ವೈದ್ಯಕೀಯ ಚಿಕಿತ್ಸೆಗೆ ಬಂದ ಯುವತಿ ಖಾಸಗಿ ಅಂಗಕ್ಕೆ ಕೈ ಹಾಕಿದ ವೈದ್ಯನ ಬಂಧನಕ್ಕೆ ಚಂದ್ರಾ ಲೇ ಔಟ್ ನ ಪೊಲೀಸರು ಬಲೆ ಬೀಸಿದ್ದಾರೆ.
ಚಂದ್ರ ಲೇ ಔಟ್ ನ ಅರುಂಧತಿನಗರದ ಇಂಡಿಯನ್ ಕ್ಲಿನಿಕ್ ವೈದ್ಯ ಒಬೇದುಲ್ಲಾ ಸಂತ್ರಸ್ತ ಯುವತಿಗೆ ಕಿರುಕುಳು ಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಯುವತಿ ವೈದ್ಯನ ಮೇಲೆ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ವೈದ್ಯ ಒಬೇದುಲ್ಲಾಗಾಗಿ ಶೋಧನೆ ನಡೆಸಿದ್ದಾರೆ. ಸಂತ್ರಸ್ತ ಯುವತಿಯು ಸೆ. 28 ರಂದು ಹೊಟ್ಟೆನೋವಿನಿಂದ ಬಳಲುತ್ತಿದ್ದು, ತನ್ನ ತಾಯಿಯ ಜೊತೆಗೆ ಇಂಡಿಯನ್ ಕ್ಲಿನಿಕ್ ಗೆ ಹೋಗಿದ್ದಾಳೆ. ಅಲ್ಲಿ ವೈದ್ಯ ಸಂತ್ರಸ್ತೆಗೆ ಗ್ಲುಕೋಸ್ ಹಾಕಿ ಅಲ್ಲಿ ಕೆನ್ನೆ ಮತ್ತು ಕೈ ಮುಟ್ಟಿ ಅಸಹ್ಯವಾಗಿ ವರ್ತಿಸಿದ್ದಾನೆ. ನೋವಿನಿಂದ ಬಳಲುತ್ತಿದ್ದ ಯುವತಿ ಯಾವುದೇ ಪ್ರತಿರೋಧ ತೋರದೆ ಮನೆಗೆ ಹೋಗಿದ್ದಾಳೆ.ಸೆ. 29 ರಂದು ಕೂಡ ವೈದ್ಯ ಅದನ್ನು ಪುನರಾವರ್ತನೆ ಮಾಡಿದ್ದು, ಇದರಿಂದ ಹೆದರಿದ ಯುವತಿ ಯಾರಿಗೂ ಹೇಳಿಲ್ಲ ಸೆ. 30 ರಂದು ಅಜ್ಜಿ ಮತ್ತು ಸಹೋದರರ ಜೊತೆಗೆ ಬಂದಾಗ ವೈದ್ಯ ಗ್ಲುಕೋಸ್ ಹಾಕಿ ಅಜ್ಜಿ ಮತ್ತು ಸಹೋದರರನ್ನು ಹೊರಗೆ ಕಳುಹಿಸಿ ಖಾಸಗಿ ಅಂಗಾಂಗವನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದನ್ನು ಪ್ರತಿರೋಧಿಸಿದ ಯುವತಿಗೆ ಅಲುಗಾಡಿದರೆ ಕೈಯಿಂದ ರಕ್ತ ಬರುತ್ತದೆ. ಈ ಘಟನೆಯನ್ನು ಯಾರಿಗೂ ಹೇಳಬೇಡ ಎಂದು ಹೆದರಿಸಿದ್ದಾನೆ. ಎರಡು ದಿನಗಳು ಕಳೆದ ಮೇಲೆ ಯುವತಿಯನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪೋಷಕರು ಕರೆದಾಗ ಆಗ ವೈದ್ಯನ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದು,ಸಹೋದರರಿಬ್ಬರು ಕ್ಲಿನಿಕ್ ಬಳಿ ಹೋಗಿ ಗಲಾಟೆ ಮಾಡಿದ್ದಾನೆ. ನಂತರ ವೈದ್ಯನ ವಿರುದ್ದ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಚಂದ್ರಾ ಲೇಔಟ್ ನಲ್ಲಿ ದಾಖಲು ಮಾಡಿದ್ದಾರೆ. ಇದನ್ನು ತಿಳಿದ ವೈದ್ಯ ತಲೆ ತಪ್ಪಿಸಿಕೊಂಡಿದ್ದು, ಅವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ





