ಐದು ವರ್ಷಗಳು ಸರ್ಕಾರದ ಜೊತೆ ಹೋರಾಟದ ಮೂಲಕ ಹಣ ತಂದು ಅಭಿವೃದ್ದಿಗಾಗಿ ಮಾಡಿದ್ದೇನೆ
ನಮ್ಮ ಸರ್ಕಾರವಿಲ್ಲದಿದ್ದಾಗಲು ಕೂಡ ಹೋರಾಟ ಪ್ರತಿಭಟನೆ ಮಾಡುವ ಮೂಲಕ ಚಳ್ಳಕೆರೆ ಕ್ಷೇತ್ರದ ಅಭಿವೃದ್ದಿಗೆ ಅನುದಾನವನ್ನು ತಂದಿದ್ದೇನೆ ಎಂದು ಚಳ್ಳಕೆರೆ ಶಾಸಕ ರಘುಮೂರ್ತಿ ಹೇಳಿದರು.
ಅವರು ಚಳ್ಳಕೆರೆ ನನ್ನಿವಾಳ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಚಾರದಲ್ಲಿ ಮಾಡುತ್ತಾ ಮಾತನಾಡಿದರು. ನನ್ನ ಕ್ಷೇತ್ರದಲ್ಲಿ 36 ಎಸ್ಟಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಹಟ್ಟಿಗಳಿವೆ. ಇವುಗಳಿಗೆ ನಾನು ಒಂದಕ್ಕೊಂದು ರಸ್ತೆ ಸಂಪರ್ಕವನ್ನು ಕಲ್ಪಿಸಿದ್ದೇನೆ. ಇವೆಲ್ಲವೂ ಕೂಡ 2013 ರಿಂದ 2018 ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿಸಾಕಷ್ಟು ಅಭಿವೃದ್ದಿಯನ್ನು ಕ್ಷೇತ್ರದಲ್ಲಿ ಮಾಡಿದ್ದೇನೆ. ಇನ್ನು ಸಿಸಿ ರಸ್ತೆ ಕೊಳವೆ ಬಾವಿ, ಮತ್ತು ಇದೇ ಅವಧಿಯಲ್ಲಿ 10 ಸಾವಿರ ಮನೆಗಳನ್ನು ಕೊಟ್ಟಿದ್ದು, ರಾಯಭಾರಿ ಹಟ್ಟಿಯಲ್ಲಿ 12 ಮನೆಗಳನ್ನು ಕೊಟ್ಟಿದ್ದೇವೆ. ಹೊಸಪೇಟೆ ಡ್ಯಾಂನಿಂದ ಪ್ರತಿಯೊಂದು ಹಳ್ಳಿಗೆ ಕುಡಿಯುವ ನೀರು ಕೊಡುವ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ. ಇನ್ನು ಮೂರು ತಿಂಗಳಲ್ಲಿ ಸಂಪರ್ಕ ಕೊಡುತ್ತಾರೆ ಎಂದು ಹೇಳಲಾಗುತ್ತದೆ. ಇನ್ನು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕ್ಷೇತ್ರದ 9 ಕೆರೆಗಳು ಮಾತ್ರ ಸೇರ್ಪಡೆಯಾಗಿದ್ದವು, ಆದರೆ ಬಿಟ್ಟು ಹೋಗಿರುವ ಕೆರೆಗಳನ್ನು ಕೂಡ ನಾವು ಸೇರಿಸಿದ್ದೇವೆ. ಬಿಜೆಪಿ ಸರ್ಕಾರ ಬಂದ ಕೂಡಲೇ ತುರುವನೂರಿಗೆ ಮಂಜೂರಾಗಿದ್ದ ಪದವಿ ಕಾಲೇಜ್ ನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಈ ಕಾಲೇಜ್ ನಿಂದಾಗಿ ಸುತ್ತಮುತ್ತಲಿನ ಮೂರ್ನಾಲ್ಕು ಊರುಗಳಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು. ಆದರೆ ಸ್ಥಳಾಂತರ ಮಾಡಿದ್ದರಿಂದ ಅನಾನುಕೂಲವಾಗಿತ್ತು. ಇದರಿಂದ ಕೋವಿಡ್ ಸಮಯದಲ್ಲಿ ಧರಣಿ ಮಾಡುವ ಮೂಲಕ ಅನೇಕ ಸಂಘ ಸಂಸ್ಥೆಗಳು ಮಠಾಧೀಶರುಗಳ ಸಹಕಾರ ಸಿಕ್ಕಿತ್ತು. ಧರಣಿಯಲ್ಲಿ ನನ್ನ ಬಂಧನವು ಆಗಿತ್ತು. ಕೊನೆಗೆ ಇದನ್ನೆಲ್ಲಾ ನೋಡಿದ ಸರ್ಕಾರ ಮತ್ತೆ ಕಾಲೇಜ್ ನ್ನು ಇಲ್ಲಿಗೆ ಕೊಟ್ಟಿತು.ನಂತರ ಇಡೀ ಜಿಲ್ಲೆಯಲ್ಲಿ ಐದು ತಾಲೂಕಿನಲ್ಲಿ ಬಿಜೆಪಿ ಶಾಸಕರಿದ್ದರು. ಆದರೆ ಚಳ್ಳಕೆರೆ ಕ್ಷೇತ್ರದಲ್ಲಿ ನಾನೊಬ್ಬನೆ ಕಾಂಗ್ರೆಸ್ ಶಾಸಕನಿದ್ದಿದ್ದು,ಅನುದಾನ ಬಿಡುಗಡೆ ಮಾಡುತ್ತಿರಲಿಲ್ಲ, ಇದರಿಂದ ಕಮಿಟಿ ಸಭೆಗಳಲ್ಲಿ ಹೋರಾಟ ಮಾಡಿ ಅವರಿಗೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳುವ ಮೂಲಕ ಅನುದಾನವನ್ನು ತಂದಿದ್ದೇನೆ, ಜೊತೆಗೆ ವಿಧಾನ ಸಭೆಯ ಕಲಾಪಗಳಲ್ಲಿ ನಕ್ಷತ್ರ ಚುಕ್ಕಿ ಹಾಕಿ ಪ್ರಶ್ನೆ ಕೇಳುವ ಮೂಲಕ ಮಂಜೂರಾದ ಕಾಮಗಾರಿಗಳನ್ನುಉಳಿಸಿಕೊಂಡಿದ್ದೇನೆ. ಒಟ್ಟಾರೆ ನಾನು ಬಲವಂತವಾಗಿಯಾದರೂ ಅಥವ ಪ್ರತಿಭಟನೆ ಮೂಲಕವಾದರೂ ಕ್ಷೇತ್ರದ ಜನತೆಗೆ ಒಳ್ಳೆಯದಾಗುವ ಕೆಲಸವನ್ನು ಮಾಡಿದ್ದೇನೆ ಎಂದು ಕ್ಷೇತ್ರದ ಜನತೆ ಹೇಳುತ್ತಾರೆ ಎಂದು ಅವರು ಹೇಳಿದರು.





