ಇ ಸ್ವತ್ತುಗಳನ್ನು ಪಡೆಯಲು ಗ್ರಾಮಸ್ಥರು ಪಂಚಾಯಿತಿ ಅಲೆಯಬೇಕಿತ್ತು. ಅಲ್ಲದೆ ಲಂಚದ ಹಣಕ್ಕೆ ಬೇಡಿಕೆಯು ಕೇಳಿ ಬರುತ್ತಿತ್ತು. ಇಂತಹ ಭ್ರಷ್ಟಾಚಾರ ಮತ್ತು ಗ್ರಾಮಸ್ಥರ ಅಲೆದಾಟವನ್ನು ತಪ್ಪಿಸಲು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಓ ದಿವಾಕರ್ ಮನೆ ಮನೆಗೆ ಇ ಸ್ವತ್ತು ಕಾರ್ಯಕ್ರಮವನ್ನು ಆರಂಭಿಸಿದ್ದರು.ಮನೆಯ ಬಾಗಿಲಿಗೆ ಹೋಗಿ ಇ ಸ್ವತ್ತು ನೀಡಿದ್ದರು. ಇಂತಹ ಒಂದು ನೂತನ ಕಾರ್ಯಕ್ರಮ ಬಹಳಷ್ಟು ಪ್ರಶಂಸೆಗೆ ಒಳಗಾಗಿತ್ತು. ವಿಧಾನ ಸಭೆ ಚುನಾವಣೆ ಬಂದಿದ್ದರಿಂದ ಇ ಸ್ವತ್ತು ಅಭಿಯಾನ ಕಾರ್ಯಕ್ರಮ ಸ್ಥಗಿತಗೊಂಡಿದ್ದು. ಇದೀಗ ಮತ್ತೆ ಆರಂಭಗೊಂಡಿದೆ. ಇಂದು ಸಿಇಓ ದಿವಾಕರ್ ಅವರು ಹೊಸದುರ್ಗದ ಸಾಣೇ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇ ಸ್ವತ್ತು ಮನೆ ಮನೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮನೆ ಬಾಗಿಲಿಗೆ ಹೋಗಿ ಇ ಸ್ವತ್ತು ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಹೊಸದುರ್ಗ ತಾಲುಕು ಕಾರ್ಯ ನಿರ್ವಾಹಕ ಅಧಿಕಾರಿ ವಿಶ್ವನಾಥ್, ಗ್ರಾಮ ಪಂಚಾಯಿತಿ ಪದಾಧಿಕಾರಿಗಳು, ಪಿಡಿಓ ಸಿಬ್ಬಂದಿಗಳು ಹಾಗು ಸಾರ್ವಜನಿಕರು ಭಾಗವಹಿಸಿದ್ದರು





