ಮೃತದೇಹ ಪತ್ತೆ ಹಚ್ಚಿದ ಅಬ್ಬಿನಹೊಳೆ ಪೋಲಿಸರು.
ಹಿರಿಯೂರು ತಾಲೂಕಿನ ಅಬ್ಬಿನಹೊಳೆ ಕೆರೆಯಲ್ಲಿ ಎಮ್ಮೆ ಮೇಯಿಸಲು ಹೋಗಿ ಆಕಸ್ಮಿಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ವ್ಯಕ್ತಿಯನ್ನು ಅಬ್ಬಿನ ಹೊಳೆ ಪೋಲಿಸರು ತೆಪ್ಪದ ಮೂಲಕ ಶೋಧಕಾರ್ಯ ನೆಡೆಸಿದ ಮೃತ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ.ಪಿಎಸ್ಐ ಪರುಶುರಾಮ್ ಎನ್ ಲಮಾಣಿ ನೇತೃತ್ವದಲ್ಲಿ
ಬೆಳಿಗ್ಗೆಯಿಂದಲೂ ಈ ಶೋಧ ಕಾರ್ಯ ನಡೆಸಿದ ಮೃತ ದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಮೃತ ವ್ಯಕ್ತಿಯನ್ನು ಅಬ್ಬಿನಹೊಳೆ ಗ್ರಾಮದ 30 ವರ್ಷದ ಅಜಯ ಎಂದು ಗುರುತಿಸಲಾಗಿದೆ.
ಅಬ್ಬಿನಹೊಳೆಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.ಪೋಲಿಸರ ಶೋಧಕಾರ್ಯಕ್ಕೆ ಗ್ರಾಮಸ್ಥರು ಕೈ ಜೋಡಿಸಿದ್ದಾರೆ. ಈ ಸಂದರ್ಭದಲ್ಲಿ ಪಿಎಸ್ಐ ಪರುಶುರಾಮ ಎನ್ ಲಮಾಣಿ, ಸಿಬ್ಬಂದಿ ಕವಿರಾಜ್, ಗ್ರಾಮಸ್ಥರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





