ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್ ಜೆ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದ್ದು, ಇವರ ಸ್ಥಾನಕ್ಕೆ ಟಿ. ವೆಂಕಟೇಶ್ ಅವರನ್ನು ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದ್ದು, ಹಿಂದೆಯೂ ಒಂದು ಬಾರಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ವರ್ಗಾವಣೆ ಆಗಿದೆ ಎಂಬ ವಿಚಾರ ಹಬ್ಬಿತ್ತು. ಆದರೆ ಇದೀಗ ಸರ್ಕಾರ ಅಧಿಕೃತ ಆದೇಶವನ್ನುಹೊರಡಿಸಿದೆ. ಅವರಿಗೆ ಯಾವುದೇ ಸ್ಥಳನ್ನು ತೋರಿಸಿಲ್ಲ. ಟಿ.ವೆಂಕಟೇಶ್ ಅವರು 2009 ರಲ್ಲಿ ಚಿತ್ರದುರ್ಗದ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.





