Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025

    Play Rummy 500 Online Uk

    November 19, 2025
  • ರಾಜ್ಯ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025

    ಪ್ರತಿಭೆಯಿದ್ದರೆ ಏನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ

    November 16, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ಜಿಲ್ಲಾ ಸುದ್ದಿ»ಇ ಸ್ವತ್ತಿಗೆ ಲಂಚ: ಕುರುಬರಹಳ್ಳಿ ಪಿಡಿಓ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ
ಜಿಲ್ಲಾ ಸುದ್ದಿ

ಇ ಸ್ವತ್ತಿಗೆ ಲಂಚ: ಕುರುಬರಹಳ್ಳಿ ಪಿಡಿಓ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

D KumaraswamyBy D KumaraswamyNovember 25, 2022No Comments1 Min Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ನಿವೇಶನದ ಇ ಸ್ವತ್ತು ಪಡೆಯಲು ಲಂಚ ಸ್ವೀಕರಿಸಿದ್ದ ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜ ಮತ್ತು ಕಾರ್ಯದರ್ಶಿ ಜಗದೀಶ ಇಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದ ಘಟ‌ನೆಯು ನಡೆದಿದೆ.

 

 

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ‌ ಸ್ನೇಹ ಬೇಕರಿಯ ಮಾಲೀಕ ಲೊಕೇಶ ಎನ್ನುವವರು ಮನೆಯನ್ನು ಕೆಡವಿ ಹೊಸದಾಗಿ ನಿರ್ಮಿಸಲು ಎಸ್ ಬಿ ಐ ಬ್ಯಾಂಕಿನಿಂದ ಸಾಲ‌ಪಡೆಯುವುದಕ್ಕೆ ನಿವೇಶನದ ಇ ಸ್ವತ್ತು ಕೇಳಿದ್ದಾರೆ. ಇದನ್ನು ಪಡೆಯಲು ಲೊಕೇಶ್ ಕುರುಬರಹಳ್ಳಿ ಪಂಚಾಯಿತಿಗೆ ಅರ್ಜಿಯನ್ನು ಸಲ್ಲಿಸಿದ್ದು, ಪಂಚಾಯಿತಿ ಪಿಡಿಓ ಬಸವರಾಜ್ ಇ ಸ್ವತ್ತು ನೀಡಲು ಐದಾರು ತಿಂಗಳು ಓಡಾಡಿಸಿ 10 ಸಾವಿರ ಲಂಚವನ್ನು ಕೇಳಿದ್ದು, ಲೊಕೇಶ್ ಲಂಚದ ಹಣ ಕೊಟ್ಟಿದ್ದರು. ಆದರೆ ಇ ಸ್ವತ್ತಿನಲ್ಲಿ‌ ನಿವೇಶನ ಎನ್ನುವ ಬದಲು ಕಟ್ಟಡ ಎಂದುನಮೂದಾಗಿತ್ತು.‌ಇದನ್ನು ಬದಲಾಯಿಸಿ ಕೊಂಡು‌ ಬರಲು ಬ್ಯಾಂಕ್ ನವರು ಹೇಳಿದ್ದರು, ಅದರಂತೆ ಮತ್ತೆ ಕುರುಬರಹಳ್ಳಿ ಪಂಚಾಯಿತಿ ಗೆ ಬಂದು‌ ಆಗಿರುವ ತಪ್ಪನ್ನು ಸರಿಪಡಿಸಿಕೊಡುವಂತೆ ಕೇಳಿದರೆ ಅದಕ್ಕೆ ಮತ್ತೆ 6 ಸಾವಿರ ಲಂಚ ಕೇಳಿದ್ದರು. ಲೊಕೇಶ್ ಲೋಕಾಯುಕ್ತ ಕಚೇರಿಗೆ ದೂರು ಕೊಟ್ಟಿದ್ದರು. ದೂರನ್ನು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು, ದಾಳಿ ನಡೆಸಿ 6 ಸಾವಿರ ಹಣ ಕೊಡುವ ಸಮಯದಲ್ಲಿ‌ ಪಿಡಿಓ ಬಸವರಾಜ ಮತ್ತು ಜಗದೀಶ್ ಅವರನ್ನು ಬಂಧಿಸಿದ್ದಾರೆ. ಅಪಾಧಿತ ಬಸವರಾಜ್ ನಿಂದ ಹಣವ‌ನ್ನು ಜಪ್ತಿ‌ ಮಾಡಿದ್ದು, ಉಪಾಧೀಕ್ಷಕ ಮಂಜು‌ನಾಥ್ ತನಿಖೆಯನ್ನು ಕೈಗೊಂಡಿದ್ದಾರೆ. ಲೋಕಾಯುಕ್ತ ಪೊಲೀಸ್ ನಿರೀಕ್ಷರಾದ ಲತಾ,ಶ್ರೀಮತಿ‌ ಶಿಲ್ಪ, ಪೊಲೀಸ್ ಸಿಬ್ಬಂದಿಗಳಾದ ಜಿಎಂ ತಿಪ್ಪೇಸ್ವಾಮಿ, ಸಿಹೆಚ್ ಸಿಗಳಾದ ಶ್ರೀನಿವಾಸ, ಪುಷ್ಪ, ಕೆ ಟಿ‌ ಮಾರುತಿ, ಸಿಪಿಸಿ ಮಾರುತಿ, ಸಂತೋಷ್ ಕುಮಾರ್, ವಿರೇಶ್, ಮಾರುತಿ, ಎಪಿಸಿ ವೆಂಕಟೇಶ್ ಕುಮಾರ್, ಟಿವಿ ಸಂತೋಷ್ ಇವರು ಹಾಜರಿದ್ದರು

Share. Facebook Twitter Pinterest LinkedIn Tumblr WhatsApp Email
Previous Articleಬೆಳೆ ಪರಿಹಾರ ಆತಂಕ ಬೇಡ: ತಹಶೀಲ್ದಾರ್ ರಘುಮೂರ್ತಿ
Next Article ಕೋಟೆ ನಾಡಿನಲ್ಲಿ ಬ್ರಹ್ಮಾಂಡ ಭ್ರಷ್ಠಾಚಾರ ಅಧಿಕಾರಿಗಳು ನುಂಗಿರೋದು ಬರೋಬ್ಬರಿ 18 ಕೋಟಿ !!!!!!
D Kumaraswamy
  • Tumblr

Related Posts

ಆಹಾರ ದಾನ ಸಮಾಜ ಸೇವೆ ಸಂಕೇತ:ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

June 25, 2025

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಗೆ ಅತ್ಯುತ್ತಮ ಫಲಿತಾಂಶ : ಅಭಿನಂದಿಸಿದ ಆಡಳಿತ ವರ್ಗ

May 14, 2025

ಮಲ್ಟಿ ಕ್ಯೂಸಿನ್ ಕುಕ್ ಅಭ್ಯರ್ಥಿಗಳಿಂದ ಮರು ಅರ್ಜಿ ಆಹ್ವಾನ

March 20, 2025

ಸಕಾಲ ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

March 20, 2025
Leave A Reply Cancel Reply

Recent Posts
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
  • Skrill Casino 5 Pounds
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.