ಚಳ್ಳಕೆರೆ: ಭಾರತೀಯ ಹಿಂದೂ ಸನಾತನ ಧರ್ಮ ಭಕ್ತಿ ಭಾವನೆ ಮತ್ತು ನಂಬಿಕೆಗಳ ನೆಲೆ ನಾಡು ಈ ಚಿತ್ರದುರ್ಗ ಜಿಲ್ಲೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು.
ಅವರು ಇಂದು ತುಳುಕು ಹೋಬಳಿಯ ಹಿರೇಹಳ್ಳಿಯಲ್ಲಿ ದೊಡ್ಡ ಸೂರ ನಾಯಕರ ಮೀಸಲು ನೀರು ಕುಂಭ ಮತ್ತು ದೇವರ ಎತ್ತು ಹರಸುವ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ಈ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಬುಡಕಟ್ಟು ಸಮುದಾಯಗಳಾದ ಮ್ಯಾಸಮಂಡಲ ಮತ್ತು ಕಾಡುಗೊಲ್ಲ ಜನಾಂಗಗಳ ಧಾರ್ಮಿಕ ಆಚರಣೆಗಳು, ವಿಭಿನ್ನ ರೀತಿಯ ಜೀವನ ಶೈಲಿಗಳು ಮತ್ತು ಸಮಾಜದಲ್ಲಿನ ಸಹ ಬಾಳ್ವೆ,ನಿಸ್ವಾರ್ಥದ ಬದುಕಿಗೆ ಹಿಡಿದ ಕೈಕನ್ನಡಿಯಾಗಿದೆ.
ಈ ಜನಾಂಗಗಳ ಬದುಕೇ ಒಂದು ಸ್ವಾಭಿಮಾನದ ಸಂಕೇತವಾಗಿದೆ. ಬಡತನ ಮತ್ತು ಅನಕ್ಷರತೆ ಮೀರಿ ಈ ಸಮಾಜಗಳು ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿ ಹೊಂದುತ್ತಿರುವುದು ಸಾರ್ಥಕವೆನಿಸುತ್ತದೆ. ಕಠಿಣ ವೃತದ ಮುಖಾಂತರ ಈ ದೇವರ ಪೂಜಾ ಕಾರ್ಯ ಗಳನ್ನು ಈ ಭಕ್ತಾದಿಗಳು ಪಾಲಿಸಿ ದೇವರ ಗುಡಿ ತುಂಬಿಸುವ ಕೆಲಸ ಮಾಡಿ, ಈ ದೇವರೆತ್ತುಗಳ ಪೂಜಾ ಕಾರ್ಯ ಧಾರ್ಮಿಕ ಪರಾಕಷ್ಟೆಗೆ ಪೂರಕವಾಗಿದೆ.ಇದರ ಜೊತೆಗೆ ಈ ಸಮುದಾಯದ ಕುಟುಂಬಗಳು ಇನ್ನು ಹೆಚ್ಚು ಹೆಚ್ಚು ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿ ಸಾಧಿಸುವ ಅವಶ್ಯಕತೆ ಇದೆ ಹೆಚ್ಚು ಹೆಚ್ಚು ಈ ಕುಟುಂಬದ ಮಕ್ಕಳು ಉನ್ನತ ಶಿಕ್ಷಣ ತಮ್ಮದಾಗಿಸಿಕೊಂಡು ಸ್ವಾವಲಂಬಿ ಕುಟುಂಬಗಳಾಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷರುಗಳಾದ ಮಂಜಮ್ಮ, ಜ್ಞಾನೇಶ್ ಸದಸ್ಯರಾದ ಚಂದ್ರಣ್ಣ ಮಲ್ಲೇಶ್ ಬಿಜೆಪಿ ಮುಖಂಡರಾದ ರೂಪ ನಾಗರಾಜ್ ಮತ್ತಿತರ ಉಪಸ್ಥಿತರಿದ್ದರು.





