ಚಿತ್ರದುರ್ಗದ ಜನತೆಗೂ ಕಲಾಭಿಮಾನಕ್ಕೂ ಅವಿನ ಭಾವದ ನಂಟಿದೆ ಇಲ್ಲಿನ ಸಾಂಸ್ಕೃತಿಕ ನೆಲೆಗಟ್ಟಿಗೂ ಪಾಳೇಗಾರರ ಸಾಹಸಕ್ಕೂ ಪೂರಕವಾದ ಸಂಬಂಧವಿದೆ ಜಗತ್ತಿನಲ್ಲಿ ಚಿತ್ರದುರ್ಗ ಎಂದರೆ ನೆನಪಾಗುವುದು ಚಿತ್ರದುರ್ಗದ ಕೋಟೆಯ ಕಲ್ಲಿನ ಮೇಲೆ ಚೆಲ್ಲಿದಂತಹ ಬಿಸಿ ರಕ್ತದ ನೆನಪು ಕೆಚ್ಚೆದೆಯ ಹೋರಾಟ ಸ್ವಾಭಿಮಾನ ಮತ್ತು ರಾಷ್ಟ್ರಪ್ರೇಮ ಇವುಗಳನ್ನು ಇಮ್ಮಡಿಗೊಳಿಸಿದಂತ ಗಂಡುಗಲಿ ವೀರ ಮದಕರಿ ನಾಯಕ ಮತ್ತು ಒನಕೆ ಓಬವ್ವ ಇಂತಹ ನಾಡಲ್ಲಿ ಅಳುವಿನ ಅಂಚಿನಲ್ಲಿರುವಂತ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳನ್ನು ಇವತ್ತು ಜೀವಂತವಾಗಿರಿಸಿ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟನ್ನು ಇಮ್ಮಡಿಗಳಿಸುವಂತ ಕೆಲಸವನ್ನು ಮಾಡುತ್ತಿರುವುದು ಮುಂದಿನ ಯುವಕರಿಗೆ ಚಿತ್ರದುರ್ಗ ಪರಂಪರೆಯನ್ನು ಪ್ರತಿಬಿಂಬಿಸುವ ಕೆಲಸವಾಗಿದೆ ಇದನ್ನು ಮುಂದುವರಿಸಿಕೊಂಡು ಹೋಗುವಂತೆ ಗೌರಸಮುದ್ರ ಗ್ರಾಮದ ಯುವಕರಿಗೆ ತಹಶೀಲ್ದಾರ್ ಎನ್ ರಘುಮೂರ್ತಿ ಕರೆ ನೀಡಿದರು ಅವರು ಇಂದು ಜಗನ್ಮಾತೆ ಗೌರಸಮುದ್ರ ಮಾರಮ್ಮ ದೇವಿಯ ಜಾತ್ರಾ ಪ್ರಯುಕ್ತ ಏರ್ಪಡಿಸಿ ದಂತಹ ನಾಟಕ ಪ್ರದರ್ಶನದಲ್ಲಿ ಮಾತನಾಡಿ, ಈ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರಜ್ಞೆಯ ಜೊತೆ ಈ ಭಾಗದ ಪ್ರತಿಯೊಬ್ಬ ಸಾರ್ವಜನಿಕರು ಕೂಡ ಶೈಕ್ಷಣಿಕವಾಗಿ ಉತ್ತಮವಾದ ಪ್ರಗತಿ ಸಾಧಿಸಬೇಕು ಪ್ರತಿಯೊಂದು ಕುಟುಂಬದಲ್ಲೂ ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣದತ್ತ ಕೊಂಡೊಯ್ಯಬೇಕು ಶೈಕ್ಷಣಿಕ ನೆಲೆಗಟ್ಟು ಭದ್ರವಾದಾಗ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಹೇಳಿದರು. ಇದೇ ಸಮಯದಲ್ಲಿ ಮಾತನಾಡಿದ ಮಾಜಿ ಶಾಸಕರಾದ ನೆರಲ್ಕುಂಟೆ ತಿಪ್ಪೇಸ್ವಾಮಿ , ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಿಗೂ ತರಿಕೆರೆ ತಾಲೂಕಿನ ಜನತೆಗೂ ಭಾವನಾತ್ಮಕವಾದ ನಂಟಿದೆ ಇಲ್ಲಿಯ ಜನ ಕಲೆಯನ್ನು ಜೀವಂತವಾಗಿಟ್ಟಿದ್ದಾರೆ ಇಲ್ಲಿಯ ಜನರಿಗೆ ಈ ದೇವಿಯ ಭಕ್ತಿ ಪರಾಕಾಷ್ಟೆಗೆ ತಲುಪಿದೆ ಮುಂದಿನ ಪೀಳಿಗೆಗೂ ಕೂಡ ಈ ಪರಂಪರೆಯನ್ನು ಕೊಂಡಯು ಅಗತ್ಯವಿದೆ ನಾನು ಕೂಡ ಪೌರಾಣಿಕ ನಾಟಕಗಳಲ್ಲಿ ಯಾವುದೇ ಚಿತ್ರರಂಗದ ನಟನಿಗೆ ಕಡಿಮೆ ಇಲ್ಲದಂತ ದುರ್ಯೋಧನ ಪಾತ್ರವನ್ನು ನಾನು ಶಾಸಕನಾಗಿದ್ದ ಸಮಯದಲ್ಲಿ ಅಭಿನಯಿಸಿ ಮಾದರಿಯಾಗಿದೆ ಇದರಿಂದಲೇ ಈಗ ಸಚಿವರಾದಂತ ಮುನಿರತ್ನ ಅವರು ಕುರುಕ್ಷೇತ್ರ ಚಿತ್ರವನ್ನು ಮಾಡಲು ದಾರಿಯಾಗಿತ್ತು ಎಂದು ಹೇಳಿದರು ಸಮಾರಂಭದಲ್ಲಿ ವಕೀಲರಾದ ಚಂದ್ರಣ್ಣ ಗ್ರಾಮ ಪಂಚಾಯತಿ ಸದಸ್ಯರಾದಂತ ಓಬಣ್ಣ ಇನ್ನೊಬ್ಬ ವಕೀಲರಾದಂತ ಶಶಿ ಮತ್ತಿತರರು ಉಪಸ್ಥಿತರಿದ್ದರು





