BREAKING NEWS
ಸರ್ಕಾರದಿಂದ ಮಂಕಿ ಪಾಕ್ಸ್ ಪತ್ತೆಗಾಗಿ ಆರ್ ಟಿಪಿಸಿಆರ್ ಕಿಟ್ ಬಿಡುಗಡೆ ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂ
ಮಂಕಿ ಫಾಕ್ಸ್ ( Monkeypox Case ) ಪತ್ತೆಹಚ್ಚಲು ಅಭಿವೃದ್ಧಿಪಡಿಸಿರುವ ಆರ್‌ಟಿಪಿಸಿಆರ್ ಕಿಟ್ ಸೇರಿದಂತೆ ಒಂಬತ್ತು ಉತ್ಪನ್ನಗಳನ್ನು ಅನ್ನು ಸಚಿವ ಡಾ.ಅಶ್ವತ್ಥನಾರಾಯಣ ಅವರು ಬಿಡುಗಡೆ ಮಾಡಿದರು.

ನಿಯೋಡೆಎಕ್ಸ್ ಬಯೋಟೆಕ್ ಲ್ಯಾಬ್ಸ್‌ನ ಡಾ.ಪ್ರಭಾಕರ ಕುಲಕರ್ಣಿ ಅಭಿವೃದ್ಧಿಪಡಿಸಿರುವ ಈ ಕಿಟ್‌ನಿಂದ ಸುಲಭವಾಗಿ ಮಂಕಿ ಫಾಕ್ಸ್ ವೈರಸ್ ಅನ್ನು ಪತ್ತೆ ಹಚ್ಚಬಹುದಾಗಿದೆ. ಇದೇ ರೀತಿ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಹಚ್ಚಲು ನೆರವಾಗುವ ಅನ್ಕೊ ಡಿಎಕ್ಸ್, ನ್ಯೂ ಹಾರ್ಟ್ ಮತ್ತು ಪ್ಯೂರ್ ವಾಟರ್ ಹೀಗೆ ಒಂಬತ್ತು ಉತ್ಪನ್ನವನ್ನು ಸಚಿವರು ಬಿಡುಗಡೆ ಮಾಡಿದರು. ಕರ್ನಾಟಕ ನಾವಿನ್ಯತಾ ಮತ್ತು ತಂತ್ರಜ್ಞಾನ ಸಂಸ್ಥೆ (ಕಿಟ್ಸ್)ಯಡಿಯ ಬೆಂಗಳೂರು ಜೈವಿಕ ನಾವಿನ್ಯತಾ ಸಂಸ್ಥೆಯಲ್ಲಿ (ಬಿಬಿಸಿ) ಕಾರ್ಯನಿರ್ವಹಿಸುತ್ತಿರುವ ನವೋದ್ಯಮಗಳು ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿವೆ.
ಬಿಬಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರಸಿಂಗ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.





