ಚಿತ್ರದುರ್ಗ ,ಮಾ06: ವೈದ್ಯಕೀಯ ಫಾರ್ಮಸಿ ವೃತ್ತಿ ಅತ್ಯಂತ ಪವಿತ್ರವಾದುದು. ಇಡೀ ಜಗತ್ತನ್ನೆ ತತ್ತರಿಸುವಂತೆ ಮಾಡಿದ್ದ ಕೊರೋನಾ ಸಂದರ್ಭದಲ್ಲಿ ವೈದ್ಯರು ಮತ್ತು ಫಾರ್ಮಸಿಸ್ಟ್ ಗಳ ಸೇವೆ ಅನನ್ಯವಾಗಿತ್ತೆಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಿಇಓ ಎಂ.ಸಿ.ರಘುಚಂದನ್ ಹೇಳಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಆದ್ಯಾ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಗುರುವಾರ
ಪ್ರೊ. ಮಹದೇವ ಲಾಲ್‍ಶ್ರಾಫ್‍ರ ಜನ್ಮದಿನಾಚರಣೆಯಲ್ಲಿ ಮಾತಾಡಿ,
ಫಾರ್ಮಸಿಸ್ಟ್ ಎನ್ನುವುದು ಒಂದು ಸೇವೆ. ಎಲ್ಲರೂ ಓದಿ ಪದವಿಗಳನ್ನು ಪಡೆದುಕೊಳ್ಳುವುದು ಹಣ ಗಳಿಸುವುದಕ್ಕಾಗಿ. ಆದರೆ ವೈದ್ಯಕೀಯ ಮತ್ತು ಫಾರ್ಮಸಿಸ್ಟ್ ಶಿಕ್ಷಣ ಪಡೆಯುವ ನೀವು,ವೃತ್ತಿಯನ್ನು ಪ್ರೀತಿಸಿ ಗೌರವಿಸುವುದು ಮುಖ್ಯ. ಹಣ ಗಳಿಕೆಯ ಜೊತೆ ಸಮರ್ಪಣಾ ಗುಣ ಬೆಳೆಸಿಕೊಳ್ಳಿ ಎಂದರು.
ಜಗತ್ತಿನಲ್ಲಿ ಪ್ರತಿಯೊಬ್ಬರು ಬದುಕುವುದು ಹಣಕ್ಕಾಗಿಯೇ. ಇದರ ಜೊತೆಯಲ್ಲಿ ಶಿಸ್ತು ಮತ್ತು ತ್ಯಾಗವಿರಬೇಕೆಂದರು.
ಔಷಧ ನಿಯಂತ್ರಣ ಇಲಾಖೆ ಸಹಾಯಕ ಡ್ರಗ್ ಕಂಟ್ರೋಲರ್ ಸಿ.ಎಚ್.ಗಿರೀಶ್ ಮಾತಾಡಿ, ಫಾರ್ಮಸಿ ಓದಿದವರ ಮೇಲೆ ಜವಾಬ್ದಾರಿ ಜಾಸ್ತಿಯಿರುತ್ತದೆ. ಔಷಧಗಳ ತಯಾರಿಕೆ ಮತ್ತು ಅದರ ಪರಿಣಾಮ ಏನು ಎನ್ನುವುದು ನಿಮಗೆ ಗೊತ್ತಿರುತ್ತದೆ. ಫಾರ್ಮಸಿಸ್ಟ್ ಗಳು ಯಾವುದೇ ಕಾರಣಕ್ಕೂ ಡ್ರಗ್ಸ್ ಚಟಕ್ಕೆ ಬಲಿಯಾಗಬಾರದು. ಇದರಿಂದಾಗುವ ದುಷ್ಪರಿಣಾಮಗಳ ಕುರಿತು ಸಮಾಜಕ್ಕೆ ತಿಳಿ ಹೇಳುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಫಾರ್ಮಸಿ ಓದಿದರೆ ಕೆಲಸಕ್ಕೆ ಅವಕಾಶ ಸಿಗುತ್ತದೆ. ಜೊತೆಗೆ ಪೈಪೋಟಿಯೂ ಅಷ್ಠೆ ಇದೆ. ಓದಿರುವುದಕ್ಕೂ ಈಗ ನಡೆಯುತ್ತಿರುವುದಕ್ಕೂ ವ್ಯತ್ಯಾಸವಿದೆ. ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆಯಿದೆ. ಕೆಲವೊಂದು ಔಷಧಿಗಳಿಗೆ ಅಡಿಟ್ ಆಗುವುದು ಸಹಜ. ಅದೇ ರೀತಿ ಕೆಲವೊಂದು ಔಷಧಿಗಳನ್ನು ನಿಲ್ಲಿಸಿದರೆ ರೋಗಿಗಳಿಗೆ ತೊಂದರೆಯಾಗುತ್ತದೆ. ಯಾವ ಮಾತ್ರೆ ಯಾವ ರೀತಿ ತೆಗೆದುಕೊಳ್ಳಬೇಕೆನ್ನುವುದು ತುಂಬಾ ಮುಖ್ಯ ಎಂದು ಹೇಳಿದರು.
ಎಸ್.ಎಲ್.ವಿ. ಬಿ.ಇ.ಡಿ.ಕಾಲೇಜು ಪ್ರಾಂಶುಪಾಲ ಡಾ.ಬಿ.ಸಿ.ಅನಂತರಾಮು, ಆದ್ಯಾ ಕಾಲೇಜ್ ಆಫ್ ಫಾರ್ಮಸಿಯ ಶೈಕ್ಷಣಿಕ ಸಂಯೋಜಕ ಡಾ.ಎಂ.ಎನ್.ಪಾಲಾಕ್ಷ
ಪ್ರಕೃತಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ನವಾಜ್, ಆದ್ಯಾ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲ ಡಾ.ಮುತಹಾರ್, ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.





