ಕೇಂದ್ರ ಅಧಿಸೂಚನೆ ಹೊರಡಿಸಿದ್ದರೂ ರಾಜ್ಯ ಸರ್ಕಾರ ಶಿವಸಿಂಪಿ ಸಮಾಜಕ್ಕೆ 2 ಎ ಮೀಸಲಾಯಿತಿ ಕೊಡುತ್ತಿಲ್ಲ,ರಾಜ್ಯಸರ್ಕಾರವೂ ಶಿವಸಿಂಪಿ ಸಮಾಜಕ್ಕೆ 2 ಎ ಮೀಸಲು ಕೊಡಬೇಕೆಂಬ ಬೇಡಿಕೆ ನನ್ನ ಗಮನದಲ್ಲಿದೆ. ಬೇಡಿಕೆ ಈಡೇರಿಸುವಂತೆ ಕೋರಿ ನಾನೂ ಕೂಡ ಈಗಾಗಲೇ ಸಿಎಂಗೆ ಪತ್ರ ಬರೆದಿದ್ದೇನೆ. ಸಮಾಜ ಕಲ್ಯಾಣ ಸಚಿವರಿಗೂ ಮನವಿ ಮಾಡಿದ್ದೆನೆ ಎಲ್ಲ ಜಿಲ್ಲೆಗಳಲ್ಲೂ ಸಮಾಜದವರು ಎಲ್ಲ ಶಾಸಕರ ಮೇಲೆ ಬೇಡಿಕೆ ಈಡೇರಿಸುವಂತೆ ಒತ್ತಡ ಹೇರ ಬೇಕೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

ನಗರದಲ್ಲಿ ಭಾನುವಾರ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದಿಂದ ಆಯೋಜಿಸಿದ್ದ ಕುಲಗುರು ಶ್ರೀ ಶಿವದಾಸಿಮಯ್ಯ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಕಚೇರಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಮಂಜೂರು ಮಾಡಿಸಿಕೊಂಡರೆ ಅನುದಾನ ಕೊಡುವುದಾಗಿ ಹೇಳಿದ ಅವರು, ಕಟ್ಟಡಕ್ಕೆ ಇನ್ನುಳಿದ ಶಾಸಕರು,ಸಂಸದರ ಅನುದಾನವನ್ನೂ ಪಡೆದುಕೊಳ್ಳ ಬೇಕೆಂದು ಸಲಹೆ ನೀಡಿದರು.
ಶಾಸಕ ನಿಧಿಯಿಂದ ಜಿಲ್ಲಾ ಲಿಂಗಾಯತ ಶಿವಸಿಂಪಿ ಸಮಾಜದ ಕಚೇರಿ ಕಟ್ಟಡಕ್ಕೆ 10 ಲಕ್ಷ ರೂ.ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ತಿಪ್ಪಾರೆಡ್ಡಿ ಭರವಸೆ ನೀಡಿ ರಾಜ್ಯ ಸರ್ಕಾರ ಶಿವಸಿಂಪಿ ಸಮಾಜಕ್ಕೆ 2 ಎ ಮೀಸಲಾಯಿತಿಗಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಬಳಿಗೆ ನಿಯೋಗ ತೆರಳೋಣವೆಂದ ಶಾಸಕರು, ಸಮಾಜದ ಏಳಿಗೆಗೆ ದುಡಿಯುತ್ತಿರುವ ಮುಖಂಡ ಕೆಇಬಿ ಷಣ್ಮುಖಪ್ಪ ಅವರ ನಡೆಯನ್ನು ಶ್ಲಾಘಿಸಿದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 8660924503





