ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಸಂವಿಧಾನದ ಆಶಯಗಳನ್ನು ನಾವು ಪರಿಪೂರ್ಣವಾಗಿ ಪಾಲಿಸಿದ್ದೆ ಆದಲ್ಲಿ ಸಮಾಜದ ಋಣವನ್ನು ನಾವು ತೀರಿಸಿದಂತಾಗುತ್ತದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿಹೇಳಿದ್ದಾರೆ ಮೊಳಕಾಲ್ಮೂರು ತಾಲೂಕಿನ ತಾಲೂಕು ವಕೀಲ ನಗರ ಸಂಘದಿಂದ ಅಂಬೇಡ್ಕರ್ ಪರಿನಿಬ್ಬಾಣ ದಿನವನ್ನು ಉದ್ಘಾಟಿಸಿ ಮಾತನಾಡಿ ಅಂಬೇಡ್ಕರ್ ರವರಿಗೆ ತಮ್ಮ ಜೀವನದಲ್ಲಿ ಎಷ್ಟೊಂದು ನೋವು ಅಸ್ಪೃಶ್ಯತೆ ಅಸಮಾನತೆ ಘೋಷಣೆ ಇದ್ದರೂ ಕೂಡ ಎಲ್ಲದಕ್ಕಿಂತ ಮಿಗಿಲಾದ ನೋವು ಪೂನ ಒಪ್ಪಂದ ಮತ್ತು ಹಿಂದೂ ಕೋಡ್ಬಿಲ್ ಮಂಡನೆಗೆ ವೈಫಲ್ಯವಾದಾಗ ಕಂಡುಬಂದಿತ್ತು ಹಾಗಾಗಿ ಅವರು ಹಿಂದೂ ಆಗಿ ಹುಟ್ಟುವುದು ನನ್ನ ಕೈಯಲ್ಲಿ ಇರಲಿಲ್ಲ ಆದರೆ ನಾನು ಹಿಂದುವಾಗಿ ಸಾಯುವುದಿಲ್ಲ ಎಂದು ಹೇಳಿ ತಮ್ಮ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ್ದು ಕಾರ್ಲ್ ಮಾರ್ಕ್ಸ್ ಮತ್ತು ಬುದ್ಧನ ಪುಸ್ತಕಗಳನ್ನು ಪ್ರಕಟಿಸಲು ಹಣದ ಅವಶ್ಯಕತೆ ಇದ್ದರೂ ಕೂಡ ಸಹಾಯ ಮಾಡಲು ಯಾರು ಮುಂದೆ ಬರಲಿಲ್ಲ ಇದರ ನೋವು ಕೂಡ ಅವರಿಗೆ ಅತಿಯಾಗಿ ಕಾಡಿತ್ತು ಎಲ್ಲದಕ್ಕಿಂತ ಮಿಗಿಲಾಗಿ ಇಡೀ ನನ್ನ ಜೀವನವನ್ನು ಸಮಾಜಕ್ಕೋಸ್ಕರ ಮುಡಪಾಗಿಟ್ಟು ಸಂವಿಧಾನವನ್ನು ರಚಿಸಿ ಸಂವಿಧಾನದ ಸವಲತ್ತುನ್ನು ಪಡೆದಂತ ಅಧಿಕಾರಿ ನೌಕರರು ಮತ್ತು ಉದ್ಯೋಗಿಗಳು ಸಮಾಜದಲ್ಲಿ ಸ್ವಾರ್ಥಿಗಳಾಗಿ ಬದುಕುತ್ತಿದ್ದನ್ನು ಮತ್ತು ಈ ಜನಾಂಗದವರ ಏಳಿಗೆಗೆ ಮುಂದಾಗದೆ ಇರುವುದ ಪ್ರಸ್ತಾಪಿಸಿ ತನ್ನ ಕೊನೆಯ ದಿನಗಳಲ್ಲಿ ಅತೀವವನ್ನು ನೋವನ್ನುತೋಡಿಕೊಂಡಿದ್ದರು ಹಾಗಾಗಿ ಇಂದಿನ ಕಾರ್ಯಾಂಗ ನ್ಯಾಯಾಂಗ ಮತ್ತು ಶಾಸಕಾಂಗದಲ್ಲಿ ಕೆಲಸ ನಿರ್ವಹಿಸುತ್ತಿರುವ ನಾವುಗಳು ಅದರಲ್ಲೂ ಈ ಒಂದು ಮೀಸಲಾತಿಯನ್ನು ಉಪಯೋಗಿಸಿಕೊಂಡ ನಾವುಗಳು ಅಂಬೇಡ್ಕರ್ ಅವರ ಆಶಯ ಶೋಷಿತರಾ ದೀನದಲಿತರ ಅಸಹಾಯಕರ ಮತ್ತು ಬಡವರ ಪರ ನಿಂತು ಕೆಲಸ ಮಾಡಬೇಕಿದೆ ಈ ನಿಟ್ಟಿನಲ್ಲಿ ನಾವು ಇಂದು ಒಂದು ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು ಹಿರಿಯ ವಕೀಲರಾದ ರಾಜಶೇಖರ್ ನಾಯಕ ಮಾತನಾಡಿ ಚಳ್ಳಕೆರೆ ತಾಲ್ಲೂಕಿನಲ್ಲಿ ತಹಸಿಲ್ದಾರ್ ರಘುಮೂರ್ತಿಯವರು ಸಾಕಷ್ಟು ಜನ ಸ್ನೇಹಿಯಾಗಿ ಮತ್ತು ಜನಪರವಾಗಿ ಸಮಾಜಮುಖಿಯಾದ ಕೆಲಸ ನಿರ್ವಹಿಸಿದ್ದಾರೆ ಅಂಬೇಡ್ಕರ್ ಅವರ ಆಶಯಗಳನ್ನು ಪರಿಪಾಲಿಸಿದ್ದಾರೆ ಇಂದಿನ ಅಧಿಕಾರಿಅಂಬೇಡ್ಕರ್ ಅವರ ಆಶಯಗಳನ್ನು ಪರಿಪಾಲಿಸಿದ್ದಾರೆ ಇಂದಿನ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ನಾವೆಲ್ಲರೂ ಕೂಡ ಅಂಬೇಡ್ಕರ್ ಅವರ ಆದರ್ಶಗಳು ತತ್ವಗಳನ್ನು ನಮ್ಮ ಜೀವನದಲ್ಲಿ ಪರಿಪಾಲಿಸೋಣ ಎಂದರು ವಕೀಲರಾದಂತ ವಸಂತ್ ಕುಮಾರ್ ಮತ್ತು ಚಂದ್ರಪ್ಪ ಮಾತನಾಡಿದರು ವಕೀಲರ ಸಂಘದ ಅಧ್ಯಕ್ಷರಾದಂತ ಆನಂದಪ್ಪ ಮಾತನಾಡಿ ಯುವ ವಕೀಲರು ಸಂಕಷ್ಟದಲ್ಲಿದ್ದು ಇವರ ನಿವೇಶನಕ್ಕಾಗಿ ಮೂರು ಎಕರೆ ಜಮೀನನ್ನು ನಂಬಿಸಲಿರಿಸಬೇಕಾಗಿ ಮನವಿ ಸಲ್ಲಿಸಿದರು ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಆನಂದಪ್ಪ ಹಿರಿಯ ವಕೀಲರಾದ ರಾಜಶೇಖರ ನಾಯಕ್ ವಸಂತಕುಮಾರ್ ಚಂದ್ರಪ್ಪ ಮತ್ತು ಇತರರು ಉಪಸ್ಥಿತರಿದ್ದರು





