ಚಿತ್ರದುರ್ಗ: ಹಿರಿಯೂರು ತಾಲೂಕಿನ ಉಡುವಳ್ಳಿ ಬಳಿ
ಬೆಳಗಿನ ಜಾವ ಲಾರಿಯೊಂದನ್ನು ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿ ಚಾಲಕ ನಲ್ಲಿದ್ದ ಮೊಬೈಲ್ ಹಾಗೂ 15000 ರೂಪಾಯಿ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ .
ಲಾರಿ ಚಾಲಕ ನರಸಿಂಹ ರಾಜು ದರೋಡೆ ಕೋರರಿಂದ ಹಲ್ಲೆಗೊಳಗಾದ ವ್ಯಕ್ತಿ.ಅವನ ಬಳಿಯಿದ್ದ 15 ಸಾವಿರ ಹಾಗೂ ಒಂದು ಮೊಬೈಲ್ ದೋಚಿದ್ದಾರೆ.
ಲಾರಿಯೂ ಹಿರಿಯೂರಿನಿಂದ ಬಳ್ಳಾರಿ ಕಡೆಗೆಹೋಗುತ್ತಿತ್ತು ಎನ್ನಲಾಗಿದೆ ಅದೇ ವೇಳೆಗೆ ಬಿಜಾಪುರದಿಂದ ಮೈಸೂರಿಗೆ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನ ಚಾಲಕ ಸಂಶಯ ಬಂದು ಇಳಿದು ನೋಡಲು ಹೋದಾಗ ಆತನ ತಲೆಗೂ ದರೋಡೆಕೋರರು ಕಲ್ಲಿನಿಂದ ಹೊಡೆದಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಡಿವೈಎಸ್ಪಿ ರೋಷನ್ ಜಮೀರ್, ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಭೇಟಿನೀಡಿದ್ದರು. ಚಿತ್ರದುರ್ಗದಿಂದ ಶ್ವಾನದಳವನ್ನು ಕರೆಸಲಾಗಿತ್ತು . ಪ್ರಕರಣವನ್ನು ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಂಯುಕ್ತವಾಣಿ