ಸೊಂಡೆಕೊಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಹತ್ತಾರು ಹಳ್ಳಿಗಳಿಗೆ ನಿರೀಕ್ಷೆಗಿಂತ ಹೆಚ್ಚಿನ ಅನುದಾನ ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಸೊಂಡೇಕೊಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು 14.90 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆಯನ್ನು ನೇರವೇರಿಸಿ ಮಾತನಾಡಿದರು.
ನನ್ನ ಕ್ಷೇತ್ರದ ಪ್ರತಿ ಹಳ್ಳಿಮಾಡಲಾಗುತ್ತಿದೆ ಒಂದು ಅಭಿವೃದ್ಧಿ ಕಾರ್ಯ ಮಾಡಲಾಗಿದೆ.ಹಳ್ಳಿಗಳಲ್ಲಿ.ಸಿ.ಸಿ, ರಸ್ತೆ, ಚಕ್ ಡ್ಯಾಂ, ದೇವಸ್ಥಾನಗಳಿಗೆ ಅನುದಾನ ನೀಡುತ್ತ ಬಂದಿದ್ದೇನೆ.ಅನುದಾನ ಬಂದ ತಕ್ಷಣ ನನ್ನ ಗಮನಕ್ಕೆ ತಂದ ಎಲ್ಲಾ ಸಮಸ್ಯೆಗಳಿಗೆ ಹಣ ನೀಡಿದ್ದೇನೆ.
ಈ ಭಾಗದ ಹಲವು ವರ್ಷಗಳ ಬೇಡಿಕೆಗಳಿಗೆ ಅಂತ್ಯ ಹಾಡಿದ್ದೇನೆ. 2-3 ಮೂರು ರಸ್ತೆಗಳು ಮಳೆ ಬಂದರೆ ರೈತರ ಜಮೀನಿಗೆ ತೆರಳಲು ಆಗುತ್ತಿರಲಿಲ್ಲ. ಅಂತಹ ಮಣ್ಣಿನ ರಸ್ತೆಗಳನ್ನು ಸಿ.ಸಿ.ರಸ್ತೆ ಮಾಡಿ ರೈತರ ಹಿತ ಕಾಯುವ ಕೆಲಸ ಮಾಡಿದ್ದೇನೆ ಎಂದರು.
ನನ್ನ ಅನುದಾನ ಮತ್ತು ಇತರೆ ಇಲಾಖೆಗಳ ಅನುದಾನದಲ್ಲಿ ಉಪ್ಪನಾಯಕನಹಳ್ಳಿಯಲ್ಲಿ ದುರ್ಗಮ್ಮ ದೇವಸ್ಥಾನಕ್ಕೆ 5 ಲಕ್ಷ, ಹುಲಿಗೆಮ್ಮ ತಿಮ್ಮಪ್ಪ ದೇವಸ್ಥಾನ 5 ಲಕ್ಷ , ಪಾಡುರಂಗ ದೇವಸ್ಥಾನಕ್ಕೆ 5 ಲಕ್ಷ ದೇವಸ್ಥಾನಕ್ಕೆ ನಿರ್ಮಾಣಕ್ಕೆ ಹಣ ನೀಡಲಾಗಿದೆ.
ಓಬನಹಳ್ಳಿಯಲ್ಲಿ ನಬರ್ಡ್ ಯೋಜನೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಎರಡು ಕೊಠಡಿ ನಿರ್ಮಾಣಕ್ಕೆ 22 ಲಕ್ಷ ಮತ್ತು 3 ಕೋಟಿ ವೆಚ್ಚದಲ್ಲಿ 3 ಚಕ್ ಡ್ಯಾಂ ಹಾಕಲಾಗಿದೆ.
ಸೊಂಡೇಕೊಳ ಗ್ರಾಮದಲ್ಲಿ ವೀರಭದ್ರಸ್ವಾಮಿ ದೇವಸ್ಥಾನ ಪಕ್ಕದಲ್ಲಿ ತಡೆಗೋಡೆ ನಿರ್ಮಾಣಕ್ಕೆ 15 ಲಕ್ಷ, ಎರೇಹೊಣೆ ರಸ್ತೆಯ ಡಾಂಬರೀಕರಣ ಕಾಮಗಾರಿಗೆ 75 ಲಕ್ಷ, ಸೊಂಡೇಕೊಳದಿಂದ ಉಪ್ಪನಾಯಕನಹಳ್ಳಿ ರಸ್ತೆ ಕಾಮಗಾರಿಗೆ 80ಲಕ್ಷ, ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ಧಿಗೆ 5 ಲಕ್ಷ, ಕುಕ್ಕಾವಾಡೇಶ್ವರಿ ದೇವಸ್ಥಾನ ಅಭಿವೃದ್ಧಿಗೆ 5 ಲಕ್ಷ, ಎಸ್.ಸಿ.ಕಾಲೋನಿಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣಕ್ಕೆ 10 ಲಕ್ಷ, ಸರ್ಕಾರಿ ಹಳ್ಳಕ್ಕೆ ಎರಡು ಚಕ್ ಡ್ಯಾಂ ನಿರ್ಮಾಣಕ್ಕೆ 1. 80 ಕೋಟಿ ಸೇರಿ ಈ ಎಲ್ಲಾ ಅನುದಾನವನ್ನು ಸೊಂಡೇಕೊಳ ಗ್ರಾಮ ಅಭಿವೃದ್ಧಿಗೆ ಹಣ ನೀಡುವ ಮೂಲಕ ಜನರ ನಿರೀಕ್ಷೆ ಮೀರಿ ಅನುದಾನ ನೀಡಿದ್ದು ಚಿಕ್ಕ ಪುಟ್ಟ ಕೆಲಸ ಬಿಟ್ಟರೆ ಬೇರೆ ಏನು ಇಲ್ಲದಂತೆ ಮಾಡಿದ್ದೇನೆ.
ನಂದಿಪುರ ಗ್ರಾಮದಲ್ಲಿ 1 ಕೋಟಿ ವೆಚ್ಚದ ಒಂದು ಚಕ್ ಡ್ಯಾಂ ಮತ್ತು 5 ಲಕ್ಷ ವೆಚ್ಚದ ಬಾಕ್ಸ್ ಚರಂಡಿ. ಗೊಡಬನಾಳ್ ಗ್ರಾಮದಿಂದ ಉಪ್ಪನಾಯಕನಹಳ್ಳಿ ಗ್ರಾಮದವರೆಗೆ 4 ಕೋಟಿ ವೆಚ್ಚದಲ್ಲಿ ಸಿ.ಸಿ.ನಿರ್ಮಾಣ ಮಾಡಲಾಗುತ್ತಿದೆ. ಎಲ್ಲಾ ಕಾಮಗಾರಿ ಗುಣಮಟ್ಟದಿಂದ ಮಾಡಲು ಖಡಕ್ ಸೂಚನೆ ನೀಡಿದ್ದೇನೆ. ಈಗಾಗಲೇ ಹಲವು ಸಿ.ಸಿ.ರಸ್ತೆ ಪೂರ್ಣಗೊಂಡಿವೆ ಎಂದರು.
ಅತಿ ಹೆಚ್ಚು ಅಡಿಕೆ ತೋಟಗಳನ್ನು ಹೊಂದಿರುವ ಅರೆ ಮಲೆನಾಡಿನ ಪದೇಶದಂತಿರುವ ಈ ಪ್ರದೇಶದಲ್ಲಿ 15 ಕ್ಕಿಂತ ಹೆಚ್ಚು ಚಕ್ ಡ್ಯಾಂ ಮಾಡಿದ್ದು ಅಂತರ್ಜಲ ಹೆಚ್ಚಿ ರೈತರ ಬೊರವೆಲ್ ಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಭದ್ರ ಯೋಜನೆಯಲ್ಲಿ ಬಿಟ್ಟಿದ್ದ ಈ ಭಾಗದ ಅನ್ಯಾಳ್ ಮತ್ತು ನಂದಿಪುರ ಕೆರೆಗಳನ್ನು ಸಹ ಭದ್ರ ಯೋಜನೆಯಲ್ಲಿ ಸೇರಿಸಿದ್ದೇನೆ. ಜನರು ಚಿಕ್ಕ ಪುಟ್ಟ ಸಿ.ಸಿ.ರಸ್ತೆಗಳು ಕೇಳುತ್ತಿದ್ದು ಮುಂದಿನ ದಿನದಲ್ಲಿ ಅನುದಾನ ಬಿಡುಗಡೆ ಆದರೆ ಎಲ್ಲಾವನ್ನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
29 ವರ್ಷಗಳಿಂದ ಮನವಿ ಮಾಡುತ್ತಿದ್ದ ಎಲ್ಲಾ ರಸ್ತೆಗಳನ್ನು ಮಾಡಿದ್ದೇನೆ. ಯಾವ ಗ್ರಾಮ ಪಂಚಾಯತಿ ಹಾಕದಷ್ಟು ಅನುದಾನವನ್ನು ಸೊಂಡೇಕೊಳ ಪಂಚಾಯಿತಿಗೆ ನೀಡಿದ್ದೇನೆ. ಸುಮಾರು 150 ರಿಂದ 200 ಮನೆಗಳನ್ನು ನೀಡಿದ್ದು ಯಾರಿಗೆ ಖಾತೆ ಇದೆ ಎಲ್ಲಾರೂ ಮನೆ ಕಟ್ಟಿಕೊಳ್ಳಿ ಎಂದರು. ಪಿಂಚಣಿ ಸಮಸ್ಯೆ ಇದ್ದರು ಗಮನಕ್ಕೆ ತಂದರೆ ಸರಿಪಡಿಸಲಾಗುವುದು ಮುಂದಿನ ದಿನದಲ್ಲಿ ನಿಮ್ಮ ಎಲ್ಲಾ ಕೆಲಸಗಳಿಗೆ ನಾನು ಧ್ವನಿಯಾಗಿರುತ್ತೇನೆ ಎಂದರು.
ಕಸದ ಬುಟ್ಟಿ ವಿತರಣೆ: ಸೊಂಡೇಕೊಳ ಗ್ರಾಮ ಪಂಚಾಯತಿ ವ್ಯಾಪ್ತಿಯ 1850 ಕುಟುಂಬಗಳಿಗೆ ಹಸಿ ಕಸ ಒಣ ಕಸದ ಬುಟ್ಟಿಗಳನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿತರಣೆ ಮತ್ತು ಸ್ವಚ್ಚ ವಾಹಿನಿ ವಾಹನಕ್ಕೆ ಚಾಲನೆ ನೀಡಿದರು.
ಜಟಿಜಿಟಿ ಮಳೆ: ಬೆಳಗ್ಗೆ ಕಾರ್ಯಕ್ರಮದ ವೇಳೆ ಜಿಟಿಜಿಟಿ ಮಳೆಯಲ್ಲಿ ಅನೇಕ ಕಾಮಗಾರಿಯ ಸ್ಥಳಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಇಓ ಹನುಮಂತಪ್ಪ, ಬಿಇಒ ತಿಪ್ಪೇಸ್ವಾಮಿ, ಆರ್ ಐ ಶರಣಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಮ್ಮ, ಪಿಡಿಓ ಅಂಜಿನಪ್ಪ ಮತ್ತು ಉಪಾಧ್ಯಕ್ಷರು, ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮದ ಜನರು ಇದ್ದರು.




