Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025

    Play Rummy 500 Online Uk

    November 19, 2025
  • ರಾಜ್ಯ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025

    ಪ್ರತಿಭೆಯಿದ್ದರೆ ಏನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ

    November 16, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜ್ಯ»ಹೊಳಲ್ಕೆರೆ ಮಂಡಲಾಧ್ಯಕ್ಷ ಹಾಗು ಶಾಸಕರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ದೂರು‌ ನೀಡುತ್ತೇನೆ
ರಾಜ್ಯ

ಹೊಳಲ್ಕೆರೆ ಮಂಡಲಾಧ್ಯಕ್ಷ ಹಾಗು ಶಾಸಕರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ದೂರು‌ ನೀಡುತ್ತೇನೆ

D KumaraswamyBy D KumaraswamyDecember 10, 2024No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಹೊಳಲ್ಕೆರೆ ಮಂಡಲಾಧ್ಯಕ್ಷ ಹಾಗು ಶಾಸಕರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ದೂರು‌ ನೀಡುತ್ತೇನೆ

 

 

ಚಿತ್ರದುರ್ಗ: ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಒಂದು ಸಿದ್ದಾಂತವಿದೆ. ಅವರಿಗೆ ಯಾವುದೇ ಸರ್ಫಿಕೇಟ್ ಕೊಡುವುದಿಲ್ಲ. ಜವಾಬ್ದಾರಿ ಕೊಟ್ಟಾಗ ಅದನ್ನು ನಿರ್ವಹಿಸಬೇಕಾಗುತ್ತದೆ. ಇದರಿಂದ ಬಿಜೆಪಿ ಕಾರ್ಯಕರ್ತನಾಗಿ ಯಾವ ಕೆಲಸ ಮಾಡಬೇಕೆಂಬುದನ್ನು ಹೊಳಲ್ಕೆರೆ ಮಂಡಲಾಧ್ಯಕ್ಷ ಸಿದ್ದೇಶ್ ಬಳಿ ಕಲಿಯುವ ಅನಿವಾರ್ಯತೆ ನನಗಿಲ್ಲ ಎಂದು ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಜಯಸಿಂಹ ಖಾಟ್ರೋತ್ ಸಿದ್ದೇಶ್ ಹೇಳಿಕೆಗೆ ಟಾಂಗ್ ನೀಡಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ಸಿದ್ದೇಶ್ ಅವರ ತಾಳಕ್ಕೆ ನಡೆದುಕೊಳ್ಳುವವರನ್ನು ಮಾತ್ರ ಪಾರ್ಟಿ ಕಚೇರಿ ಗೆ ಕರೆಯುತ್ತಾರೆ. ಹತ್ತಿರವಿಟ್ಟುಕೊಳ್ಳುತ್ತಾರೆಂದು ದೂರಿದರು. ರೌಡಿಯಂತೆ ಹಾಗೂ ದೌರ್ಜನ್ಯದಿಂದ ಯಾರು ನಡೆದುಕೊಳ್ಳುತ್ತಾರೆಂಬುದನ್ನು ಅವರೇ ಪತ್ರಿಕಾ ಗೋಷ್ಠಿಯಲ್ಲಿ ಸಾಬೀತು‌ ಪಡಿಸಿಕೊಂಡಿದ್ದಾರೆ. ನನ್ನನ್ನು ರೌಡಿ‌ಶೀಟರ್ ಎಂದು‌ ಆರೋಪ‌ ಮಾಡುತ್ತಾರೆ. ಆದರೆ ನೆರೆ ಬಂದಾಗ 200 ಕ್ವಿಂಟಾಲ್ ಅಕ್ಕಿಯನ್ನು ಸಂತ್ರಸ್ತರಿಗೆ ನೀಡುವ ಸೌಜನ್ಯವನ್ನು‌ ರೌಡಿಗಳು‌ ತೋರುವುದಿಲ್ಲ.ಕೋವಿಡ್ ಸಮಯದಲ್ಲಿ ಹೊಳಲ್ಕೆರೆ ತಾಲೂಕಿನಲ್ಲಿ ಸುಮಾರು 25 ಮೃತ ದೇಹಗಳ ಅಂತ್ಯಕ್ರಿಯೆಯನ್ನು‌ ಮಾಡಿದ್ದೇವೆ. ಸಿದ್ದೇಶ್ ಮನೆಯ ಕೂಗಳತೆಯ ದೂರದಲ್ಲಿ ಒಂದು‌ ಅಂತ್ಯಕ್ರಿಯೆಯ‌ನ್ನು‌ ಮಾಡಿದ್ದು, ಆಗ ಸಿದ್ದೇಶ್ ಹೊರಗೆ ಬಾರದೆ ಮನೆಯಲ್ಲಿ‌ ಬಚ್ಚಿಟ್ಟುಕೊಂಡಿದ್ದರು.ಯುವಕರು ಒಂದು‌ ತಂಡ ಕಟ್ಟಿಕೊಂಡು ಸಮಾಜ ಸೇವೆಯಂತ ಕೆಲಸ ಮಾಡುತ್ತಿದ್ದಾರೆಂದು ಒಳ್ಳೆ ಮಾತಿರಲಿ ಸ್ಮರಿಸಿಕೊಳ್ಳುವ ಒಳ್ಳೆತನವಿಲ್ಲ. ನಂದನ ಹೊಸೂರು, ಹೊರಕೆರೆದೇವರಪುರ, ಮದ್ದೇರು, ಚೀರನಹಳ್ಳಿ, ಕಾಲ್ಕೆರೆ,ಚಿಕ್ಕನಕಟ್ಟೆ, ಐನಹಳ್ಳಿ,ಕಾಗಳಗೆರೆ ಹಾಗೂ ಚಿಕ್ಕಜಾಜೂರು ಹೊಳಲ್ಕೆರೆ‌ ನಗರದಲ್ಲಿ ಅಂತ್ಯಕ್ರಿಯೆಯನ್ನು‌ ಮಾಡಿದ್ದೇವೆ.ನನಗು ಎರಡು‌ ಮಕ್ಕಳಿಗೆ, ನಾನು‌ಮನುಷ್ಯನಲ್ಲವಾ? ನಾನು ಮಾಡುವ ಒಳ್ಳೆ‌ಕೆಲಸಗಳು ಅವರ ಕಣ್ಣಿಗೆ ಕಾಣುತ್ತಿಲ್ಲವೆ? ಆರು ಸಾರಿ ಎಂಎಲ್ ಎ ಆದವರಿಗೆ ನನ್ನಂತ ಒಬ್ಬ ಕಾರ್ಯಕರ್ತ ಒಳ್ಳೆ‌ ಕೆಲಸ‌ಮಾಡುತ್ತಾನೆಂಬ ಭಾವನೆ ಇರಲಿಲ್ಲವೆ ಎಂದು‌ ಪ್ರಶ್ನಿಸಿದರು.ಇದೆಲ್ಲವನ್ನು ಸಹಿಸದೆ,ಹಿಂದೆ ಇದ್ದ ಡಿವೈಎಸ್ಪಿ ಅವರು ಅಪಘಾತ ವಾಗಿದ್ದ ಪ್ರಕರಣವನ್ನುಮರ್ಡರ್ ಕೇಸ್ ನ್ನಾಗಿ‌ ಪ್ರಕರಣ ದಾಖಲು ಮಾಡುತ್ತಾರೆ. ಆದರೆ ಆ ಪ್ರಕರಣ ಇದುವರೆಗೂ ಏನಾಯ್ತು ಎಂದು‌ ಗೊತ್ತಿಲ್ಲ. ಅದು ಆಪಘಾತವಲ್ಲ ಎಂದು ಸಾಬೀತಾದರೆ, ನಾನು ಯಾವುದೇ ಶಿಕ್ಷೆಗೆ ಒಳಪಡಲು‌ ಸಿದ್ದ ಎಂದರು. ಇಂತಹ ಆವ್ಯವಸ್ಥೆ ವಿರುದ್ಧ ನಾನು ಹೋರಾಡಲು ಮುಂದಾದಾಗ ಅವರಿಗೆ ಕಪ್ಪು ಚುಕ್ಕೆ ಬರಯತ್ತದೆಂಬ ಕಾರಣಕ್ಕೆ ನನ್ನ ಮೇಲೆ ರೌಡಿ ಶೀಟರ್ ತೆರೆದಿದ್ದಾರೆಂದರು.ನಾನು ರಾಷ್ಟ್ರೀಯ ವಾದಿ, ಹಿಂದೂ ಕಾರ್ಯಕರ್ತ, ಇತ್ತೀಚಿನ ದಿನಗಳಲ್ಲಿ‌ ನನ್ನ ಮೇಲೆ ಜಿಹಾದಿ ವಿಷಯದಲ್ಲಿ ಹಲ್ಲೆಯಾಗಿದೆ.ಇದರ ಪ್ರಕರಣವು ಠಾಣೆಯಲ್ಲಿ ದಾಖಲಾಗಿದೆ. ನಾನು ರೌಡಿಯಾಗಿದ್ದರೆ, ಇಂತಹ ಮಹಿಳೆಯನ್ನು ರಕ್ಷಿಸುವ ಕೆಲಸ ಮಾಡುತ್ತಿರಲಿಲ್ಲ.ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದು,ನಮ್ಮ ಮೇಲೆ ಕೆಟ್ಟ ಪದಗಳನ್ನು ಬಳಸಿಕೊಲೆ ಮಾಡುತ್ತೇವೆ ಎಂಬ ಬೆದರಿಕೆಗೆ ನಾನು‌ ಬಗ್ಗುವುದಿಲ್ಲ. ನನ್ನ ಮೇಲೆ ಹಲ್ಲೆ ಮಾಡುವುದಕ್ಕೆ ಪ್ರಚೋದನೆ ನೀಡುವಂತದ್ದು,ಇಂತವುಗಳು ನಮ್ಮ ಬಳಿ‌ ನಡೆಯೋದಿಲ್ಲ. ನಿಮಿಗಿರುವ. ಜವಾಬ್ದಾರಿಯನ್ನು ಅರಿತು ಜವಾಬ್ದಾರಿ ಭಾಷೆಯನ್ನು ಬಳಸಬೇಕೆಂದು ಸಿದ್ದೇಶ್ ಗೆ ಸಲಹೆ ನೀಡಿದರು.ಜೊತೆಗೆ ಸಿದ್ದೇಶ್ ಅವರನ್ನು ಭಾರತೀಯ ಜನತಾ ಪಕ್ಷದಿಂದ ಉಚ್ಛಾಟನೆ ಮಾಡಬೇಕು.ಮಾಡಿದ್ದರೆ, ಹೊಳಲ್ಕೆರೆ ಗಣಪತಿ ದೇವಸ್ಥಾನದಿಂದ ಕಾಲ್ನಡಿಗೆ ಜಾಥ ಮಾಡುತ್ತೇನೆ.ನಾನು ಉಪಾಧ್ಯಕ್ಷನಾಗಿದ್ದಾಗಲೇ ನನ್ನ ಮೇಲೆ ಇದೇ ಬಿಜೆಪಿ ಶಾಸಕರಿಂದ ಪ್ರಕರಣವನ್ನು ದಾಖಲಿಕೊಂಡಿದ್ದನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇನೆ. ನನಗೂ ರಾಷ್ಟ್ರೀಯ ನಾಯಕರ ಪರಿಚಯವಿದೆ ಎಂದರು. ಸಿದ್ದೇಶ್ ಮತ್ತು ಶಾಸಕ ಚಂದ್ರಪ್ಪ ನನ್ನ ವಿರುದ್ದ ಸುಳ್ಳು ಕೇಸ್ ದಾಖಲಿಸಿದ್ದನ್ನು ದಾಖಲೆ ಸಹಿತ ಅವರ ಗಮನಕ್ಕೆ ತರುತ್ತೇನೆ.ನನ್ನ ಕಾರ್ಯಕರ್ತನನ್ನು ಬಲಿಪಶು ಮಾಡುತ್ತಿದ್ದು, ದೂರು ನೀಡುತ್ತೇನೆ ಎಂದರು.

Share. Facebook Twitter Pinterest LinkedIn Tumblr WhatsApp Email
Previous Articleಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಿಜೆಪಿ ಮುಖಂಡರು
Next Article ಹೊಳಲ್ಕೆರೆ ವಡೇರಹಳ್ಳಿ ಕೆರೆ ಅಭಿವೃದ್ದಿಯಲ್ಲಿ ಅವ್ಯವಹಾರ ನಡೆದಿದೆ
D Kumaraswamy
  • Tumblr

Related Posts

ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

December 3, 2025

ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

November 30, 2025

ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

November 26, 2025

ಛಲವಿದ್ದರೆ ಏನಾದರೂ ಸಾಧಿಸಬಹದು

November 17, 2025
Leave A Reply Cancel Reply

Recent Posts
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
  • Skrill Casino 5 Pounds
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.