ನಮ್ಮ ಹಕ್ಕನ್ನು ಕಸಿದುಕೊಳ್ಳಲಾಗಿದೆ ಅದನ್ನು ವಾಪಾಸ್ಸು ಕೊಡದೆ ಹೋದರೆ ಮುಂದಿನ ದಿನಗಳಲ್ಲಿ ಸಿಎಂ ಬೊಮ್ಮಾಯಿ ಚೆಡ್ಡಿ ಬಿಚ್ಚಿಸುತ್ತೇವೆ ಎಂದು ಎಸ್ಡಿಪಿಐ ಕಾರ್ಯದರ್ಶಿ ಜಾಕೀರ್ ಹುಸೇನ್ ಎಚ್ಚರಿಕೆ ನೀಡಿದ ಘಟನೆ ನಡೆಯಿತು. ಅವರು ಚಿತ್ರದುರ್ಗದಲ್ಲಿ ಪ್ರತಿಭಟನೆಯಲ್ಲಿ ಮಾತನಾಡಿದರು.
ನಾವು ಹಿಜಾಬ್, ಅಜಾನ್ ಗೆ ತಲೆ ಕೊಟ್ಟೆವು , ಆದರೆ
ಮೀಸಲಾತಿ ವಿಚಾರದಲ್ಲಿ ನಾವು ಅ ತಪ್ಪು ಮಾಡುವುದಿಲ್ಲ, ರಾಜ್ಯವನ್ನು ಒಂದು ಕಡೆ ಮಾಡಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಸಿಎಂ ಬೊಮ್ಮಾಯಿ ಚೆಡ್ಡಿ ಬಿಚ್ಚಿಸುತ್ತೇವೆ. ಮೀಸಲಾತಿ ವಿಚಾರದಲ್ಲಿ ತಲೆ ಹೋದರೂ ಚಿಂತೆಯಿಲ್ಲ, ಜೈಲಿಗೆ ಹೋದರೂ ಚಿಂತೆಯಿಲ್ಲ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು





