ಚಿತ್ರದುರ್ಗ,ಮೇ( 05) : ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಸಿ.ಬಿ.ಎಸ್.ಇ. ಹಾಗೂ ರಾಜ್ಯ ಪಠ್ಯಕ್ರಮ ಇಂಗ್ಲಿಷ್ ಮಾಧ್ಯಮ ಶಾಲೆ ಮೇ. ೫ ರಂದು ಆರಂಭಗೊoಡಿತು.
ತರಗತಿಯ ಕೊಠಡಿಗಳನ್ನು ಬಣ್ಣ ಬಣ್ಣ ಬಲೂನ್‌ಗಳಿಂದ ಸಿಂಗರಿಸಲಾಗಿತ್ತು. ರಜೆ ಕಳೆದು ಮತ್ತೆ ಶಾಲೆಗೆ ಮರಳಿದ ಮಕ್ಕಳನ್ನು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚoದನ್ ಹಾಗೂ ಆಡಳಿತಾಧಿಕಾರಿ ಚಂದ್ರಕಲಾ, ಶಿಕ್ಷಕ ವೃಂದದವರು ಬರಮಾಡಿಕೊಂಡರು.
ಎಲ್ಲಿಲ್ಲದ ಸಡಗರ ಸಂಭ್ರಮಗಳಿಂದ ಶಾಲೆಗೆ ಬಂದ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಸಿ.ರಘುಚoದನ್ ಮಕ್ಕಳಿಗೆ ಬೇಕು ಕಲಿಕೆ, ಕಲಿಸಲು ಬೇಕು ಗುರು, ಇಬ್ಬರಿಗೂ ಶಾಲೆಯಲ್ಲಿ ಸಮಾಗಮ ಆಗಲೇಬೇಕು. ದಿನನಿತ್ಯದ ಪಾಠಗಳ ಕಡೆ ಹೆಚ್ಚಿನ ಗಮನ ನೀಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ, ಮೂಲಕ ಗುರು-ಹಿರಿಯರು, ಶಾಲೆ ಹಾಗೂ ಪೋಷಕರುಗಳಿಗೆ ಕೀರ್ತಿ ತರುವಂತೆ ಮಕ್ಕಳಿಗೆ ಶುಭ ಹಾರೈಸಿದರು.
ಪ್ರಾಂಶುಪಾಲರು ಮತ್ತು ಶಿಕ್ಷಕರುಗಳು ಈ ಸಂದರ್ಭದಲ್ಲಿ ಹಾಜರಿದ್ದು, ಮಕ್ಕಳಲ್ಲಿ ನವ ಚೈತನ್ಯ ತುಂಬಿದರು.





