ಲಾರಿ ಮತ್ತು ಕಾರಿನ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಹಿರಿಯೂರಿನ ಹಿಂಡಸಕಟ್ಟೆ ಬಳಿ ನಡೆದಿದೆ. ಮೃತರನ್ನು ನಂಜಯ್ಯನ ಕೊಟ್ಟಿಗೆ ಗ್ರಾಮದ ನಂಜುಂಡಿ,ವಿಶ್ವನಾಥ್ ರಾಹುಲ್ ಮತ್ತು ಯಶ್ವಂತ್ ಎಂದು ಗುರುತಿಸಲಾಗಿದೆ. ಲಾರಿಡಿಕ್ಕಿ ಹೊಡೆದ ರಭಸಕ್ಕೆ ಕಾರು ನುಜ್ಜುಗಜ್ಜಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





