ಮೊಬೈಲ್ ಹುಡುಕಿಕೊಡಲು ಐದು ಸಾವಿರ ಲಂಚ ಪಡೆದು ಪೊಲೀಸ್ ಪೇದೆಯೊಬ್ಬ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಹಿರಿಯೂರಿನ ಜವನಗೊಂಡನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಹರೀಶ್ ಬಲೆಗೆ ಬಿದ್ದಿರುವ ಪೇದೆಯಾಗಿದ್ದಾನೆ. ಹಿರಿಯೂರಿನ ಕಾಟನಾಯಕನಹಟ್ಟಿಯ ಚಾಮರಾಜು ಎನ್ನುವವರ ಮೊಬೈಲ್ ಕಳೆದು ಹೋಗಿದ್ದು, ಅದನ್ನು ಹುಡುಕಿಕೊಡುವಂತೆ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೆ ಇದನ್ನು ಹುಡುಕಿಕೊಡಲು ಹರೀಶ್ ಐದು ಸಾವಿರ ರೂಪಾಯಿ ಲಂಚ ಕೇಳಿದ್ದ, ಮೊದಲಿಗೆ ಮೂರು ಸಾವಿರ ಪಡೆದಿದ್ದು, ಇನ್ನು ಎರಡು ಸಾವಿರ ಲಂಚ ಕೊಡುವಾಗ ಲೋಕಾಯುಕ್ತ ಡಿವೈಎಸ್ ಪಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.





