Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ತಮಟಕಲ್ಲು ಬಳಿ ಭೀಕರ ಅಪಘಾತ ಇಬ್ಬರು ಸಾವು

    January 11, 2026

    ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

    January 11, 2026

    ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ

    January 8, 2026

    ಮರ್ಯಾದೆಗೇಡು ಹತ್ಯೆ ಜಿಎಸ್ ಮಂಜುನಾಥ್ ಸಾಂತ್ವಾನ

    January 6, 2026

    ನನ್ನಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ: ಶಾಸಕ ಡಾ. ಎಂ. ಚಂದ್ರಪ್ಪ

    December 20, 2025
  • ರಾಜ್ಯ

    ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

    January 11, 2026

    ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ

    January 8, 2026

    ಮರ್ಯಾದೆಗೇಡು ಹತ್ಯೆ ಜಿಎಸ್ ಮಂಜುನಾಥ್ ಸಾಂತ್ವಾನ

    January 6, 2026

    ನನ್ನಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ: ಶಾಸಕ ಡಾ. ಎಂ. ಚಂದ್ರಪ್ಪ

    December 20, 2025

    ಸರ್ಕಾರಿ ಗುಡ್ಡಕ್ಕೆ ಶಾಸಕ ಕನ್ನ; ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿರುದ್ಧ ಆಂಜನೇಯ ಗಂಭೀರ ಆರೋಪ

    December 19, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ಕ್ರೈಂ»ನ್ಯಾಯಾಲಯದ ವಿಚಾರಣೆಗೆ ಕಡತ ಮಂಡಿಸದೇ ಕರ್ತವ್ಯ ಲೋಪ: ಎಫ್.ಐ.ಆರ್ ದಾಖಲು
ಕ್ರೈಂ

ನ್ಯಾಯಾಲಯದ ವಿಚಾರಣೆಗೆ ಕಡತ ಮಂಡಿಸದೇ ಕರ್ತವ್ಯ ಲೋಪ: ಎಫ್.ಐ.ಆರ್ ದಾಖಲು

D KumaraswamyBy D KumaraswamyOctober 12, 2023No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ನ್ಯಾಯಾಲಯದ ವಿಚಾರಣೆಗೆ ಕಡತ ಮಂಡಿಸದೇ ಕರ್ತವ್ಯ ಲೋಪ: ಎಫ್.ಐ.ಆರ್ ದಾಖಲು

 

 

ಚಳ್ಳಕೆರೆ ತಾಲ್ಲೂಕು ಗೌರಸಮುದ್ರ ಮಾರಮ್ಮ ದೇವಾಲಯಕ್ಕೆ ಸಂಬಂಧಿಸಿದಂತೆ ಪ್ರಕರಣದ ಕಡತ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದ ಕಡತವನ್ನು ನ್ಯಾಯಾಲಯದ ವಿಚಾರಣೆಗೆ ಮಂಡಿಸದೆ ಕರ್ತವ್ಯ ಲೋಪವೆಸಗಿರುವ ಜಿಲ್ಲಾಧಿಕಾರಿಗಳ ಕಚೇರಿ ಮುಜರಾಯಿ ಶಾಖೆಯ ಧಾರ್ಮಿಕ ದತ್ತಿ ತಹಶೀಲ್ದಾರ್ ಬಿ.ಎಸ್.ವೆಂಕಟೇಶ್ ಹಾಗೂ ದ್ವಿತೀಯ ದರ್ಜೆ ಸಹಾಯಕ ವೀರಭದ್ರಪ್ಪ ಅವರ ವಿರುದ್ಧ ಅಕ್ಟೋಬರ್ 11 ರಂದು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿಯ ಪತ್ರಾಂಕಿತ ಸಹಾಯಕರಾದ ಸಂತೋಷ್ ಕುಮಾರ್ ಜಿ. ಅವರು ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿಗೆ ಅನುಗುಣವಾಗಿ ಎಫ್‍ಐಆರ್ ದಾಖಲಾಗಿದೆ.  ಗೌರಸಮುದ್ರ ಮಾರಮ್ಮ ದೇವಾಲಯದ ಪ್ರಕರಣದ ಕಡತ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಪ್ರಕರಣದ ಕಡತವು ಜಿಲ್ಲಾಧಿಕಾರಿ ಕಚೇರಿ ಮುಜರಾಯಿ ಶಾಖೆಯ ಧಾರ್ಮಿಕ ದತ್ತಿ ತಹಶೀಲ್ದಾರ್ ಕಚೇರಿಯಲ್ಲಿ ಇರುತ್ತದೆ. ಇವರು ಕಡತವನ್ನು 2023ರ ಸೆಪ್ಟೆಂಬರ್ 08 ರಂದು ಹಾಗೂ ಸೆಪ್ಟೆಂಬರ್ 27 ರಂದು ಜಿಲ್ಲಾಧಿಕಾರಿಗಳ ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸಿರುವುದಿಲ್ಲ. ನ್ಯಾಯಾಲಯದ ವಿಚಾರಣೆಗೆ ಕಡತವನ್ನು ಹಾಜರು ಪಡಿಸದ ಕಾರಣ 2023 ರ  ಸೆಪ್ಟೆಂಬರ್ 30 ರಂದು ಜಿಲ್ಲಾಧಿಕಾರಿಗಳು ಕಾರಣ ಕೇಳಿ ನೋಟೀಸ್ ಅನ್ನು ಜಾರಿ ಮಾಡಿದ್ದರು.  ಅದಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಮುಂದಿನ ವಿಚಾರಣೆ ಒಳಗಾಗಿ ಕತಡವನ್ನು ಹಾಜರುಪಡಿಸುತ್ತೇವೆ ಎಂಬುದಾಗಿ ಉತ್ತರ ನೀಡಿದ್ದರು. ಪ್ರಕರಣವು 2023ರ ಅಕ್ಟೋಬರ್ 11ರಂದು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಿಗದಿಯಾಗಿ, ಅಧಿಕಾರಿ, ಸಿಬ್ಬಂದಿ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಿಲ್ಲ. ವಾದಿಗಳ ಪರ ವಕೀಲರು ವಕಾಲತನ್ನು ವಹಿಸಿದ್ದು, ವಕೀಲರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು, ಆದರೆ, ನ್ಯಾಯಾಲಯದ ಬೆಂಚ್ ಕ್ಲರ್ಕ್ ಅವರು ನ್ಯಾಯಾಲಯದಲ್ಲಿ ಕಡತ ಸಲ್ಲಿಸಿಲ್ಲ ಎಂಬುದಾಗಿ ತಿಳಿಸಿದ್ದು, ಜಿಲ್ಲಾಧಿಕಾರಿಗಳು ಸಿಬ್ಬಂದಿಗೆ ಕಡತದ ಬಗ್ಗೆ ವಿಚಾರಣೆ ಮಾಡಲಾಗಿ ಸಿಬ್ಬಂದಿಯವರು ಕಡತವು ಕಳೆದುಹೋಗಿರುತ್ತದೆ ಎಂದು ತಿಳಿಸಿರುತ್ತಾರೆ.
ಸಿಬ್ಬಂದಿಯವರು ನ್ಯಾಯಾಲಯದ ವಿಚಾರಣೆ ದಿನ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ  ಗೌರಸಮುದ್ರ ಮಾರಮ್ಮ ದೇವಾಲಯದ ಪ್ರಕರಣದ ಕಡತ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಪ್ರಕರಣದ ಕಡತವನ್ನು ಹಾಜರುಪಡಿಸಿ, ಪ್ರಕರಣದ ಸಂಬಂಧ ವಾಸ್ತವಾಂಶದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು ಸಿಬ್ಬಂದಿಯ ಕರ್ತವ್ಯವಾಗಿದ್ದು, ನ್ಯಾಯಾಲಯಕ್ಕೆ ಕಡತ ಹಾಜರುಪಡಿಸದೇ, ತಮ್ಮ ಸುಪರ್ದಿಯಲ್ಲಿದ್ದ ಕಡತವನ್ನು ಕಳೆದು ಹಾಕಿ, ಪಕ್ಷಗಾರರ, ನ್ಯಾಯವಾದಿಗಳಿಗೆ ತೊಂದರೆಯನ್ನುಂಟು ಮಾಡಿ, ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷತನ ಮತ್ತು ಬೇಜವಾಬ್ದಾರಿತನ  ತೋರಿರುವುದು ಅಪರಾಧವಾಗಿರುತ್ತದೆ ಎಂಬುದಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಜರಾಯಿ ಶಾಖೆಯ ಧಾರ್ಮಿಕ ದತ್ತಿ ತಹಶೀಲ್ದಾರ್ ಬಿ.ಎಸ್.ವೆಂಕಟೇಶ್ ಹಾಗೂ ದ್ವಿತೀಯ ದರ್ಜೆ ಸಹಾಯಕ ವೀರಭದ್ರಪ್ಪ ಅವರ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
========

Share. Facebook Twitter Pinterest LinkedIn Tumblr WhatsApp Email
Previous Articleಮದಕರಿ ಜಯಂತೋತ್ಸವಕ್ಕೆ ಸಜ್ಜುಗೊಂಡ ಕೋಟೆ ನಗರಿ
Next Article ಟಿವಿ ರಿಮೋಟ್ ಗಾಗಿ ಸಹೋದರರ ನಡುವೆ ಜಗಳ ತಂದೆಯಿಂದ ಮಗನ ಕೊಲೆ
D Kumaraswamy
  • Tumblr

Related Posts

ಹಾಡು ಹಗಲೇ ಮನೆ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ಒಡವೆ ದೋಚಿದ ಡರೋಡೆ ಗ್ಯಾಂಗ್

September 1, 2025

ಹೊಸದುರ್ಗ: ಬೈಕ್ ಕಳ್ಳರಿಬ್ಬರ ಬಂಧನ11 ಬೈಕ್ ಗಳು ವಶ

August 26, 2025

ಚಾಕು ತೋರಿಸಿ ಬೆದರಿಸಿ ಚಿನ್ನದ ಮಾಂಗಲ್ಯ ಸರ ಕದ್ದಿದ್ದ ಕಳ್ಳನ ಬಂಧಿಸಿದ ಶ್ರೀರಾಂಪುರ ಪೊಲೀಸರು

September 13, 2024

ಕುಡಿದ ಅಮಲಿನಲ್ಲಿ ತೆಗೆದೆ ಬಿಟ್ರು ಸ್ನೇಹಿತನ ಪ್ರಾಣವ

February 18, 2024
Leave A Reply Cancel Reply

Recent Posts
  • ತಮಟಕಲ್ಲು ಬಳಿ ಭೀಕರ ಅಪಘಾತ ಇಬ್ಬರು ಸಾವು
  • ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು
  • ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ
  • ಮರ್ಯಾದೆಗೇಡು ಹತ್ಯೆ ಜಿಎಸ್ ಮಂಜುನಾಥ್ ಸಾಂತ್ವಾನ
  • ನನ್ನಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ: ಶಾಸಕ ಡಾ. ಎಂ. ಚಂದ್ರಪ್ಪ
  • ಸರ್ಕಾರಿ ಗುಡ್ಡಕ್ಕೆ ಶಾಸಕ ಕನ್ನ; ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿರುದ್ಧ ಆಂಜನೇಯ ಗಂಭೀರ ಆರೋಪ
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2026 SAMYUKTAVAANI Designed by WEBGAUGE.

Type above and press Enter to search. Press Esc to cancel.