ವಿವಿ ಸಾಗರ ಡ್ಯಾಂ ಭರ್ತಿಗೆ ದಿನಗಣನೆ ಆರಂಭ, ನದಿ ಪಾತ್ರದ ಜನರು ಎಚ್ಚರಿಕೆಯಿಂದರಲೂ ಅಧಿಕಾರಿಗಳ ಸೂಚನೆ
ಚಿತ್ರದುರ್ಗ : ಬಯಲು ಸೀಮೆಯ ಏಕೈಕ ಜೀವನಾಡಿಯಾಗಿರುವ ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ಭರ್ತಿಗೆ ದಿನಗಣನೆ ಆರಂಭವಾಗಿದ್ದು, ಈ ವರ್ಷ ಬಹುತೇಕ ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಹವಾಗುವ ಸಂಭವ ಇರುವುದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದರಲೂ ಹಿರಿಯೂರು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
88 ವರ್ಷಗಳ ಬಳಿಕ ವಿವಿ ಸಾಗರ ಜಲಾಶಯ ದಾಖಲೆ ಬರೆಯಲಿದೆ. 1933 ರಲ್ಲಿ 135.25 ಜಲಾಶಯ ಭರ್ತಿಯಾಗಿ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ಇದೀಗ 88 ವರ್ಷಗಳ ಬಳಿಕ ಎರಡನೇ ಬಾರಿಗೆ ಡ್ಯಾಂ ತುಂಬಿ ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ.
” ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಹೊಸದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಹರಿಯುವ ವೇದಾವತಿ ನದಿ ಪಾತ್ರದ ಇಕ್ಕೆಲಗಳಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸಾರ್ವಜನಿಕರಿಗೆ ವಾಣಿ ವಿಳಾಸ ಜಲಾಶಯದ ನೀರಿನ ಮಟ್ಟ 126.75 ಅಡಿ ( ಶುಕ್ರವಾರ) ಒಟ್ಟು ಪ್ರಮಾಣ 27.238 ಟಿಎಂಸಿ ಎಷ್ಟು ನೀರು ಸಂಗ್ರವಾಗಿರುತ್ತದೆ. ಇದು 88 ವರ್ಷಗಳ ನಂತರ ದಾಖಲೆಯಾಗಿದ್ದು ಕೋಡಿ ಬೀಳಲು ಕೇವಲ 3.25 ಅಡಿಯಷ್ಟು ನೀರು ಬಾಕಿ ಇರುತ್ತದೆ.
ಅವಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಹೆಚ್ಚಿನ ಮಳೆಯಾಗುವ ಸಂಭವಿರುವುದರಿಂದ ಜಲಾಶಯ ಭರ್ತಿಗೆ ದಿನಗಡನೆ ಆರಂಭವಾಗಿದ್ದು, ಸ್ವಾಭಾವಿಕವಾಗಿ ಕೋಡಿ ಬೀಳುವ ಹೆಚ್ಚುವರಿ ನೀರು ಹೊರ ಹೋಗುವ ಸಂಭವಿಸುತ್ತದೆ. ಆದ್ದರಿಂದ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಮತ್ತು ಹೊಸದುರ್ಗ ತಾಲೂಕಿನ ವ್ಯಾಪ್ತಿಯಲ್ಲಿ ಹರಿಯುವ ವೇದಾವತಿ ನದಿ ಪಾತ್ರದ ಈ ಕೆಲಗಳ ತಗ್ಗು ಪ್ರದೇಶಗಳಲ್ಲಿ ಬರುವ ಗ್ರಾಮಸ್ಥರು ಮತ್ತು ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಾಗಿ ಜನ ಜಾನುವಾರುಗಳು, ನದಿ ಪಾತ್ರದಲ್ಲಿ ಓಡಾಡದಂತೆ ಹಾಗೂ ತಮ್ಮ ಆಸ್ತಿಪಾಸ್ತಿ ಸಂರಕ್ಷಣೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಈ ಮೂಲಕ ಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದ ಗ್ರಾಮಗಳು : ಹಿರಿಯೂರು ತಾಲೂಕಿನ ವಾಣಿವಿಲಾಸಪುರ, ಕಾತ್ರಿಕೇನಳ್ಳಿ, ಲಕ್ಕವನಹಳ್ಳಿ, ಹಿರಿಯೂರು ನಗರ, ಮಾರುತಿ ನಗರ, ರಂಗನಾಥಪುರ, ಯಳನಾಡು, ಕೂಡ್ಲಳ್ಳಿ, ಸೂರನಹಳ್ಳಿ ಹಾಗೂ ಹಿರಿಯೂರು, ಹೊಸದುರ್ಗ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನ ವೇದಾವತಿ ನದಿ ಪಾತ್ರದ ಗ್ರಾಮಗಳು ವೇದಾವತಿ ನದಿ ಪಾತ್ರದಲ್ಲಿವೆ. ಒಂದು ವೇಳೆ ಡ್ಯಾಂ ಭರ್ತಿಯಾಗಿ ಹೆಚ್ಚು ನೀರು ಹೊರ ಬಂದರೆ ಕೆಲವು ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಇರುವುದರಿಂದ ಜನರಲ್ಲಿ ಆತಂಕ ಸೃಷ್ಟಿಸಿದೆ ಎನ್ನಲಾಗಿದೆ.

ಕಳೆದ ತಿಂಗಳು ಹಾಗೂ ಈ ಈ ತಿಂಗಳ ಸತತ ಮಳೆಯಿಂದ ನೀರು ವಿವಿ ಸಾಗರಕ್ಕೆ ಹರಿದು ಬರುತ್ತಿದೆ. ಇಂದಿನ ವರದಿಯಲ್ಲಿ 2569 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 126.75 ಅಡಿ ಸಂಗ್ರಹವಾಗಿದೆ. ಕಳೆದ 2021 ರಲ್ಲಿ 125.50 ಅಡಿ ನೀರು ಸಂಗ್ರಹವಾಗಿ ದಾಖಲೆ ನಿರ್ಮಾಣವಾಗಿತ್ತು. ಇದೀಗ ಈ ದಾಖಲೆಯನ್ನು ಸರಿಗಟ್ಟುವ ಮೂಲಕ 88 ವರ್ಷಗಳ ಬಳಿಕ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಕೋಡಿ ಬೀಳಲು ಕೆಲವು ಅಡಿಗಳು ಬಾಕಿ ಅಂದರೆ 3.28 ಅಡಿ ನೀರು ಬರಬೇಕಿದೆ.
ಕಳೆದ ತಿಂಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಈ ವರ್ಷ ಜಲಾಶಯಕ್ಕೆ 6.75 ಅಡಿಗಳಷ್ಟು ಮಳೆ ನೀರು ಸಂಗ್ರಹವಾಗಿದೆ. 1932 ರಲ್ಲಿ 125.50, 1933 ರಲ್ಲಿ 135.25, 1934 ರಲ್ಲಿ 130.24 ಅಡಿ ನೀರು ಸಂಗ್ರಹವಾಗಿ ಇತಿಹಾಸ ನಿರ್ಮಿಸಿತ್ತು. ತದನಂತರ 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958 ರಲ್ಲಿ 124.25 ಅಡಿ ನೀರು ಸಂಗ್ರಹವಾಗಿತ್ತು. ಇದಾದ ಬಳಿಕ 2000ನೇ ಇಸವಿಯಲ್ಲಿ 122.50 ಅಡಿ, 2021ರಲ್ಲಿ 125.50 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಇದೀಗ 1958ರ ದಾಖಲೆಯನ್ನು ಹಿಂದಿಕ್ಕಿ ಡ್ಯಾಂ ನೀರಿನ ಮಟ್ಟ 125.50 ಅಡಿ ದಾಟಿ ಹೊಸ ದಾಖಲೆಯನ್ನು ನಿರ್ಮಿಸಲು ದಿನಗಣನೆ ಆರಂಭವಾಗಿದೆ.
2019 ರಲ್ಲಿ ಡೆಡ್ ಸ್ಟೋರೇಜ್ ತಲುಪಿದ್ದ ಡ್ಯಾಂ : ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಬತ್ತಿ ಹೋಗಿ, 63 ಅಡಿಗೆ ಡೆಡ್ ಸ್ಟೋರೆಜ್ ತಲುಪಿದ್ದ ಡ್ಯಾಂ, ದಿನ ಕಳೆದಂತೆ ನೀರಿನ ಮಟ್ಟ ತುಂಬುವ ಹಂತಕ್ಕೆ ಬಂದು ನಿಂತಿದೆ. ಇದರಿಂದ ಹಿರಿಯೂರು ತಾಲ್ಲೂಕಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳಿಗೆ ಹೊಸ ಚಿಗುರು ಬಂದಿದೆ.





