ನರೇಗಾ ಯೋಜನೆ ಅನೇಕ ಕುಟುಂಬಗಳಿಗೆ ದಾರಿದೀಪವಾಗಿದೆ

ಕ್ರೀಡೆ

  1.  
  2.  

ನರೇಗಾ ಯೋಜನೆ ಅಡಿ ಲಕ್ಷಾಂತರ ಅಭಿಯಂತರದ ಹಾಗೂ ಅವರ ಕುಟುಂಬದ ಸದಸ್ಯರಿಗೆ ಈ ಯೋಜನೆ ದಾರಿದೀಪವಾಗಿದೆ. ಜಿಲ್ಲೆಯಲ್ಲಿ ನೂರಾರು ಯುವಕರು ಈ ಯೋಜನೆಯಿಂದ ಉದ್ಯೋಗವನ್ನು ಪಡೆದಿದ್ದಾರೆ ಎಂದುಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿಗಳು ಹಾಗೂ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಚಿತ್ರದುರ್ಗ ಜಿಲ್ಲಾ ಶಾಖೆಯ ಗೌರವಾಧ್ಯಕ್ಷರು ಆಗಿರುವ ಶ್ರೀ ರಂಗಸ್ವಾಮಿ ಹೇಳಿದರು. ಅವರು ಜಿಲ್ಲಾಮಟ್ಟದ ನರೇಗಾ ನೌಕರರ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು ಗ್ರಾಮೀಣಾ ಭಾಗಗಳಲ್ಲಿ ತಾವುಗಳು ಶ್ರಮವಹಿಸಿ ಕೆಲಸ ನಿರ್ವಹಿಸುವಂತೆ ಕಿವಿಮಾತು ಹೇಳಿದರು. ದಿನನಿತ್ಯದ ಕೆಲಸದ ಒತ್ತಡದ ಜಂಜಾಟದಿಂದ ಮುಕ್ತ ರಾಗಲು ಕ್ರೀಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಒತ್ತಡವನ್ನು ನಿವಾರಿಸಿಕೊಂಡು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದರು. ಸದೃಢವಾದ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಸದೃಢ ದೇಶವನ್ನು ಕಟ್ಟೋಣ ಎಂಬ ಮಾತನ್ನು ಹೇಳುತ್ತಾ ಧಾರವಾಡದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಹೆಚ್ಚಿನ ಪದಕಗಳನ್ನು ಗೆಲ್ಲುವ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತನ್ನಿ ಎಂದು ನರೇಗಾ ಯೋಜನೆಯ ನೌಕರರಿಗೆ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ‌ಜಿಲ್ಲಾಧ್ಯಕ್ಷ
ಕೆ ಮಂಜುನಾಥ ಮಾತನಾಡಿ ನರೇಗಾ ಯೋಜನೆಯು ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗವನ್ನು ಒದಗಿಸುವ ಮೂಲಕ ಅವರಿಗೆ ದಾರಿ ದೀಪವಾಗಿದೆ. ದೇಶದಾದ್ಯಂತ ಇರುವ ಕೋಟ್ಯಂತರ ಮಂದಿ ನಿರುದ್ಯೋಗಿಗಳಲ್ಲಿ ಕೆಲವೇ ಮಂದಿ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿದೆ
ಅದರಲ್ಲಿ ತಾವುಗಳ್ಳೆಲ್ಲರು ಅದೃಷ್ಟವಂತರಾಗಿದ್ದು, ಸರ್ಕಾರದ ಯೋಜನೆಯಾದ ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸಿ ಯಶಸ್ವಿಗೊಳಿಸಲು ತಮ್ಮ ಪಾತ್ರ ಮುಖ್ಯವಾದದ್ದು. ಗ್ರಾಮೀಣ ಭಾಗದಲ್ಲಿ ಗ್ರಾಮೀಣ ಜನತೆಗೆ ತಾವುಗಳು ನೇರವಾದ ಒಡನಾಟ ಇರುವುದರಿಂದ ಹಾಗೂ ತಾವುಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಇಂಜಿನಿಯರ್ ಗಳಾಗಿರುತ್ತೀರಿ. ಈ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರ ಸಾವಿರಾರು ಕೋಟಿಗಳ ಅನುದಾನವನ್ನು ಮೀಸಲಿಟ್ಟಿದೆ. ಸದರಿ ಯೋಜನೆಯ ಅನುದಾನದ ಸದುಪಯೋಗವನ್ನು ಗ್ರಾಮೀಣ ಭಾಗದ ಅನ್ನದಾತರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಮಕ್ಕಳಿಗೆ, ಬಡವರಿಗೆ, ಅಶಕ್ತರಿಗೆ, ದೀನದಲಿತರಿಗೆ, ವಯೋವೃದ್ಧರಿಗೆ, ಶೋಷಿತರಿಗೆ ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಕರ್ತವ್ಯ ಮತ್ತು ಜವಾಬ್ದಾರಿ ತಮ್ಮದಾಗಿರುತ್ತದೆ.

 

 

ಜೊತೆಗೆ ತಾವುಗಳು ಕೂಡ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ ಯೋಜನೆಯ ಮೂಲ ಉದ್ದೇಶವನ್ನು ಈಡೇರಿಸಬೇಕೆಂದು ತಿಳಿಸಿದರು.

ಅದೇ ರೀತಿ ರಾಜ್ಯಮಟ್ಟದ ಕ್ರೀಡಾಕೂಟ ಧಾರವಾಡದಲ್ಲಿ ನಡೆಯುತ್ತಿರುವುದರಿಂದ ಧಾರವಾಡದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಚಿತ್ರದುರ್ಗವನ್ನು ಪ್ರತಿನಿಧಿಸುವ ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೆಚ್ಚಿನ ಬಹುಮಾನ, ಪದಕಗಳನ್ನು ಪಡೆಯುವ ಮೂಲಕ ಚಿತ್ರದುರ್ಗದ ಕೀರ್ತಿಪತಾಕೆಯನ್ನು ಚಿತ್ರದುರ್ಗದ ಗೌರವವನ್ನು ಉಳಿಸಿ ಗೌರವಿಸಬೇಕೆಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನರೇಗಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೆಂಚೇಗೌಡ, ನರೇಗಾ ಯೋಜನೆಯ ಮೋಹನ್ ಕುಮಾರ್, ರವಿಕುಮಾರ್, ಪ್ರತಾಪ್, ತೀರ್ಪುಗಾರರಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಶ್, ಮಹಿಳಾ ನೌಕರರು ಹಾಗೂ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *