ಚಿತ್ರದುರ್ಗ ಜಿಲ್ಲೆಯಲ್ಲಿಯೂ ಕೂಡ ಶಿಕ್ಷಕರ ನೇಮಕದ ಅಕ್ರಮದ ವಾಸನೆ ಬಡಿದಿದ್ದು, ಬೆಂಗಳೂರಿನಿಂದ ಬಂದಿದ್ದ ಸಿಐಡಿ ಅಧಿಕಾರಿಗಳು ಐದು ಜನ ಶಿಕ್ಷಕರನ್ನು ಬಂಧಿಸಿದ್ದಾರೆ.2014 ಮತ್ತು 15 ರಲ್ಲಿ ನಡೆದ ಶಿಕ್ಷಕರ ನೇಮಕಾತಿ ಗೆ ಸಂಭಂಧಿಸಿದಂತೆ ಜಿಲ್ಲೆಯ ಕರಿಬಸಪ್ಪಐರಾಣಿ, ಸವಿತಾ ಕೊಟ್ರಪ್ಪ, ದೀಪಕ್ ಪುಜಾರಿ ಮತ್ತು ಏಕಾಂತ್ ಎಂಬ ಶಿಕ್ಷಕರನ್ನು ಬಂಧಿಸಲಾಗಿದೆ. ಸಿಐಡಿ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸಿ ಬಂಧಿಸಿದ್ದಾರೆ





