ಚಿತ್ರದುರ್ಗ: ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಎಸ್.ಎಲ್.ವಿ. ಪದವಿಪೂರ್ವ ಕಾಲೇಜಿಗೆ ನೀಟ್ ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ಲಭಿಸಿದೆ.
ವೈದ್ಯಕೀಯ ಕೋರ್ಸ್ ಆಯ್ಕೆಗಾಗಿ ನಡೆದ 2025 ರ ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ರಕ್ಷಿತಾ ಕೆ. 561/720 ಎಐಆರ್. 2100 ರ್ಯಾಂಕ್, ಕ್ರಾಂತಿ ಕೆ. 501 ಎಐಆರ್
6627 ರ್ಯಾಂಕ್‍ನೊಂದಿಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ.
37 ವಿದ್ಯಾರ್ಥಿಗಳು ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸ್‍ಗೆ ಅರ್ಹತೆ ಪಡೆದಿದ್ದಾರೆ. ಸೃಷ್ಠಿ ಆರ್. ಚೇತನ್ ಜಿ.ಎಂ. ಸಿಂಚನ, ಸಂತೋಷ್‍ಕುಮಾರ್, ಭುವನ ಜಿ.ಎಸ್
ಮತ್ತಿತರೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿದ್ದಾರೆ. ನುರಿತ ಉಪನ್ಯಾಸಕರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ನಡೆಸಲಾಗುವ ವಿಶೇಷ ತರಗತಿಗಳ ಮೂಲಕ ಸೂಕ್ತ ಮಾರ್ಗದರ್ಶನ ನೀಡಿದ ಪರಿಣಾಮ ನೀಟ್ ಪರೀಕ್ಷೆಯಲ್ಲಿ, ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಯಿತೆಂದು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಂ.ಚಂದ್ರಪ್ಪ, ಆಡಳಿತಾಧಿಕಾರಿ ಚಂದ್ರಕಲಾ ಹೆಚ್. ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಎಂ.ಸಿ.ರಘುಚಂದನ್, ಪ್ರಾಚಾರ್ಯರಾದ ಕೇಶವಮೂರ್ತಿ ಯು. ಇವರುಗಳು ಶ್ಲಾಘಿಸಿದ್ದಾರೆ.





