ಚಿತ್ರದುರ್ಗ ಜಿಲ್ಲಾ ಮೂರನೆಯ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ನೇಮಕಗೊಂಡು ಆಗಮಿಸಿರುವ ನ್ಯಾಯಾಧೀಶರಾದ ಸಹನಾ ಅವರನ್ನು ಜಿಲ್ಲಾ ವಕೀಲರ ಸಂಘದಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು

ಸ್ವಾಗತ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಸಿ ಶಿವು ಯಾದವ್ ವಹಿಸಿ ಮಾತನಾಡಿ ಸುಮಾರು ವರ್ಷಗಳಿಂದ ನ್ಯಾಯಾಧೀಶರು ನೇಮಕಗೊಳ್ಳದೆ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಸಹನಾ ರವರು ಆಗಮಿಸಿರುವುದು ತುಂಬಾ ಸಂತೋಷದಾಯಕ ವಿಷಯವಾಗಿದೆ ಸಹನಾ ರವರು ಹೊಸದಾಗಿ ನ್ಯಾಯಾಧೀಶರಾಗಿ ಆಯ್ಕೆಯಾಗಿ ಚಿತ್ರದುರ್ಗಕ್ಕೆ ನೇಮಕಗೊಂಡು ಆಗಮಿಸುತ್ತಿರುವುದು ತುಂಬಾ ಸಂತೋಷದಾಯಕ ವಿಷಯವಾಗಿದೆ ಅವರ ನ್ಯಾಯಾಧೀಶರ ವೃತ್ತಿಜೀವನವು ಚಿತ್ರದುರ್ಗದಿಂದ ಆರಂಭಿಸುತ್ತಿದ್ದಾರೆ ಅವರ ಮುಂದಿನ ನ್ಯಾಯಾಧೀಶರ ವೃತ್ತಿಜೀವನವು ಸುಂದರವಾಗಿರಲಿ ಎಂದು ಹಾರೈಸಿದರು ಹೊಸದಾಗಿ ಆಗಮಿಸಿರುವ ಸಹನ ರವರಿಗೆ ನ್ಯಾಯದಾನ ವಿಚಾರದಲ್ಲಿ ಎಲ್ಲಾ ರೀತಿಯಿಂದಲೂ ವಕೀಲರ ಸಂಘದಿಂದ ಸಹಕಾರ ನೀಡಲಾಗುವುದು ತ್ವರಿತ ನ್ಯಾಯದಾನದಲ್ಲಿ ನ್ಯಾಯಾಧೀಶರ ಮತ್ತು ವಕೀಲರ ಪರಸ್ಪರ ಸಹಕಾರ ಅತ್ಯವಶ್ಯಕವಾಗಿರುತ್ತದೆ ಎಂದು ತಿಳಿಸಿದರು ಮತ್ತು ನೂತನವಾಗಿ ಆಯ್ಕೆಯಾಗಿ ನೂತನವಾಗಿ ಬಂದಿರುವ ನ್ಯಾಯಾಧೀಶರಿಗೆ ಪುಷ್ಪಗುಚ್ಛ ನೀಡುವುದರ ಮೂಲಕ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪ್ರೇಮವತಿ ಮನಗೂಳಿ ಅವರು ಮಾತನಾಡಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಸಹನಾ ರವರನ್ನು ನೇಮಕ ಮಾಡಿರುವುದು ಸಂತೋಷದಾಯಕ ವಿಷಯವಾಗಿದೆ ತಮ್ಮ ಕೆಲಸ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಲಿ ನ್ಯಾಯಾಂಗದಿಂದ ಎಲ್ಲಾ ಸಹಕಾರ ನೀಡಲಾಗುವುದು ಎಂದು ತಿಳಿಸಿದರು
ಸಮಾರಂಭದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಕಲ್ಕಣಿಯವರು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆಂಪರಾಜುರವರು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿಕೆ ಗಿರೀಶ್ ರವರು ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂಮೂರ್ತಿ ಸಹ ಕಾರ್ಯದರ್ಶಿ ವಿಶ್ವನಾಥ್ ರೆಡ್ಡಿ ಖಜಾಂಚಿ ಅಜ್ಜಯ ಮತ್ತು ಸಂಘದ ಪದಾಧಿಕಾರಿಗಳು ಮತ್ತು ವಕೀಲರು ಭಾಗವಹಿಸಿದ್ದರು.
ಸುದ್ದಿ ಜಾಹೀರಾತಿಗೆ ಸಂಪರ್ಕಿಸಿ: 8660924503





