ಚಿತ್ರದುರ್ಗದ ರೈಲು ಪ್ರಯಾಣಿಕರಿಗೆ ಶುಭ ಸುದ್ದಿ ಕೊಟ್ಟ ಸಂಸದ ಕಾರಜೋಳ
ಚಿತ್ರದುರ್ಗ,17: ಹೊಸಪೇಟೆ-ಬೆಂಗಳೂರು ಪ್ಯಾಸೆಂಜರ್ ಟ್ರೈನ್‍ಗೆ ಹೊಳಲ್ಕೆರೆ ಹಾಗೂ ಅಮೃತಾಪುರ ನಿಲ್ದಾಣಗಳಲ್ಲಿ ನಿಲುಗಡೆಯನ್ನು ನೀಡಲಾಗಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.
ಬೆಂಗಳೂರು-ಹೊಸಪೇಟೆ-ಬೆಂಗಳೂರು ನಡುವೆ ಹೊಸದುರ್ಗ-ಹೊಳಲ್ಕೆರೆ-ಚಿಕ್ಕಜಾಜೂರು-ಚಿತ್ರದುರ್ಗ-ಚಳ್ಳಕೆರೆ -ಹೊಸಪೇಟೆವರೆಗೆ ಸಂಚರಿಸಲಿರುವ 06243/06244 ರೈಲಿಗೆ ಹೊಳಲ್ಕೆರೆ ಹಾಗೂ ಅಮೃತಾಪುರ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆ ನೀಡುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದ್ದರು. ಸಾರ್ವಜನಿಕರ ಹಿತಾಸಕ್ತಿಯನ್ನು ಗಮನಿಸಿ ರೈಲ್ವೆ ಸಚಿವರ ಗಮನ ಸೆಳೆದ ಸಂಸದ ಗೋವಿಂದ ಎಂ.ಕಾರಜೋಳ ಈ ಎರಡೂ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆ ಒದಗಿಸುವಂತೆ ರೈಲ್ವೇ ಸಚಿವರು ಹಾಗೂ ಇಲಾಖೆಗೆ ಮನವಿ ಮಾಡಿದ್ದು,ಅದರಂತೆ ನಿಲುಗಡೆ ಆದೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಪೇಟೆ-ಬೆಂಗಳೂರಿಗೆ ಸಂಚರಿಸಲಿರುವ ಈ ಟ್ರೈನಿಗೆ ಈ ಕೆಳಗಿನಂತೆ ನಿಲುಗಡೆ ಒದಗಿಸಲಾಗಿದೆ.
ಹೊಳಲ್ಕೆರೆ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ :ಬೆಳಗ್ಗೆ 09.57/09.58,ಸಂಜೆ 05.23/05.24
ಅಮೃತಾಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ : ಬೆಳಿಗ್ಗೆ 10.30/10.31,ಸಂಜೆ 04.50/04.51 ನಿಲುಗಡೆಯಾಗಲಿದೆ. ನಿಲುಗಡೆಯ ಟ್ರೈನ್ ಗಳಿಗೆ ನಾಳೆ ಸಂಸದ ಗೋವಿಂದ ಎಂ.ಕಾರಜೋಳ ನಾಳೆ 9.57 ಕ್ಕೆ ಹೊಳಲ್ಕೆರೆ ರೈಲ್ವೆ ನಿಲ್ದಾಣದಲ್ಲಿ ಹಾಗೂ 10.30 ಕ್ಕೆ ಅಮೃತಾಪುರ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಅಧೀಕೃತವಾಗಿ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ತಿಳಿಸಿದೆ.





