Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹೊಸದುರ್ಗ: ಲಂಚ ಪಡೆಯುತ್ತಿದ್ದ ಬೆಸ್ಕಾಂ ಸೆಕ್ಷನ್ ಆಫೀಸರ್ ಲೋಕಾ ಬಲೆಗೆ

    January 31, 2026

    ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ

    January 31, 2026

    ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ

    January 30, 2026

    ತಮಟಕಲ್ಲು ಬಳಿ ಭೀಕರ ಅಪಘಾತ ಇಬ್ಬರು ಸಾವು

    January 11, 2026

    ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

    January 11, 2026
  • ರಾಜ್ಯ

    ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ

    January 31, 2026

    ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ

    January 30, 2026

    ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

    January 11, 2026

    ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ

    January 8, 2026

    ಮರ್ಯಾದೆಗೇಡು ಹತ್ಯೆ ಜಿಎಸ್ ಮಂಜುನಾಥ್ ಸಾಂತ್ವಾನ

    January 6, 2026
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜ್ಯ»ಈಗಿನ ಘಟನೆಗಳಿಂದ ಸಂವಿಧಾನಕ್ಕೆ ಗಂಡಾಂತರವಿದೆ ಗೊತ್ತಾಗುತ್ತದೆ
ರಾಜ್ಯ

ಈಗಿನ ಘಟನೆಗಳಿಂದ ಸಂವಿಧಾನಕ್ಕೆ ಗಂಡಾಂತರವಿದೆ ಗೊತ್ತಾಗುತ್ತದೆ

D KumaraswamyBy D KumaraswamyFebruary 25, 2025No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಚಿತ್ರದುರ್ಗ ಫೆ25: ಭಾರತದ ಪ್ರತಿಯೊಬ್ಬ ಪ್ರಜೆಗಳನ್ನು ರಕ್ಷಣೆ ಮಾಡುವ ಸಂವಿಧಾನಕ್ಕೆ ಅಪಾಯವಾದರೆ ಜನಸಾಮಾನ್ಯರ ಪಾಡೇನು? ಈ ಕುರಿತು ಬುದ್ದಿ ಜೀವಿಗಳು, ಪ್ರಜ್ಞಾವಂತರು ಚಿಂತಿಸಬೇಕಿದೆ ಎಂದು ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಹೇಳಿದರು.
ಪತ್ರಕರ್ತರ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಯಾನ ದೇಶ ರಕ್ಷಣೆಯ ಹೊಣೆ ನಮ್ಮದಾಗಿಸಿಕೊಳ್ಳೋಣ ಬನ್ನಿ ಸಂವಿಧಾನ ರಕ್ಷಣಾ ಪಡೆಗೆ ಸೇರ್ಪಡೆಯಾಗೋಣ ಬನ್ನಿ ಕಾರ್ಯಕ್ರಮದಲ್ಲಿ ಮಾತಾಡಿ,
ಸಂವಿಧಾನಕ್ಕೆ 140 ವರ್ಷಗಳ ಶಕ್ತಿಯಿದೆ. ಯಾರ ಸ್ವತ್ತಲ್ಲ. ಸಂವಿಧಾನ ಆಶಯಗಳಿಗೆ ವಿರುದ್ದವಾದ ಘಟನೆಗಳು ನಡೆಯುತ್ತಿರುವುದನ್ನು ಪ್ರಶ್ನಿಸಿದರೆ ಸಾಯಿಸುತ್ತಾರೆ ಇಲ್ಲ ಜೈಲಿಗೆ ಕಳಿಸುತ್ತಾರೆ. ಶಬರಿಮಲೈಗೆ ಮಹಿಳೆಯೊಬ್ಬರು ಪ್ರವೇಶಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೊಟ್ಟ ತೀರ್ಪನ್ನು ಕೇಂದ್ರ ಸರ್ಕಾರ ಸ್ವಾಗತಿಸಬೇಕಿತ್ತು. ಗೃಹ ಸಚಿವ ಅಮಿತ್‍ಷಾ ಗೇಲಿ ಮಾಡಿದರು. ಆಗ ನಿಜವಾಗಿಯೂ ಅವರ ಮೇಲೆ ನ್ಯಾಯಾಂಗ ನಿಂದನೆ ಕೇಸು ದಾಖಲಿಸಬೇಕಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದಾಗ ದೇಶದ ಪ್ರಧಾನಿ ಸಮರ್ಥಿಸಿಕೊಂಡರು. ಇವೆಲ್ಲವನ್ನು ಗಮನಿಸಿದಾಗ ಸಂವಿಧಾನಕ್ಕೆ ಗಂಡಾಂತರವಿದೆ ಎನ್ನುವುದು ಗೊತ್ತಾಗುತ್ತದೆಂದರು.
ಸಂವಿಧಾನದ ಗೆರೆಯನ್ನು ದಾಟಿದ ಪ್ರಧಾನಿ ಇಂದಿರಾಗಾಂಧಿಗೆ ಯಾವ ಸ್ಥಿತಿಯಾಯಿತು ಎನ್ನುವುದನ್ನು ಈಗಿನ ಪ್ರಧಾನಿ ಮೋದಿ ಅರ್ಥಮಾಡಿಕೊಂಡು ಸಂವಿಧಾನವನ್ನು ಗೌರವಿಸಬೇಕು. ಗೌರಿ ಲಂಕೇಶ್, ಎಂ.ಎಂ.ಕಲುಬುರ್ಗಿ ಇವರುಗಳನ್ನು ಹತ್ಯೆಗೈದ ಹಂತಕರನ್ನು ಇನ್ನು ಪತ್ತೆ ಹಚ್ಚಲು ಆಗಿಲ್ಲ. ಸಂವಿಧಾನ ದೊಡ್ಡದು. ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕ್, ಚುನಾವಣಾ ಆಯೋಗಕ್ಕೆ ಕೈಹಾಕುತ್ತಿದೆ. ಚುನಾವಣಾ ಪ್ರಕ್ರಿಯೆ ಕುಲಗೆಟ್ಟಿದೆ. ಒಕ್ಕೂಟದ ವ್ಯವಸ್ಥೆ ನಾಶವಾಗುತ್ತಿದೆ. ಹಿಂದಿ ಹೇರಿಕೆ ಅಕ್ಷಮ್ಯ ಅಪರಾಧ.
ಬಹುತ್ವ, ಸಾಮರಸ್ಯ, ಸಹಬಾಳ್ವೆಯನ್ನು ಕೆಡಿಸುವ ಕೆಲಸವಾಗುತ್ತಿದೆ ಎಂದು ವಿಷಾಧಿಸಿದರು.
ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ ಸಂವಿಧಾನವನ್ನು ಪೂರ್ಣವಾಗಿ ಅಧ್ಯಯನ ಮಾಡಿದ್ದೇವಾ ಎನ್ನುವುದನ್ನು ವಕೀಲರಿಂದ ಹಿಡಿದು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳುವ ಕಾಲದಲ್ಲಿವೆ. ಅಕ್ಷರಜ್ಞಾನವುಳ್ಳ ಪ್ರತಿಯೊಬ್ಬ ನಾಗರೀಕನು ಇದನ್ನು ಅರ್ಥಮಾಡಿಕೊಳ್ಳಬೇಕು. ಜಸ್ಟಿಸ್ ನಾಗಮೋಹನ್‍ದಾಸ್ ಸಂವಿಧಾನವನ್ನು ಎಲ್ಲರೂ ಓದಬೇಕೆಂದು ಹೇಳಿದ್ದಾರೆ. ಅದರ ಪ್ರಕಾರ ಸಂವಿಧಾನ ತಿಳಿದುಕೊಂಡರೆ ಮಾತ್ರ ದೇಶ ಸುರಕ್ಷಿತವಾಗಿರಲು ಸಾಧ್ಯ ಎಂದರು.
ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತಾಡಿ,ಭಾರತವನ್ನು ನೂರಾರು ವರ್ಷಗಳ ಕಾಲ ಬ್ರಿಟೀಷರು ಆಳಿದರು. ಸತ್ಯ ಮತ್ತು ಅಹಿಂಸೆಯನ್ನು ಅಸ್ತ್ರವಾಗಿಟ್ಟುಕೊಂಡು ಗಾಂಧಿ ಬ್ರಿಟಿಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಇದರ ಹಿಂದೆ ಅನೇಕ ಮಹನೀಯರ ತ್ಯಾಗ ಬಲಿದಾನವಿದೆ. ದುರಂತವೆಂದರೆ ನಮ್ಮವರೆ ಗಾಂಧಿಯನ್ನು ಕೊಂದಿದ್ದು, ಎಂದರು.

 

 

ಇಂದಿರಾಗಾಂಧಿ, ರಾಜೀವ್‍ಗಾಂಧಿ ಹತ್ಯೆಯಾಯಿತು. ಬಲ್ಕಿಸ್‍ಭಾನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸೆಷನ್ಸ್ ನ್ಯಾಯಾಲಯ ಹನ್ನೊಂದು ಆರೋಪಿಗಳಿಗೆ ಸಜೆ ನೀಡಿದ್ದನ್ನು ಹೈಕೋಟ್ ಮತ್ತು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಆಗ ಕೇಂದ್ರ ಸರ್ಕಾರ ರಾಷ್ಟ್ರಪತಿಗೆ ಪತ್ರ ಬರೆದ ಪರಿಣಾಮ ಎಲ್ಲರನ್ನು ಖುಲಾಸೆಗೊಳಿಸಿತು. ಇದನ್ನು ನೋಡಿದರೆ ಸಂವಿಧಾನ ಇದೆಯೋ ಇಲ್ಲವೋ ಎನ್ನುವ ಜಿಜ್ಞಾಸೆ ಕಾಡುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಕಾನೂನನ್ನೆ ಕೈಗೆ ತೆಗೆದುಕೊಳ್ಳುವುದಾದರೆ ಸಂವಿಧಾನ ಕಾನೂನು ಏಕೆ ಇರಬೇಕು? ಕೇಶವಾನಂದಭಾರತಿರವರ ತೀರ್ಪು ಎತ್ತಿ ಹಿಡಿದು ಸಂವಿಧಾನ ರಕ್ಷಿಸಬೇಕಿದೆ. ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಫುಲ್‍ಬೆಂಚ್ ನ್ಯಾಯ ಪೀಠದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ತೀರ್ಪು ನೀಡಿರುವುದನ್ನು ನೋಡಿದರೆ ಸಂವಿಧಾನ ಅಪಾಯದಲ್ಲಿದೆ ಎನ್ನುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.
ನ್ಯಾಯವಾದಿ ಸಿ.ಶಿವುಯಾದವ್ ಮಾತನಾಡಿ ಸಂವಿಧಾನದ ಮೇಲೆ ಯಾರೆ ದಬ್ಬಾಳಿಕೆ ದೌರ್ಜನ್ಯವೆಸಗಿದರೆ ಎಲ್ಲರೂ ಪ್ರತಿಭಟಿಸಬೇಕು. ಸಂವಿಧಾನವನ್ನು ಬದಲಾಯಿಸುತ್ತೇವೆನ್ನುವುದೇ ಸಂವಿಧಾನ ವಿರೋಧಿ ಕೃತ್ಯ. ಸುಪ್ರೀಂಕೋರ್ಟ್‍ನ್ನು ಸರ್ಕಾರ ತನ್ನ ಹಿಡಿದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆಯೆಂದು ಬುದ್ದಿವಂತರು
ಚಿಂತಕರು ಹಾದಿ ಬೀದಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಸಂವಿಧಾನವನ್ನು ತಿದ್ದುಪಡಿಗೊಳಿಸಿ ಬದಲಾಯಿಸುತ್ತೇವೆನ್ನುವುದೇ ಅಪರಾಧ ಎಂದು ಹೇಳಿದರು.
ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ,.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ,ನಿವೃತ್ತ ಪಿ.ಯು. ಡಿ.ಡಿ.ಪಿ.ಐ. ಶಿವಕುಮಾರ್ ಮಾತಾಡಿದರು.ನ್ಯಾಯವಾದಿ ಮಹಮದ್ ಸಾಧಿಕ್‍ವುಲ್ಲಾ, ಟಿ.ಶಫಿವುಲ್ಲಾ, ದಿಲ್‍ಶಾದ್ ಉನ್ನಿಸ, ವಕೀಲರ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್ ಇವರುಗಳು ವೇದಿಕೆಯಲ್ಲಿದ್ದರು.

Share. Facebook Twitter Pinterest LinkedIn Tumblr WhatsApp Email
Previous Articleಪುಣ್ಯ ಪುರುಷರ ಆದರ್ಶಗಳನ್ನು ಅನುಸರಿಸಬೇಕು
Next Article ಲವ್ ಜೀಹದ್ ಗೀಡಾದ  ಯುವತಿ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿದ ಭೋವಿ‌ಶ್ರೀಗಳು
D Kumaraswamy
  • Tumblr

Related Posts

ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ

January 31, 2026

ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ

January 30, 2026

ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

January 11, 2026

ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ

January 8, 2026
Leave A Reply Cancel Reply

Recent Posts
  • ಹೊಸದುರ್ಗ: ಲಂಚ ಪಡೆಯುತ್ತಿದ್ದ ಬೆಸ್ಕಾಂ ಸೆಕ್ಷನ್ ಆಫೀಸರ್ ಲೋಕಾ ಬಲೆಗೆ
  • ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ
  • ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ
  • ತಮಟಕಲ್ಲು ಬಳಿ ಭೀಕರ ಅಪಘಾತ ಇಬ್ಬರು ಸಾವು
  • ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು
  • ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2026 SAMYUKTAVAANI Designed by WEBGAUGE.

Type above and press Enter to search. Press Esc to cancel.