ಚಿತ್ರದುರ್ಗ ಮುರುಘಾ ಮಠದಲ್ಲಿ ಮಗು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ತಿರುವು ಸಿಕ್ಕಿದೆ.
ಡಿಸೆಂಬರ್ ತಿಂಗಳಲ್ಲಿ ಬೆಳ್ಳಂಬೆಳಗ್ಗೆ ಮಠದ ಆವರಣದಲ್ಲಿ ಮಗು ಆಳುತ್ತಿದ್ದ ಶಬ್ದ ಕೇಳಿದ ಮಠದ ಎದುರು ಟೀ ಮಾರುವ ಮಹಿಳೆಯೊರ್ವರು ಹೋಗಿ ನೋಡಿದ್ದಾರರೆ. ಆಗ ಮಗು ಮೈ ಮೇಲೆ ಬಟ್ಟೆಯೆ ಇರಲಿಲ್ಲ, ಕುತ್ತಿಗೆಗೆ ಬರೀ ಪೇಪರ್ ಇತ್ತು. ಅದರಲ್ಲಿ ಮಗುವನ್ನು ಮಠಕ್ಕೆ ಕೊಡಬೇಕು ಅದು ಅಲ್ಲಿಯೇ ಬೆಳೆಯಬೇಕು ಎಂದು ಬರೆಯಲಾಗಿತ್ತು.ನಾನು ನೋಡಿ ಮಗುವನ್ನು ಕರೆದುಕೊಂಡು ಬಂದೆ ಅದಕ್ಕು ಮೊದಲು ಮಗುವಿನ ಕುತ್ತಿಗೆಯಲ್ಲಿದ್ದ ಪೇಪರ್ ತೆಗೆದುಕೊಂಡು ಹೋದ ಸೆಕ್ಯೂರಿಟಿ ಶರಣರಿಗೆ ತೋರಿಸಿದ್ದಾರೆ.ಅವರು ಸೆಕ್ಯೂರಿಟಿ ಜೊತೆಗೆ ಒಂದು ಹುಡುಗನನ್ನು ಕಳುಹಿಸಿ ಮಗುವನ್ನು ಕೊಡುವಂತೆ ಕೇಳಿದರು.ಆದರೆ ನಾನೇ ಸಾಕಿಕೊಳ್ಳುತ್ತೇನೆ ಎಂದಾಗ ಅವರು ಕೊಡಲಿಲ್ಲ ಮಠಕ್ಕೆ ಕರೆದುಕೊಂಡು ಹೋದರು, ನಂತರ ನಮ್ಮ ಊರಿವರೆಲ್ಲ ಬಂದು ಮಗು ಯಾಕೆ ಕೊಟ್ಟೆ ಎಂದು ಕೇಳಿದಾಗ ಮಠದಲ್ಲಿಯೇ ಬೆಳೆಯಬೇಕು ಎಂದು ಚೀಟಿ ಬರೆಯಲಾಗಿತ್ತು. ಅವರು ತೆಗೆದುಕೊಂಡು ಹೋದರು ಎಂದು ಹೇಳಿದ್ದು, ಊರಿನ ಜನರು ಸ್ವಾಮೀಜಿ ಬಳಿ ಹೋಗಿ ಮಗು ಕೊಡುವಂತೆ ಕೇಳಿದ್ದು, ಸ್ವಾಮೀಜಿ ಮಗುವಿನ ಭದ್ರತೆಗೆ ಆರ್ಥಿಕ ಸ್ಥಿತಿಬಗ್ಗೆ ವಿಚಾರಿಸಿದ್ದಾರೆ ಇದರಿಂದ ಅವರೂ ಕೂಡ ವಾಪಾಸ್ಸು ಬಂದಿದ್ದು ಅಂದಿನಿಂದ ಆ ಮಗು ಅಲ್ಲಿಯೇ ಬೆಳೆಯುತ್ತಿದೆ ಎಂದು ಟೀ ಮಾರುವ ಮಹಿಳೆ ಫೈರೋಜಾ ಹೇಳಿದರು





