ಕಳೆದ 20 ವರ್ಷಗಳಿಂದ ಕುರುಡಿಹಳ್ಳಿ ಗ್ರಾಮದ ಸರ್ವೆ ನಂಬರ್ 118 ರಲ್ಲಿ ಗೋಮಾಳದ ಜಮೀನಿಗೆ ಬೇಲಿಹಾಕಿಕೊಂಡು ಒತ್ತುವರಿ ಮಾಡಿಕೊಂಡಿದ್ದ ಕುರಿ ಪಾಲಯ್ಯ ನಿಂದ ತಹಶೀಲ್ದಾರ್ ತೆರವುಗೊಳಿಸಿ ಯಾವುದೇ ಕಾರಣಕ್ಕೂ ಒತ್ತುವರಿ ಮಾಡಕೂಡದು ಎಂದು ಎಚ್ಚರಿಸಿದ್ದಾರೆ.
ಚಳ್ಳಕೆರೆಯ ಕುರುಡಿಹಳ್ಳಿಯ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಸರ್ಕಾರದ ಗೋಮಾಳದ ಒತ್ತುವರಿ ಮಾಡಿಕೊಳ್ಳಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ಓಡಾಡಲು ಅಡ್ಡಿ ಉಂಟಾಗಿದ್ದು, ಈ ರಸ್ತೆಯನ್ನು ಬಿಡಿಸಿಕೊಡುವಂತೆ ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಅವರಿಗೆ ಮತ್ತು ಉಪ ವಿಭಾಗ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಆದರೂ ಕೂಡ ತೆರವುಗೊಳಿಸದೆ ಇರುವುದರಿಂದ ಗ್ರಾಮಸ್ಥರುಗಳು ತಹಶೀಲ್ದಾರ್ ಗೆ ಮತ್ತೊಂದು ಮನವಿಯನ್ನು ನೀಡಿ ತೆರವುಗೊಳಿಸದೇ ಇದ್ದರೆ ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ಹೇಳಿದ್ದು, ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎನ್ ರಘುಮೂರ್ತಿ ಇಂದು ಬೆಳಗ್ಗೆ ಬೆಳಗ್ಗೆ 8:00 ಗಂಟೆಗೆ ಕಂದಾಯ ಮತ್ತು ಸರ್ವೆಅಧಿಕಾರಿಗಳೊಂದಿಗೆ ಜೆಸಿಬಿ ಮುಖಾಂತರ ಒತ್ತುವರಿ ಮಾಡಿಕೊಂಡಿದ್ದ ದಾರಿಯನ್ನು ತೆರವುಗೊಳಿಸಿದ್ದಾರೆ ತದನಂತರಸಾರ್ವಜನಿಕರು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಸ್ವಾಮ್ಯದ ಗೋಮಾಳ, ಕೆರೆ, ಕಾಲುದಾರಿ, ಸ್ಮಶಾನ, ಮುಂತಾದವುಗಳನ್ನು ಅತಿಕ್ರಮಿಸಿಕೊಳ್ಳಬಾರದೆಂದು ಮನವಿ ಮಾಡಿದರು.ಸಾರ್ವಜನಿಕರು ಈ ರೀತಿ ಒತ್ತುವರಿ ಮಾಡುತ್ತಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಇದರಿಂದ ಅದೆಷ್ಟೋ ಕುಟುಂಬಗಳು ಅದೆಷ್ಟು ಅಸಾಹಾಯಕರು ಪರಿತಪಿಸುತ್ತಿದ್ದಾರೆ ಭೂ ಕಬಳಿಕೆ ಆರೋಪದಡಿ ಮುಂದಿನ ದಿನಗಳಲ್ಲಿ ಇಂಥ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿ ಸರ್ಕಾರಿ ಸ್ವಾಮ್ಯದ ಒಂದಿಂಚು ಭೂಮಿಯನ್ನು ಬಿಡದೆ ವಶಪಡಿಸಿಕೊಳ್ಳುವುದಾಗಿ ಹೊತ್ತುವರಿದಾರರನ್ನು ಎಚ್ಚರಿಸಿದರು ಇದೇ ಸಂದರ್ಭದಲ್ಲಿ ರಾಜೇಶ್ವನಿರೀಕ್ಷಕರದಂತ ಲಿಂಗೇಗೌಡ ಗ್ರಾಮ ಲೆಕ್ಕಾಧಿಕಾರಿ ಮತ್ತು ಸರ್ವೇ ಅಧಿಕಾರಿಗಳು ಉಪಸ್ಥಿತರಿದ್ದರು





