ಒಬ್ಬರೊನ್ನೊಬ್ಬರು ಕಾಲೆಳೆಯುವುದನ್ನು ಕೈ ಬಿಡಬೇಕು ಬಿಡದೆ ಹೋದರೆ ದೇವಾರಾಣೆ ಉದ್ದಾರವಾಗೊಲ್ಲ,ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಮಾಡುತ್ತಾರೆ, ಹೀಗೆ ಕಾಲೆಳೆದಿದ್ದರಿದಂಲೇ ನಾನು ಹಾಗೂ ಶ್ರೀರಾಮುಲು ಸೋಲಬೇಕಾಯಿತು ಎಂದು ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಹೇಳಿದರು.
ಚಳ್ಳಕೆರೆಯಲ್ಲಿ ನೆಡೆದ ಪರಿಶಿಷ್ಟ ಪಂಗಡಗಳ ಮುನ್ನೆಡೆ ಸಮಾವೇಶದಲ್ಲಿ ಮಾತಾಡಿದರು. ಮೊಳಕಾಲ್ಮೂರಿನಲ್ಲಿ ನಾನು ಗೆಲ್ಲುವ ಭರವಸೆಯಿತ್ತು. ಆದರೆ ಬಿಜೆಪಿ ನಾಯಕರು ನನಗೆ ಟಿಕೆಟ್ ತಪ್ಪಿಸಿ ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿದರು, ಬಾದಾಮಿಗೂ ಟಿಕೆಟ್ ನೀಡಿದ್ದರಿಂದ ಶ್ರೀರಾಮುಲು ಎರಡೂ ಕಡೆ ಕೆಲಸ ಮಾಡಲು ಆಗಲಿಲ್ಲ, ಆದ್ದರಿಂದ ಅಲ್ಲಿ ರಾಮುಲು ಸೋತು ಸಿದ್ದರಾಮಯ್ಯ ಗೆಲ್ಲಲು ಅವಕಾಶವಾಯ್ತು, ಗೆದ್ದ ಮೇಲೆ ನನ್ನ ಕರೆಸಿಕೊಂಡ ಸಿದ್ದರಾಮಯ್ಯ ನೀವು ನನ್ನ ಜೊತೆ ಇರಬೇಕೆಂದು ಹೇಳಿ ಟಿಕೆಟ್ ಕೊಡುವುದಾಗಿ ಹೇಳಿ ಸುಳ್ಳು ಭರವಸೆ ನೀಡಿದ್ದು, ಕೊನೆಗೆ ನನಗೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡರಲ್ಲು ಮೋಸವಾಯ್ತು ಎಂದರು. ಸಿದ್ದರಾಮಯ್ಯ ಅಂದೇ ಸೋತಿದ್ದರೆ ಅವರು ವಿರೋಧ ಪಕ್ಷದ ನಾಯಕನಾಗುತ್ತಿರಿಲಿಲ್ಲ, ಸಿಎಂ ಆಗುತ್ತಿರಲಿಲ್ಲ, ಆದ್ದರಿಂದ ನಾಯಕರು ಮೊದಲು ಕಾಲೆಳೆಯದೆ ಇರುವುದರ ಬಗ್ಗೆ ಚಿಂತನೆ ಮಾಡಲಿ ಎಂದರು.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಗೆಲ್ಲಿಸಲು ಕೈ ಜೋಡಿಸಬೇಕೆಂದು ಎಸ್ಟಿ ಮೋರ್ಚಾದ ನಾವು ಮೊದಲು ಒಗ್ಗಟ್ಟಾಗಬೇಕು ಒಗ್ಗಟ್ಟಾಗದೇ ಹೋದರೆ ನಾವು ಅಭಿವೃದ್ದಿಯಾಗಲ್ಲ, ಆದ್ದರಿಂದ ಇನ್ನೊಬ್ಬರನ್ನು ತುಳಿಯುವ ಬಗ್ಗೆ ಚಿಂತನೆ ಮಾದಡೆ ಒಗ್ಗಟ್ಟಾಗುವುದರ ಬಗ್ಗೆ ಚಿಂತಿಸಿ ಎಂದು ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತಪ್ಪ ಹೇಳಿದರು. ನಾಯಕ ಸಮುದಾಯ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಋಣಿಯಾಗಿರಬೇಕು ಎಂದು ಚಳ್ಳಕೆರೆ ಬಿಜೆಪಿ ಪರಾಜಿತ ಅಭ್ಯರ್ಥಿ ಅನಿಲ್ ಕುಮಾರ್ ಹೇಳಿದರು. ಜಿಲ್ಲಾಧ್ಯಕ್ಷ ಮುರುಳಿ ಮಾತಾಡಿ, ಆಯ್ದ ಕಾರ್ಯಕರ್ತರು ಹಾಗೂ ಮುಖಂಡರು ಸರ್ಕಾರದ ಯೋಜನೆಗಳು, ಅಭಿವೃದ್ದಿ ಕೆಲಸಗಳ ಬಗ್ಗೆ ಇಡೀ ಸಮುದಾಯಕ್ಕೆ ತಿಳಿಸಬೇಕು.ಬಿಜೆಪಿ ರಾಜ್ಯಾಧ್ಯಕ್ಷರು ನಿಮ್ಮೆಲ್ಲರ ಭರವಸೆಯಿಂದ ಲೋಕಸಭಾ ಚುನಾವಣೆಯಲ್ಲಿ 25 ಸೀಟು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಅವರ ಮಾತನ್ನು ಉಳಿಸಿಕೊಡುವ ಕೆಲಸವನ್ನು ಈ ಸಮುದಾಯ ಮಾಡಬೇಕೆಂದರು.





