಿಗಳು ಸ್ವಾಗತಿಸಿದರು.ಈ ಕಾರ್ಯಕ್ರಮದಲ್ಲಿ ಶ್ರೀಮತಿ ನಿರ್ಮಲಮ್ಮ ಎಸ್ ಪಿ ಹೆಚ್ ಓ ನರಸಮ್ಮ ಪಿಹೆಚ್ ಸಿಓ, ಲಿಖಿತ್ ಸಿಹೆಚ್ಓ, ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು ಹಾಗು ಗ್ರಾಮಸ್ಥರು ಭಾಗವಹಿಸಿ ಕಾರ್ಯವನ್ನು ಯಶಸ್ವಿಗೊಳಿಸಿದರು.





