ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ – ಡಿಕೆಶಿ
ಚಿತ್ರದುರ್ಗ : ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರದ ವಿರುದ್ಧ ಲೇವಡಿ ಮಾಡಿದರು.

ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಕೊಲೆಗಳು ನಡೆಯುತ್ತವೆ. ಇದಕ್ಕೆ ಸರ್ಕಾರ ವೈಫಲ್ಯ ಕಾರಣ ಎಂಬ ಪ್ರಶ್ನೆಗೆ ಉತ್ತರಿಸಿದರು ಸರ್ಕಾರ ತಾರತಮ್ಯ ಮಾಡುತ್ತಿದೆ ಯಾರೇ ಆಗಲಿ ಇದನ್ನು ನಾವು ಖಂಡಿಸುತ್ತೇವೆ. ಜೊತೆಗೆ ಮುಸ್ಲಿಂ ಬಾಂಧವರ ಕೊಲೆ ನಡೆದಿದೆ ಅದನ್ನು ನಾವು ಖಂಡಿಸುತ್ತೇವೆ. ನಮ್ಮದು ಶಾಂತಿಯ ತೋಟ ಭೇದಭಾವ ಮಾಡಬಾರದು ಸರ್ಕಾರ ಎಲ್ಲರನ್ನು ಒಂದೇ ರೀತಿಯಲ್ಲಿ ನೋಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದರು.
ಭಾರತ ಜೊಡೋ ಪಾದಯಾತ್ರೆಯು ಕನ್ಯಾಕುಮಾರಿಯಿಂದ ಪ್ರಾರಂಭವಾಗಲಿದ್ದು ಗುಂಡ್ಲಪೇಟೆ, ಮೈಸೂರು, ಶ್ರೀರಂಗ ಪಟ್ಟಣ, ನಾಗಮಂಗಲ , ಮೇಲಕೋಟೆ ಚಿತ್ರದುರ್ಗ ಜಿಲ್ಲೆ ಮುಖಾಂತರ ಬಳ್ಳಾರಿ ಕಡೆ ತೆರಳಲಿದೆ ಎಂದು ಹೇಳಿದರು. ಇನ್ನು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ರವರು ಜಾತಿವಾದಿಗಳು ಅವರನ್ನು ಜನ ಗೆಲಿಸುವುದಿಲ್ಲ ಎಂಬ ಪ್ರಶ್ನೆಗೆ ಜನರೇ ಇದಕ್ಕೆ ಉತ್ತರ ಕೊಡತ್ತಾರೆ ಎಂದು ಪ್ರತಿಕ್ರಿಯಿಸಿದರು





