ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಹೋಬಳಿ ಮಲ್ಲೂರಹಟ್ಟಿ ಗ್ರಾಮದ ಮಹಂತೇಶ್ 48 ವರ್ಷ ಇವರು ಸಿಡಿಲು ಬಡಿತದಿಂದ ಮೃತಪಟ್ಟಿದ್ದು ಇವರ ಕುಟುಂಬ ಶಂಕರಮ್ಮ ಇವರಿಗೆ ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ಬುಡಕಟ್ಟು ಕಲ್ಯಾಣ ಮಂತ್ರಿ ಶ್ರೀರಾಮುಲು ರವರು 5 ಲಕ್ಷ ರೂಗಳ ಚೆಕ್ಕನ್ನು ಇಂದು ವಿತರಣೆ ಮಾಡಿದರು.
ಸದರಿ ಸಂತ್ರಸ್ತರ ಮನೆಗೆ ಇಂದು ವಿಧಾನ ಪರಿಷತ್ ಸದಸ್ಯರಾದ ಶ್ರೀ ನವೀನ್ ಮತ್ತು ತಹಸಿಲ್ದಾರ್ ಎನ್ ರಘುಮೂರ್ತಿ ಅವರೊಂದಿಗೆ ಭೇಟಿ ನೀಡಿ ಸಂತ್ರಸ್ಥರನ್ನು ಸಾಂತ್ವಾನಗೊಳಿಸಿ 5 ಲಕ್ಷ ರೂಗಳ ಚೆಕ್ ವಿತರಣೆ ಮಾಡಿ ಮುಂದಿನ ದಿನಗಳಲ್ಲಿ ಸರ್ಕಾರದಿಂದ ದೊರೆಯಬಹುದಾದ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಕೊಡಿಸುವುದಾಗಿ ಕುಟುಂಬದಲ್ಲಿನ ಮಕ್ಕಳಿಗೆ ಅಗತ್ಯ ವಿದ್ಯಾಭ್ಯಾಸದ ಕುರಿತಂತೆ ಮತ್ತು ನೆರವಿನ ಕುರಿತಂತೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಹಶೀಲ್ದಾರ್ ಎನ್ ರಘುಮೂರ್ತಿ ಅವರಿಗೆ ಸೂಚಿಸಿದರು ಇದೇ ಸಂದರ್ಭದಲ್ಲಿ ವಕೀಲರಾದ ಅಶ್ವತ ನಾಯಕ ಬಿಜೆಪಿ ಮಂಡಲ ಅಧ್ಯಕ್ಷ ರಾಮರೆಡ್ಡಿ ಪಾಪೇಶ್ ನಾಯ್ಕ ಪಟೇಲ್ ಎಸ್ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು





