*ಮನೆ ಮನೆ ಇ ಸ್ವತ್ತು ಕಾರ್ಯಕ್ರಮ: ಇ ಸ್ವತ್ತು ಪತ್ರ ವಿತರಿಸಿದ ಸಿಇಓ*
ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಇ ಸ್ವತ್ತು ಪಡೆಯುವುದು ಸಾರ್ವಜನಿಕರಿಗೆ ಅನಾವಶ್ಯಕ ವಿಳಂಬವಾಗುತ್ತಿದ್ದು, ಅದಕ್ಕಾಗಿ ತಿಂಗಳುಗಟ್ಟಲೆ ಅಲೆಯುವುದು ಹಾಗೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ಚಿತ್ರದುರ್ಗ ಜಿಲ್ಲಾ ಪಂಚಾಯಿಸಿ ಸಿಇಓ ದಿವಾಕರ್ ಮನೆ ಮನೆ ಬಾಗಿಲಿಗೆ ಇ ಸ್ವತ್ತು ಎಂಬ ಯೋಜನೆಯನ್ನು ರೂಪಿಸಿ ಜಾರಿಗೆ ತಂದು ಇಂದು ಅದನ್ನು ಕಾರ್ಯಗತಗೊಳಿಸಿದ್ದಾರೆ.ಅದರಂತೆ ಪೈಲಟ್ ಪ್ರಾಜೆಕ್ಟ್ ರೀತಿ ಚಿತ್ರದುರ್ಗದ ಮಠದ ಕುರುಬರಹಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಿವಾಸಿಗಳ ದಾಖಲೆಗಳನ್ನು 10 ರಿಂದ 15 ದಿನಗಳ ಮೊದಲು ಗ್ರಾಮ ಪಂಚಾಯಿಸಿ ಸಿಬ್ಬಂದಿಗಳು ಸಂಗ್ರಹಿಸಿ ನಿಯಮಾನುಸಾರ ಪರಿಶೀಲಿಸಿದ್ದಾರೆ. ಎಲ್ಲಾ ತೆರಿಗೆಯನ್ನು ಕಟ್ಟಿದ್ದಾರೆ ಎಂದು ಖಾತ್ರಿಯಾದ ನಂತರ ಅವರುಗಳ ಮನೆ ಮನೆಗೆ ಹೋಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೇ ವಿತರಿಸಿದ್ದಾರೆ. ಇದರಂತೆ ಮಟಡದ ಕುರುಬರಹಟ್ಟಿಯ ಪಂಚಾಯಿತಿ ವ್ಯಾಪ್ತಿಯ ಗುತ್ತಿನಾಡು, ಎಂಆರ್ ಕಾಲೋನಿಯ ನಿವಾಸಿಗಳಿಗೆ ಸುಮಾರು 80ಕ್ಕೂ ಹೆಚ್ಚು ಇ ಸ್ವತ್ತು ಪ್ರಮಾಣ ಪತ್ರಗಳನ್ನು ನಿವಾಸಿಗಳ ಮನೆ ಬಾಗಿಲಿಗೆ ಹೋಗಿ ಸಿಇಓ ಅವರೇ ಸ್ವತಃ ವಿತರಣೆ ಮಾಡಿದ್ದಾರೆ. ಈ ಯೋಜನೆಯಿಂದಾಗಿ ಪಂಚಾಯಿತಿಗೆ 15 ದಿನಗಳಲ್ಲಿ ಸುಮಾರು 4 ಲಕ್ಷ ತೆರಿಗೆ ಸಂಗ್ರಹವಾಗಿದೆ. ತೆರಿಗೆಯನ್ನು ಜನರು ತಾವೇ ಸ್ವತಃ ಪಾವತಿಸಿದ್ದಾರೆ. ಇಂತಹ ಯೋಜನೆಯಿಂದ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ, ಹಾಗೂ ವಿಳಂಬ ನೀತಿಯಿಂದ ಜಿಲ್ಲಾ ಪಂಚಾಯಿತಿಯನ್ನು ನೋಡುವ ದೃಷ್ಠಿಕೋನವೇ ಬದಲಾಗಿದೆ. ಈ ಸ್ವತ್ತು ಪಡೆಯಲು ಮೊದಲು ಕಷ್ಟವಾಗುತ್ತಿತ್ತು. ಆದರೆ ಮನೆ ಬಾಗಿಲಿಗೆ ಬಂದು ಇಸ್ವತ್ತು ವಿತರಣೆ ಮಾಡುವ ಯೋಜನೆ ರೂಪಿಸಿದ್ದು, ಉತ್ತಮವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಂಗಸ್ವಾಮಿ,ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು





