ಹೊಸದುರ್ಗದ ಅಜ್ಜಯ್ಯನಹಟ್ಟಿಯಲ್ಲಿ ದೇವಸ್ಥಾನದ ಪೂಜಾರಿಕೆ ವಿಷಯಕ್ಕೆ ಒಂದೆ ಸಮುದಾಯದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಮಾಸುವ ಮುನ್ನವೇ ಇಂದು ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಸರಿಯಾಗಿ ಮಾಡಿಲ್ಲ ಎಂದು ದೂರು ಕೊಟ್ಟ ಹಿನ್ನೆಲೆಯಲ್ಲಿ ಮಂಜುನಾಥ್ ಎನ್ನುವ ಯುವಕನಿಗೆ ಚೀಲ ಕೊಲೆಯುವ ದಬ್ಬಳದಿಂದ ತಲೆಗೆ ಚುಚ್ಚಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಹೊಸದುರ್ಗದ ಮಾಡದಕೆರೆಯಲ್ಲಿ ನಡೆದಿದೆ. ಮಸ್ತಿಹಳ್ಳಿಯಿಂದ ಜನರನ್ನು ಕರೆಸಿ ಯುವಕ ಮಂಜುನಾಥ್ ಎನ್ನುವವನ ಮೇಲೆ ಕಬ್ಬಿಣದ ದಬ್ಬಳ ಹಾಗು ಇತರೇ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲಾಗಿದ್ದು, ವಿಷಯ ತಿಳಿಸಿದ ಹೊಸದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವಿಷಯ ತಿಳಿದ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ದೌರ್ಜನ್ಯ ಹೆಚ್ಚಾಗಿದೆ. ವಿರೋಧ ಪಕ್ಷದ ಕಾರ್ಯಕರ್ತರು ಬದುಕು ಹಾಗಿಲ್ಲ. ಅರಾಜಕತೆ ಸೃಷ್ಠಿಯಾಗಿದೆ. ಹೊಡೆದಾಟ, ಬಡಿದಾಟ ದೌರ್ಜನ್ಯ ನಡೆಯುತ್ತಿವೆ. ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟಬೇಕಿದೆ ಎಂದು ಬೇಸರ ವ್ಯಕ್ತಪಡಿಸುವ ಮೂಲಕ ಖಂಡಿಸಿದ್ದಾರೆ.





