ವಿಧಾನ ಸಭಾ ಚುನಾವಣೆಯು ಸಮೀಪಿಸುತ್ತಿದೆ, ಚುನಾವಣೆಯಲ್ಲಿ ಆಕಾಂಕ್ಷಿತ ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ತೀವ್ರ ಪೈಪೋಟಿಯನ್ನು ನಡೆಸುತ್ತಾ ಹೈ ಕಮಾಂಡ್ ಮುಂದೆ ತಮ್ಮ ನಿವೇದನೆಯನ್ನು ಇಡುತ್ತಿವೆ.ಆದರೆ ಇದೀಗ ಇದರ ಸಾಲಿಗೆ ಮಾದಿಗ ಸಮೂದಾಯದ (ಎಡಗೈ) ಎರಡನೇ ಸಾಲಿನ ನಾಯಕರುಗಳು ರಾಜ್ಯದಲ್ಲಿ ಯಾವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರಾಗಿ, ಪ್ರಾಮಾಣಿಕವಾಗಿ ದುಡಿದ ಮಾದಿಗ ಸಮೂದಾಯದವರಿಗೆ (ಎಡಗೈ) ಮಾತ್ರ ಟಿಕೆಟ್ ನೀಡಬೇಕು ಎಂದು ರಾಜ್ಯ ಚುನಾವಣಾ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರಾದ ಮೋಹನ್ ಪ್ರಕಾಶ್ ಜಿ ಹಾಗೂ ಸದಸ್ಯರಾದ ನೀರಜ್ ಡೇಂಗಿ ಅವರುಗಳಿಗೆ ಮನವಿ ನೀಡುವ ಮೂಲಕ ಒತ್ತಡ ಹೇರಿದರು.
ಇದರ ಜೊತೆಗೆ ಮಾದಿಗ ಸಮುದಾಯದ (ಎಡಗೈ) ಎರಡನೇ ಸಾಲಿನ ಮುಖಂಡರುಗಳು ವಿಧಾನ ಸಭಾ ಚುನಾವಣಾ ಆಕಾಂಕ್ಷಿಗಳ ಪಟ್ಟಿಯನ್ನು ಸಲ್ಲಿಸಿದರು.
ಈ ನಿಯೋಗದಲ್ಲಿ ಲಿಡ್ಕರ್ ನ ಮಾಜಿ ಅಧ್ಯಕ್ಷರುಗಳಾದ ಓ. ಶಂಕರ್, ಆರ್. ರಾಮಕೃಷ್ಣ, ಚಿತ್ರದುರ್ಗ ಲೋಕಸಭಾ ಪರಾಜಿತ ಅಭ್ಯರ್ಥಿಯಾದ ಡಾ.ಬಿ. ತಿಪ್ಪೇಸ್ವಾಮಿ,ಮಾಜಿ ಸಚಿವರಾದ ಹನುಮಂತಪ್ಪ ಅಲ್ಕೋಡ್, ಔರಾದ್ ಆಕಾಂಕ್ಷಿಯಾದ ಚಂದ್ರಕಾಂತ್ ಹಿಪಾಗಳವ್ ಹಾಗೂ ಇತರೇ ಮುಖಂಡರು ಹಾಜರಿದ್ದರು





