ಹೊಸದುರ್ಗದ ಹುಳಿಯಾರ್ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಬಳಿ ಕಾರಿನಲ್ಲಿಟ್ಟಿದ್ದ 10 ಲಕ್ಷ ನಗದನ್ನು ಗ್ಲಾಸ್ ಹೊಡೆದು ದೋಚಿದ್ದ ಆರೋಪಿಯನ್ನು ಹೊಸದುರ್ಗ ಸಿಪಿಐ ತಿಮ್ಮಣ್ಣ ಮತ್ತು ತಂಡ ಬಂಧಿಸಿದ್ದಾರೆ.
ಕಳೆದ ತಿಂಗಳು ಕಾರಿನಲ್ಲಿದ್ದ 10 ಲಕ್ಷ ಹಣವನ್ನು ಕಾರಿನ ಕಿಟಕಿಯ ಗಾಜು ಹೊಡೆದು ದೋಚುತ್ತಿದ್ದರು. ಇದರ ಪ್ರಕರಣವನ್ನು ಹೊಸದುರ್ಗ ಠಾಣೆಯಲ್ಲಿ ದಾಖಲಿಸಲಾಗಿತ್ತು. ಆರೋಪಿಗಳ ಪತ್ತೆಗೆ ಸಿಪಿಐ ತಿಮ್ಮಣ್ಣ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡವು ಪತ್ತೆ ಕಾರ್ಯದಲ್ಲಿ ತೊಡಗಿದ್ದು, ಆಂಧ್ರದ ಬಾನಾಲ ಇಚ್ಕೈಲ್ ಎಂಬ ಆರೋಪಿಯನ್ನು ಬಂಧಿಸಿ ಬಂಧಿತನಿಂದ 7 ಲಕ್ಷದ ಎರಡು ಸಾವಿರ ರೂಪಾಯಿ ವಶಕ್ಕೆ ಪಡೆದಿದ್ದಾರೆ. ಈ ಆರೋಪಿ ಹಾಗೂ ಇತರೇ ನಾಲ್ಕುಕು ಜನರು ಸೇರಿ ಬ್ಯಾಂಕ್ ಬಳಿ ಹಣ ವಹಿವಾಟು ಮಾಡುವವರನ್ನು ಗಮನಿಸಿ ದೋಚುತ್ತಿದ್ದರು. ಅದೇ ರೀತಿ ಹೊಸದುರ್ಗದಲ್ಲಿ ಕಾರಿನಿಂದ ಹಣ ದೋಚಿದ್ದು, ಸಾರ್ವಜನಿಕರು ಬ್ಯಾಂಕ್ ಗಳಲ್ಲಿ ಹಣದ ವಹಿವಾಟು ಮಾಡುವ ಸಾರ್ವಜನಿಕರು ಜಾಗರೂಕತೆ ಹಾಗೂ ಸುರಕ್ಷಿತರಾಗಿರಬೇಕು ಎಂದು ಪೊಲೀಸರು ಮನವಿ ಮಾಡಿದ್ದು, ಆರೋಪಿ ಪತ್ತೆ ಕಾರ್ಯವನ್ನು ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಅಭಿನಂದಿಸಿದ್ದಾರೆ.





