ಪ್ರತಿಭಾನ್ವಿತರನ್ನು‌ಗುರುತಿಸಿ ಸನ್ಮಾನಿಸಿದರೆ ಹುಮ್ಮಸ್ಸು ಇಮ್ಮಡಿಸುತ್ತದೆ

ರಾಜ್ಯ

  1.  
  2.  

ಚಿತ್ರದುರ್ಗ: ಯಾವುದೇ ಕ್ಷೇತ್ರವಿರಲಿ ಉತ್ತಮ ಕೆಲಸ ಮಾಡುತ್ತಿರುವ ಮತ್ತು ಪ್ರತಿಭಾನ್ವಿತರನ್ನ ಪತ್ತೆ ಮಾಡಿ ಅಭಿನಂದನೆ ಅಥವಾ ಸನ್ಮಾನಿಸುವುದರಿಂದ ಇದರಿಂದ ಹುಮ್ಮಸ್ಸು ಇಮ್ಮಡಿಸಿ, ಅವರಿಂದ ಮತ್ತಷ್ಟು ಸೇವೆಯನ್ನ ಸಮಾಜ ನಿರೀಕ್ಷಿಸಬಹುದೆಂದು ಯೋಗಾಚಾರ್ಯ ಎಲ್.ಎಸ್. ಚಿನ್ಮಯಾನಂದ ಅಭಿಪ್ರಾಯಪಟ್ಟರು.

 

 

ಅವರು ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ನಗರದ ರೋಟರಿ ಬಾಲವನದಲ್ಲಿ ಇಂದು ಇತ್ತೀಚಿಗೆ ನಡೆದ ಸರ್ಕಾರಿ ನೌಕರರ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಯೋಗಾ ಪ್ರಶಿಕ್ಷಣಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿ, ಕೆ.ಟಿ. ತಿಮ್ಮಾರೆಡ್ಡಿ ಹಾಗೂ ವಿಮಲಾಕ್ಷಿ ಅವರು ನಮ್ಮ ಯೋಗ ತರಬೇತಿ ಸಂಸ್ಥೆಯಲ್ಲಿ ನಿತ್ಯವೂ ತರಬೇತಿ ಪಡೆಯುವ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ಹೊಣೆಗಾರಿಕೆ ನಮ್ಮ ಸಂಸ್ಥೆಯದಾಗಿದ್ದರಿಂದ ಈ ಕಾರ್ಯವನ್ನು ಮಾಡಬೇಕಾಗಿದೆ. ದಿನದ 24 ಗಂಟೆಗಳಲ್ಲಿ ವಹಿಸಿಕೊಂಡ ಕೆಲಸಗಳನ್ನು ನಿರ್ವಹಿಸಿ ಸಾರ್ಥಕ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಗೌರವ ಅಭಿನಂದನೆ ಸ್ವೀಕರಿಸಿ ಮಾತಾಡಿದ ಕೆ. ಟಿ. ತಿಮ್ಮಾರೆಡ್ಡಿ, ಸರ್ಕಾರಿ ನೌಕರರ ಪ್ರತಿನಿಧಿಯಾಗಿ ಆಯ್ಕೆಯಾದ ನನಗೆ ಈ ಗೌರವ ಜವಾಬ್ದಾರಿ ಹೆಚ್ಚಿಸಿದೆ. ಇಲಾಖೆಯ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಬೇಕಾಗುತ್ತದೆ. ಸಾರ್ವಜನಿಕ ಕೆಲಸದಲ್ಲಿರುವವರಿಗೆ ನಮ್ಮ ಸ್ವಂತ ಮನೆಯ ಕೆಲಸಗಳ ಕಡೆಗೂ ಆದ್ಯತೆ ನೀಡಬೇಕಾಗುತ್ತದೆ.ಎರಡೂ ಕಡೆ ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿಯುತ ನಡೆಯಾದಾಗ ನ್ಯಾಯ ಒದಗಿಸಿದಂತಾಗುತ್ತದೆಂದರು.ಮತ್ತೋರ್ವ ನಿರ್ದೇಶಕರಾಗಿ ಆಯ್ಕೆಯಾದ ವಿಮಲಾಕ್ಷಿ ಮಾತನಾಡಿ,ಈಗ ಚುನಾವಣೆಯಲ್ಲಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಸ್ಪರ್ಧಿಸಿದ ಎಲ್ಲರೂ ಗೆದ್ದೇ ಗೆಲ್ಲಬೇಕೆಂಬ ವಿಶ್ವಾಸದಲ್ಲಿ ಇರುತ್ತಾರೆ. ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಗುರುತಿಸಿದ ಕಾರಣ ನಾನು ಎರಡನೇ ಹಂತದಲ್ಲಿ ಗೆದ್ದೆ ಎಂದು ವಿನೀತ ಹಾಗೂ ಅಭಿಮಾನದಿಂದ ಹೇಳುತ್ತೇನೆ. ನಾನು ಯೋಗ ತರಬೇತಿ ಶಾಲೆಯಲ್ಲಿ ಏಕಾಗ್ರತೆ ,ಬದ್ಧತೆ, ಶಿಸ್ತಿನ ಹಾಗೆ ಛಲ ಕಲಿತ ಕಾರಣ ಚುನಾವಣೆಗೆ ನಿಂತೆ ಎಂದ ಅವರು ಬಹಳ ಜನ ತುಳಿಯಲೇಬೇಕೆಂದಾಗ ಬೆಳೆಯಬೇಕೆಂಬ ಹಠ ಬರುತ್ತದೆ. ಅದು ನಮ್ಮ ದೈನಂದಿನ ಚಟುವಟಿಕೆಗಳಿಂದ ಸಾಧ್ಯ. ಅದು ನಾವು ನಿತ್ಯ ಯೋಗ ಸಾಧನೆ ಮಾಡಿದರೆ ಪ್ರಾಪ್ತವಾಗುತ್ತದೆ ಎಂದರು.ನನ್ನ ಮೇಲೆ ಜವಾಬ್ದಾರಿ ಇದೆ. ಅದನ್ನ ನಿಭಾಯಿಸಲು ನನ್ನ ಕೈಲಾಸದ ಪ್ರಯತ್ನ ಮಾಡುವುದಾಗಿ ಹೇಳಿದರು.
ಚುನಾವಣೆ ಎನ್ನುವುದು ಜವಾಬ್ದಾರಿಯುತ ಹೊಣೆಗಾರಿಕೆಯಾಗಿದ್ದು,ಅದನ್ನ ಸರಿಯಾದ ಕ್ರಮದಲ್ಲಿ ನಡೆಯುವಂತಾಗಬೇಕೆಂದರು. ಈ ಸಮಯದಲ್ಲಿ ಟಿ. ವೀರಭದ್ರಸ್ವಾಮಿ ಮುಕುಂದರಾಜ್, ಸುರಯ್ಯ,ಚಂದ್ರಶೇಖರ್,ನಿರ್ಮಲದಂಪತಿ, ಕವಿತಾ,ರುಕ್ಮಿಣಿ,ನಾಗರತ್ನ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *