ನಾನುಸಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ ಡಿಕೆ ಶಿವಕುಮಾರ್ ಅವರು ಭಾರತ್ ಜೋಡೋ ಕಾರ್ಯಕ್ರಮದಲ್ಲಿ ಕೈ ಎತ್ತಿಸುವ ಮೂಲಕ ಟಿಕೆಟ್ ಕೊಡುವ ಭರವಸೆ ನೀಡಿದ್ದು ಯಾರೂ ಗೊಂದಲದಲ್ಲಿರುವ ಅವಶ್ಯಕತೆ ಇಲ್ಲ, ನನಗೆ ಟಿಕೆಟ್ ಸಿಗುವುದು ಖಚಿತ ಎಂದು ಕಾಂಗ್ರೆಸ್ ನ ಯೋಗೇಶ್ ಬಾಬು ಹೇಳಿದರು.
ಅವರು ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಮೊಳಕಾಲ್ಮೂರಿನ ಕ್ಷೇತ್ರದ ಜನರುಗೊಂದಲ್ಲಿದ್ದಾರೆ. ನಮ್ಮ ಪಕ್ಷ ಇತಿಹಾಸವಿರುವ ಪಕ್ಷ ಯಾರಿಗೆ ಆದ್ಯತೆ ಎಂದು ಗೊತ್ತಾಗುತ್ತದೆ. ವಿದ್ಯಾರ್ಥಿ ದಿನಗಳಿಂದ ನಾನು ಪಕ್ಷದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ, ಹಂತ ಹಂತವಾಗಿ ಕೆಲಸ ಮಾಡಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ನಂತರ ಕಳೆದ ಬಾರಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ವಿಧಾನ ಸಭಾ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಕಾರಣಾಂತರದಿಂದ ಸೋಲು ಅನುಭವಿಸಿದ್ದೇನೆ.ಸೋಲಿನ ಬಳಿಕವು ಸುಮ್ಮನೆ ಕುಳಿತಿಕೊಳ್ಳದೆ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮಾಡಿದ್ದೇನೆ.ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಂಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮತಗಳನ್ನು ನೀಡಿದ ಹೆಗ್ಗಳಿಕೆ ನಮಗಿದೆ.ಕೋವಿಡ್ ಸಮಯದಲ್ಲಿ ಸಾಮಾಜಿಕ ಕೆಲಸ ಮಾಡಿದ್ದೇವೆ.ಪ್ರತೀ ಹಂತದಲ್ಲಿ ಪಕ್ಷ ಸಂಘಟನೆಯನ್ನು ಮಾಡಿದ್ದೇನೆ. ಶ್ರೀರಾಮುಲು ಪಲಾಯನ ಮಾಡಲು ಕಾಂಗ್ರೆಸ್ ನ ನಮ್ಮ ಸಂಘಟನೆ ಕಾರಣವಾಗಿದೆ. ಭಾರತ್ ಜೋಡೋ ಯಾತ್ರೆ ನಮ್ಮ ಕ್ಷೇತ್ರದಲ್ಲಿ ಮೂರು ದಿನ ಹಾದು ಹೋಗಿದೆ. ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದೇವೆ. ಡಿಕೆ ಶಿವಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಕೈ ಎತ್ತಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಎಂದು ಹೇಳಿದ್ದರು. ಈಗ ತಿಪ್ಪೇಸ್ವಾಮಿಪಕ್ಷ ತೊರೆದು ಹೋಗಿದ್ದಾರೆ. ಉಳಿದಿರುವುದು ನಾನೊಬ್ಬನೆ, ಈಗ ಪಕ್ಷ ನನಗೆ ಟಿಕೆಟ್ ನೀಡುವ ಭರವಸೆ ನೀಡಿದೆ. ಇದಕ್ಕಾಗಿ ಯಾವುದೇ ಗೊಂದಲ ಬೇಡ,ಅರ್ಜಿಹಾಕಿದ ಯಾರಿಗಾದರೂ ಟಿಕೆಟ್ ನೀಡಲಿ ಸೀನಿಯರ್ಸ್ ಮತ್ತು ಜೂನಿಯರ್ಸ್ ಆಂತ ಏನಿಲ್ಲ,ತಳಮಟ್ಟದಿಂದ ನಾವು ಪಕ್ಷಕ್ಕೆ ದುಡಿದಿದ್ದೇವೆ, ನಮಗೆ ಟಿಕೆಟ್ ತಪ್ಪುವ ಭೀತಿ ಇಲ್ಲ, ಪಕ್ಷಾಂತರ ಪರ್ವಗಳು ರಾಜಕೀಯದಲ್ಲಿನಡೆಯುತ್ತಿರುತ್ತವೆ.ಒಂದುಟಿಕೆಟ್ ತಪ್ಪಿದರೆ ಆಗ ನನ್ನ ನಿಲುವು ಹೇಳುತ್ತೇನೆ ಎಂದರು.





