ಕಳೆದ ಡಿಸೆಂಬರ್ ನಲ್ಲಿ ಚಿತ್ರದುರ್ಗ ಜಿಲ್ಲೆಯನ್ನಷ್ಟೆ ಅಲ್ಲದೆ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ್ದ, ಐದು ಸ್ಕೆಲಿಟನ್ ಗಳ ಎಫ್ ಎಸ್ ಎಲ್ ವರದಿ ಬಹಿರಂಗ ಗೊಂಡಿದ್ದು, ನಿದ್ದೆ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅಭಿಪ್ರಾಯವನ್ನುಎಪ್ ಎಸ್ ಎಲ್ ತನ್ನ ವರದಿಯಲ್ಲಿ ನೀಡಿದೆ ಎಂದು ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡರು.ಐದು ಅಸ್ತಿ ಪಂಜಿರಗಳ ಮೂಳೆ ಮತ್ತು ಅಗತ್ಯವಿರುವ 71 ವಸ್ತುಗಳನ್ನು ಎಫ್ ಎಸ್ ಎಲ್ ಗೆ ಕಳುಹಿಸಲಾಗಿತ್ತು. ಘಟನೆ ಬೆಳಕಿಗೆ ಬಂದು ಅಸ್ತಿ ಪಂಜಿರಗಳು ಸಿಕ್ಕ ಮನೆಗೆ ಎಫ್ ಎಸ್ ಎಲ್ ನಿರ್ದೇಶರು ಭೇಟಿ ನೀಡಿದ್ದರು. ಇದರ ಜೊತೆಗೆ ಪೂರ್ವ ವಲಯದ ಐಜಿ ಮತ್ತು ಅಧಿಕಾರಿಗಳು ತನಿಖೆ ಅಗತ್ಯವಿರುವ ವಸ್ತುಗಳನ್ನು ಪಡೆದುಕೊಂಡು ಹೋಗಿದ್ದರು.ಆದಾದ ಮೇಲೆ ಮತ್ತಷ್ಟು ವಸ್ತುಗಳನ್ನು ಕಳುಹಿಸಿಕೊಡಲಾಗಿತ್ತು.ಇದಕ್ಕೂ ಮುನ್ನ ಅಸ್ತಿ ಪಂಜಿರಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಸರ್ಕಾರಿ ಆಸ್ಪತ್ರೆ ವಿಧಿ ವಿಜ್ಞಾನ ತಜ್ಞ ಡಾ.ವೇಣು ಹಾಗೂ ಬಸವೇಶ್ವರ ಆಸ್ಪತ್ರೆಯ ವಿಧಿ ವಿಜ್ಞಾನ ವಿಭಾಗದ ಹೆಚ್ ಓಡಿ ಡಾ. ಕೃಷ್ಣ ಅವರ ಸಹಾಯವನ್ನು ಪಡೆದು ಮಾದರಿಗಳನ್ನು ಪಡೆದು ತನಿಖಾಧಿಕಾರಿಗೆ ಕಳುಹಿಸಲಾಗಿತ್ತು.ಇದೆಲ್ಲವನ್ನು ಪಡೆದುಕೊಂಡ ವಿಧಿ ವಿಜ್ಞಾನ ಪ್ರಯೋಗಾಲಯದ ವೈದ್ಯರುಗಳು ಅಂತಿಮವರದಿಯನ್ನು ನಮಗೆ ಕಳುಹಿಸಿ ಕೊಟ್ಟಿದ್ದಾರೆ. ವರದಿಯಲ್ಲಿ ಮೂಳೆ ಮತ್ತು ಅಸ್ತಿ ಪಂಜಿರಗಳಲ್ಲಿ ಎಲ್ಲೂ ಪೆಟ್ಟು ಬಿದ್ದಿರುವ ಗುರುತುಗಳು ಕಂಡುಬಂದಿಲ್ಲ. ಇನ್ನು ಸಂಗ್ರಹಿಸಿದ್ದ ಮಾದರಿಗಳ ಟಿಶ್ಯು ಗಳಲ್ಲಿ ನಿದ್ದೆ ಬರುವಂತಹ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದ್ದಾರೆ.ಇದಷ್ಟೆ ಅಲ್ಲದೆ ಅಡುಗೆ ಮನೆಯಲ್ಲಿದ್ದ ಎರಡು ಪಾತ್ರೆ ಚಮಚ ಮತ್ತು ಬೌಲ್ ನಲ್ಲಿದ್ದ ವಸ್ತು ಪರೀಕ್ಷಿಸಿದ್ದು, ಅದರಲ್ಲಿ, ಸೈನೈಡ್ ಗೆ ಸಂಬಂಧಿಸಿದ್ದು ಇದ್ದಿದ್ದು, ಕಂಡು ಬಂದಿದೆ ಎಂದು ವರದಿಯನ್ನು ನೀಡಿದ್ದಾರೆ. ಮನೆಯಲ್ಲಿ ಮತ್ತಷ್ಟು ಮಾತ್ರೆಗಳು ಮತ್ತು ಹಾಗೂ ವೈದ್ಯಕೀಯ ವರದಿಗಳು ಸಿಕ್ಕಿದ್ದು, ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸೈನೈಡ್ ಸೇಚಿಸಿರುವ ಬಗ್ಗೆ ವರದಿಯಲ್ಲಿ ಯಾವುದೇ ಮಾಹಿತಿಲ್ಲ. ಆದರೆ ಪಾತ್ರೆಗಳಲ್ಲಿತ್ತು ಎಂದು ಕಂಡು ಬಂದಿದೆ.
ಪೊಲೀಸ್ ತನಿಖೆ ಏನು ಹೇಳುತ್ತದೆ: ಪೋಲಿಸ್ ತನಿಖೆಯ ಪ್ರಕಾರ ಐದು ಜನರು 2019 ರ ಫೆಬ್ರವರಿ ಕೊನೆ ಅಥವ ಮಾರ್ಚ್ ಮೊದಲ ವಾರದಲ್ಲಿ ಆಗಿರಬಹುದು ಎಂದು ಅನಿಸುತ್ತಿದೆ. ಮರಣೋತ್ತರ ಪರೀಕ್ಷೆಯನ್ನು ನಡೆಸಿದಾಗ ಅದರಲ್ಲಿ ಕೂಡ 4 ರಿಂದ 5 ವರ್ಷಗಳಾಗಿವೆ ಎಂದು ವರದಿ ಬಂದಿದೆ. ಅವರು ವಿದ್ಯುತ್ ಸಂಪರ್ಕ, ಅವರ ಪೆನ್ಷನ್ ರೆಕಾರ್ಡ್ ಲ್ಲಿ ಕೂಡ ಹಣ ಡ್ರಾ ಮಾಡಿರುವುದು ಇದೇ ಮಾಹಿತಿ ಲಭ್ಯವಾಗಿದೆ.
ಆಸ್ತಿ ವಿವರ : ಪೊಲೀಸ್ ತನಿಖೆಯಲ್ಲಿ ಅವರ ದೂರದ ಸಂಬಂಧಿಗಳನ್ನು ಕರೆಸಿ ವಿಚಾರಣೆ ಮಾಡಿದಾಗ ಅವರು ಕೂಡ ಗುಬ್ಬಿಯಲ್ಲಿ ಆಸ್ತಿ ಇತ್ತು ಎಂದು ಹೇಳುತ್ತಾರೆ. ಆದರೆ ನಿಖರ ಮಾಹಿತಿ ಸಿಕ್ಕಿಲ್ಲ. ಆದ್ದರಿಂದ ಬೇರೆ ಬೇರೆ ಇಲಾಖೆಗಳಿಗೆ ಪತ್ರ ಬರೆದು ತನಿಖೆಯಲ್ಲಿ ತಿಳಿದುಕೊಳ್ಳುತ್ತೇವೆ. ಇನ್ನು ಅವರ ಪೆನ್ಷನ್ ಖಾತೆಯಲ್ಲಿಎಷ್ಟು ಹಣವಿತ್ತು ಎಂದು ತಿಳಿದುಬಂದಿಲ್ಲ.
ತನಿಖೆ ವೇಳೆ ಸಿಕ್ಕ ಡೆತ್ ನೋಟ್ ಏನು ಹೇಳುತ್ತದೆ: ತನಿಖೆ ಸಮಯದಲ್ಲಿಸಿಕ್ಕಿದ್ದ ಡೆತ್ ನೋಟ್ ನ ಕೈ ಬರಹ ಓಲಿಕೆ ಮಾಡಿ ನೋಡಲು ಮಾದರಿ ಬರವಣಿಗೆ ಬೇಕಾಗುತ್ತದೆ. ಅವರ ಮನೆಯಲ್ಲಿದ್ದ ಬರವಣಿಗೆ ದಾಖಲೆಗಳು, ಮತ್ತು ಬರವಣಿಗೆಯ ಮಾದರಿಗಳಯ ಸಿಕ್ಕಿಲ್ಲ.ಇದರಿಂದ ಇದನ್ನು ಎಫ್ ಎಸ್ ಎಲ್ ಗೆ ಕಳುಹಿಸಲು ಸಾಧ್ಯವಾಗಿಲ್ಲ. ಆದರೆ ತನಿಖಾಧಿಕಾರಿಗೆ ಹೆಚ್ಚಿನ ಶ್ರಮಹಾಕಿ ಬರವಣಿಗೆಯ ಮಾದರಿ ಸಿಕ್ಕರೆ ನೋಡಿ ಎಂದು ಸೂಚನೆ ನೀಡಿದ್ದೇವೆ ಎಂದರು.
ಹಣದ ವ್ಯವಹಾರ ಬಗ್ಗೆ ತನಿಖೆಗೆ ಪೂರಕವಾದ ಮಾಹಿತಿ ಸಿಕ್ಕಿಲ್ಲ. ಇನ್ನು ಐದು ಜನರು ವಾಸ ಮಾಡುತ್ತಿದ್ದ ಮನೆಯೂ ಕೂಡ ಲಾಯರ್ ಒಬ್ಬರಿಗೆ ಮಾರಾಟ ಮಾಡಿರುವ ಬಗ್ಗೆ ಕಾರಾರು ಪತ್ರ ಸಿಕ್ಕಿದೆ. ಅದರಲ್ಲಿ ಸ್ಥಳೀಯ ಸಿವಿಲ್ ಕೋರ್ಟ್ ನಲ್ಲಿ ವಿವಾದವಿದ್ದು ಅದು ಜಗನ್ನಾಥ ರೆಡ್ಡಿ ಅವರಂತೆ ಆಗಿದ್ದು, ನಂತರ ಅದು ಹೈ ಕೋರ್ಟ್ ವರೆಗೆ ಹೋಗಿದೆ.ಪ್ರಕರಣ ಇನ್ನು ನೆಡೆಯುತ್ತಿದೆ. ಈ ಬಗ್ಗೆ ಅವರಿಗೆ ನೋಟೀಸ್ ಗಳು ಬಂದಿದ್ದರೂ ಯಾರೂ ಅದನ್ನು ಅಟೆಂಡ್ ಮಾಡಿಲ್ಲ ಎಂದು ಹೇಳಿದರು.ಒಟ್ಟಾರೆ ಇದು ಜಗನ್ನಾಥ್ ರೆಡ್ಡಿ,ಪ್ರೇಮ ಲೀಲಾ,ಕೃಷ್ಣಾರೆಡ್ಡಿ ಮತ್ತು ತ್ರಿವೇಣಿ,ನರೇಂದ್ರ ಐದು ಜನರು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳುವ ಮೂಲಕ ಸಾವಿನ ಸುತ್ತ ಇದ್ದ ಅನುಮಾನದ ಬಗ್ಗೆ ಎಫ್ ಎಸ್ ಎಲ್ ತನ್ನ ವರದಿಯಲ್ಲಿ ತೆರೆ ಎಳೆದಿದೆ.





