Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ತಮಟಕಲ್ಲು ಬಳಿ ಭೀಕರ ಅಪಘಾತ ಇಬ್ಬರು ಸಾವು

    January 11, 2026

    ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

    January 11, 2026

    ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ

    January 8, 2026

    ಮರ್ಯಾದೆಗೇಡು ಹತ್ಯೆ ಜಿಎಸ್ ಮಂಜುನಾಥ್ ಸಾಂತ್ವಾನ

    January 6, 2026

    ನನ್ನಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ: ಶಾಸಕ ಡಾ. ಎಂ. ಚಂದ್ರಪ್ಪ

    December 20, 2025
  • ರಾಜ್ಯ

    ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

    January 11, 2026

    ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ

    January 8, 2026

    ಮರ್ಯಾದೆಗೇಡು ಹತ್ಯೆ ಜಿಎಸ್ ಮಂಜುನಾಥ್ ಸಾಂತ್ವಾನ

    January 6, 2026

    ನನ್ನಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ: ಶಾಸಕ ಡಾ. ಎಂ. ಚಂದ್ರಪ್ಪ

    December 20, 2025

    ಸರ್ಕಾರಿ ಗುಡ್ಡಕ್ಕೆ ಶಾಸಕ ಕನ್ನ; ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿರುದ್ಧ ಆಂಜನೇಯ ಗಂಭೀರ ಆರೋಪ

    December 19, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ಜಿಲ್ಲಾ ಸುದ್ದಿ»ಚುನಾವಣಾ ವೆಚ್ಚದ ನಿಖರ ಮಾಹಿತಿ ನೀಡುವಂತೆ ಡಿಸಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ
ಜಿಲ್ಲಾ ಸುದ್ದಿ

ಚುನಾವಣಾ ವೆಚ್ಚದ ನಿಖರ ಮಾಹಿತಿ ನೀಡುವಂತೆ ಡಿಸಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ

D KumaraswamyBy D KumaraswamyFebruary 13, 2023Updated:February 13, 2023No Comments1 Min Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಚುನಾವಣಾ ವೆಚ್ಚ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ
ಚುನಾವಣಾ ವೆಚ್ಚದ ನಿಖರ ಮಾಹಿತಿ ನೀಡಿಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ನಿಖರವಾದ ಮಾಹಿತಿಯನ್ನು ಸರಿಯಾದ ನಮೂನೆಗಳ ಮೂಲಕ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ ನೀಡಿದರು.

 

 

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳು, ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಚುನಾವಣಾ ತರಬೇತಿ ನಿರ್ವಹಣಾ ಕೋಶದ ವತಿಯಿಂದ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಚುನಾವಣಾ ವೆಚ್ಚ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಚುನಾವಣೆಗಳು ಹೊಸ ಚುನಾವಣೆಗಳು ಎಂದು ಭಾವಿಸಬೇಕು. ಚುನಾವಣಾ ಕರ್ತವ್ಯವನ್ನು ಮೊದಲ ಆದ್ಯತಾ ಕರ್ತವ್ಯ ಎಂದು ಭಾವಿಸಿ, ಪ್ರತಿಯೊಂದು ತಂಡದವರು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮುಂಚಿತವಾಗಿ ಹಾಜರಿದ್ದು, ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ನಿಖರವಾದ ಮಾಹಿತಿಯನ್ನು ಸರಿಯಾದ ನಮೂನೆಗಳ ಮೂಲಕ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಗೆ ನೀಡಬೇಕು ಎಂದು ತಿಳಿಸಿದರು.
ಮುಖ್ಯ ಲೆಕ್ಕಾಧಿಕಾರಿಗಳು, ಜಿಲ್ಲಾ ವೆಚ್ಚ ಉಸ್ತುವಾರಿ ಕೋಶದ ನೋಡಲ್ ಅಧಿಕಾರಿಗಳು ಹಾಗೂ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಡಿ.ಆರ್.ಮಧು ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ತರಬೇತಿ ನೀಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಚುನಾವಣಾ ತರಬೇತಿ ನಿರ್ವಹಣಾ ಕೋಶದ ನೋಡಲ್ ಅಧಿಕಾರಿ ಎನ್.ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಖಜಾನೆ ಉಪನಿರ್ದೇಶಕಿ ರತ್ನಕುಮಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶ ನಿರ್ದೇಶಕ ಎಂ.ಮಹೇಂದ್ರಕುಮಾರ್, ಡಯಟ್ ಹಿರಿಯ ಉಪನ್ಯಾಸಕ ಅಯುಬ್ ಸೊರಬ ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳ ಜಿಲ್ಲಾ ವೆಚ್ಚ ಉಸ್ತುವಾರಿ ಕೋಶದ ನೋಡಲ್ ಅಧಿಕಾರಿಗಳು, ಸಹಾಯಕ ವೆಚ್ಚ ಉಸ್ತುವಾರಿ ವೀಕ್ಷಕರು, ವಿಡಿಯೋ ಕಣ್ಗಾವಲು ತಂಡದ ಅಧಿಕಾರಿಗಳು, ವಿಡಿಯೋ ವೀಕ್ಷಣ ತಂಡದ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಚುನಾವಣಾ ತರಬೇತಿ ನಿರ್ವಹಣಾ ಕೋಶದ ನೋಡಲ್ ಅಧಿಕಾರಿಗಳು ಇದ್ದರು.

Share. Facebook Twitter Pinterest LinkedIn Tumblr WhatsApp Email
Previous Articleದ್ವೈವಾರ್ಷಿಕ ಭಾರತದ ಏರೋಸ್ಪೇಸ್ ಪ್ರದರ್ಶನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
Next Article ಲೋಕ ಅದಾಲತ್:   ಜಿಲ್ಲೆಯಲ್ಲಿ 66,489 ಪ್ರಕರಣಗಳು ಇತ್ಯರ್ಥ
D Kumaraswamy
  • Tumblr

Related Posts

ಆಹಾರ ದಾನ ಸಮಾಜ ಸೇವೆ ಸಂಕೇತ:ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

June 25, 2025

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಗೆ ಅತ್ಯುತ್ತಮ ಫಲಿತಾಂಶ : ಅಭಿನಂದಿಸಿದ ಆಡಳಿತ ವರ್ಗ

May 14, 2025

ಮಲ್ಟಿ ಕ್ಯೂಸಿನ್ ಕುಕ್ ಅಭ್ಯರ್ಥಿಗಳಿಂದ ಮರು ಅರ್ಜಿ ಆಹ್ವಾನ

March 20, 2025

ಸಕಾಲ ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

March 20, 2025
Leave A Reply Cancel Reply

Recent Posts
  • ತಮಟಕಲ್ಲು ಬಳಿ ಭೀಕರ ಅಪಘಾತ ಇಬ್ಬರು ಸಾವು
  • ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು
  • ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ
  • ಮರ್ಯಾದೆಗೇಡು ಹತ್ಯೆ ಜಿಎಸ್ ಮಂಜುನಾಥ್ ಸಾಂತ್ವಾನ
  • ನನ್ನಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ: ಶಾಸಕ ಡಾ. ಎಂ. ಚಂದ್ರಪ್ಪ
  • ಸರ್ಕಾರಿ ಗುಡ್ಡಕ್ಕೆ ಶಾಸಕ ಕನ್ನ; ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿರುದ್ಧ ಆಂಜನೇಯ ಗಂಭೀರ ಆರೋಪ
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2026 SAMYUKTAVAANI Designed by WEBGAUGE.

Type above and press Enter to search. Press Esc to cancel.