ಕಂದಾಯ ಇಲಾಖೆ ತಹಶೀಲ್ದಾರ್ ಮತ್ತು ಸಿಬ್ಬಂದಿ ವರ್ಗದವರು ಕೆಲಸ ನಿರ್ವಹಿಸುವ ರೀತಿಯಲ್ಲಿಯೇ ಇತರೆ ಇಲಾಖೆಯ ಅಧಿಕಾರಿಯ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸಿದರೆ ಮಾತ್ರ ಜಿಲ್ಲಾಧಿಕಾರಿಗಳ ನಡೆ ಯ ಕಡೆ ಎಂಬ ಕಾರ್ಯಕ್ರಮದ ಗ್ರಾಮ ವಾಸ್ತವ್ಯಕ್ಕೆ ಒಂದು ಸರಿಯಾದ ಅರ್ಥ ಕಲ್ಪಿಸುವಂತಾಗುತ್ತದೆ ಎಂದು ಚಳ್ಳಕೆರೆ ಶಾಸಕರಾದ ಟಿ ರಘುಮೂರ್ತಿ ಹೇಳಿದರು ಅವರು ದೊಡ್ಡ ಚೆಲ್ಲೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಯ ಕಡೆ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಂದು ಇಲಾಖೆಯ ಅಧಿಕಾರಿ ನೌಕರರುಗಳು ಬದ್ಧತೆಯಿಂದ ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸಿ ಒಂದು ವಾರ ಮುಂಚಿತವಾಗಿ ಗ್ರಾಮದಲ್ಲಿ ಮಕ್ಕಾ ಮಾಡಿ ಭಾದಿತರಿಂದ ಅರ್ಜಿ ಸ್ವೀಕರಿಸಿ ಈ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಿ ಜಿಲ್ಲಾಧಿಕಾರಿಗಳ ನಡೆಯ ಕಡೆ ವಾಸ್ತವ್ಯದ ಕಾರ್ಯಕ್ರಮದಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದಲ್ಲಿ ಮಾತ್ರ ಸಾರ್ವಜನಿಕರಿಗೆ ಈ ಕಾರ್ಯಕ್ರಮದ ಮುಖಾಂತರ ಸ್ಪಂದಿಸಿದಂತಾಗುತ್ತದೆ ಕಂದಾಯ ಇಲಾಖೆಯ ತಹಶೀಲ್ದಾರ್ ಮತ್ತು ಸಿಬ್ಬಂದಿ ವರ್ಗದವರು ಈ ಕೆಲಸವನ್ನು ಮಾಡಿ ಕಂದಾಯ ಇಲಾಖೆಯ ಸಮಸ್ಯೆಗಳನ್ನು ನೂರಕ್ಕೆ ನೂರರಷ್ಟು ಬಗೆಹರಿಸಿದ್ದಾರೆ ಮುಂದಿನ ಒಂದುವ ತಿಂಗಳಲ್ಲಿ ಪುನಃ ಇದೇ ಗ್ರಾಮಕ್ಕೆ ಇದೇ ರೀತಿ ಭೇಟಿ ನೀಡಿದಾಗ ಕಂದಾಯ ಇಲಾಖೆ ಹೊರತುಪಡಿಸಿದ ಇಲಾಖೆಗಳ ಅಧಿಕಾರಿ ನೌಕರರುಗಳು ಖುದ್ದು ಹಾಜರಿದ್ದು ಬಾಕಿ ಉಳಿದಂತಹ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸೂಚನೆ ನೀಡಿದರು ಸೂಚನೆ ನೀಡಿದರು ನೀಡಿದರು ಪ್ರಾಸ್ತಾವಿಕವಾಗಿ ಮಾತನಾಡಿದ ಎನ್ ರಘುಮೂರ್ತಿ ರಾಜ್ಯ ಸರ್ಕಾರದ ಆಶಯದಂತೆ ಅಮಾಯಕರು ಅವಲರೂ ಮತ್ತು ಶೋಷಿತರು ಸರ್ಕಾರಿ ಕಚೇರಿಗಳನ್ನು ಆರಿಸಿಕೊಂಡು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಕಚೇರಿಗಳಿಗೆ ಅಲೆಯಬಾರದು ಇದರಿಂದ ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗುತ್ತದೆ ಎಂಬುದು ಸರ್ಕಾರದ ಉದ್ದೇಶ ಇದನ್ನರಿತು ಚಳ್ಳಕೆರೆ ತಾಲೂಕಿನಲ್ಲಿ ಈಗಾಗಲೇ 20 ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳು 78 ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ ಈ ಗ್ರಾಮಗಳಲ್ಲಿ ಪಾವತಿ ಖಾತೆ ಓಡಿ ದುರಸ್ತಿ ಸ್ಮಶಾನದ ಸಮಸ್ಯೆಗಳು ದಾರಿ ಸಮಸ್ಯೆಗಳು
ಸಮಸ್ಯೆಗಳು ಪಿಂಚಣಿ ಸಂಸ್ಥೆಗಳು ರೈತರ ಬೆಳೆ ಪರಿಹಾರದ ಸಮಸ್ಯೆಗಳು ಇನ್ನೂ ಹತ್ತು ಹಲವು ಕಂದಾಯ ಇಲಾಖೆಯ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗಿದೆ ಕೆಲವೊಂದು ವಿವಾದದ ಪ್ರಕರಣಗಳನ್ನು ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ನಿರ್ದಿಷ್ಟವಾದಂತ ದಾಖಲೆಗಳನ್ನು ಕೊಡದೆ ಇರುವ ಪ್ರಕರಣಗಳನ್ನು ಬಗೆಹರಿಸಲಾಗಿಲ್ಲ ಮುಂದಿನ ದಿನಗಳಲ್ಲಿ ಈ ಪ್ರಕರಣಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಹಾಗೂ ಸರ್ಕಾರದ ಆಶಯದಂತೆ ತಾಲೂಕಿನಲ್ಲಿರುವಂತಹ ಎಲ್ಲ ಗ್ರಾಮಗಳನ್ನು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲು ತಾಲೂಕು ಆಡಳಿತ ಒಂದು ಸಂಕಲ್ಪ ಮಾಡಿದೆ ಎಂದು ಹೇಳಿದರು ಸಮಾರಂಭಕ್ಕೂ ಮುನ್ನ ಶಾಸಕರನ್ನು ಮತ್ತು ತಹಶೀಲ್ದಾರ್ ಅವರನ್ನು ಜನಪದ ಶೈಲಿಯ ಎತ್ತಿನ ಗಾಡಿಯಲ್ಲಿ ಮತ್ತು ಕಲಾವೃಂದದೊಂದಿಗೆ ಮೆರವಣಿಗೆಯಲ್ಲಿ ಪೂರ್ಣ ಕುಂಭದೊಂದಿಗೆ ಕರೆ ತರಲಾಯಿತು ಸಮಾರಂಭದಲ್ಲಿ ತಾಲೂಕ್ ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಹೊನ್ನಯ್ಯ ದೊಡ್ಡ ಚೆಲ್ಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸುಮಾ ತಿಮ್ಮರಾಯ ಪಂಚಾಯತಿಯ ಎಲ್ಲ ಸದಸ್ಯರುಗಳು ಮಾಜಿ ಗ್ರಾಮ್ ಪಂಚಾಯ್ತಿ ಅಧ್ಯಕ್ಷ ಚಿದಾನಂದಪ್ಪ ಮುಖಂಡರಾದ ಕೇಶವ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು





